Spiritual: ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಹಲವಾರು ಊಹಾಪೋಹಗಳಿದೆ. ಕೆಲವೊಂದು ಸತ್ಯವೂ ಆಗಿದೆ. ಆದ್ದರಿಂದಲೇ, ಹಿರಿಯರು ಹಲ್ಲಿ ಮುಟ್ಟಿದರೆ ಕೈ ಕಾಲು ತೊಳೆದು, ದೇವರಿಗೆ ನಮಸ್ಕರಿಸಬೇಕು. ಹಲ್ಲಿ ತಲೆಯ ಮೇಲೆ ಬಿದ್ದರೆ, ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಬೇಕು ಎಂದು ಹೇಳುತ್ತಾರೆ. ಹಾಗಾಗಿ ನಾವಿಂದು ಹಲ್ಲಿ ಶಕುನದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಿದ್ದೇವೆ.
ಯಾರಾದರೂ ಮಾತನಾಡುವಾಗ, ಹಲ್ಲಿ ಲೊಚಗುಟ್ಟಿದರೆ, ಅದು ಸತ್ಯವಾಗುತ್ತದೆ ಅಂತಾ ಹೇಳುತ್ತಾರೆ. ಅಲ್ಲದೇ, ನೆತ್ತಿಯ ಮೇಲೆ ಹಲ್ಲಿ ಬಿದ್ದರೆ, ಸಾವು ಸಂಭವಿಸುತ್ತದೆ ಅಂತಲೂ ಕೆಲವರು ಹೇಳುತ್ತಾರೆ. ಹಲ್ಲಿ ಶಾಸ್ತ್ರದ ಪ್ರಕಾರ, ಹಲ್ಲಿಗಳಿಗೆ ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ಗೊತ್ತಿರುತ್ತದೆಯಂತೆ. ಹಾಗಾಗಿ ಅವುಗಳು ಕೆಲ ಸೂಚನೆಗಳನ್ನು ನೀಡುತ್ತದೆ.
ಹಲ್ಲಿಗಳು ಜಗಳವಾಡುತ್ತಿದ್ದರೆ, ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ನಿಮ್ಮ ಗೆಳೆಯರೊಂದಿಗೆ ಜಗಳವಾಗುತ್ತದೆ ಎಂಬುದು ಇದರ ಸೂಚನೆ. ಅಲ್ಲದೇ, ನೀವು ಎಲ್ಲರೊಂದಿಗೂ ತಾಳ್ಮೆಯಿಂದ ವರ್ತಿಸಬೇಕು ಎಂಬುದೇ ಇದರ ಸೂಚನೆಯಾಗಿರುತ್ತದೆ. ಇನ್ನು ನೀವು ಯಾವುದಾದರೂ ಕೆಲಸಕ್ಕೆ ಹೋಗುವಾಗ, ಹಲ್ಲಿ ಕೀಟವನ್ನು ಬೇಟೆಯಾಡಿದ್ದು ಕಂಡಲ್ಲಿ, ನೀವು ಅಂದುಕೊಂಡ ಕೆಲಸ ನೆರವೇರುತ್ತದೆ ಎಂದರ್ಥ.
ಪದೇ ಪದೇ ಹಲ್ಲಿ ಲೊಚಗೂಡುತ್ತಿದೆ ಎಂದರೆ, ಮನೆಯಲ್ಲಿ ಜಗಳವಾಗುತ್ತದೆ ಎಂಬ ಸೂಚನೆ ಸಿಕ್ಕಂತೆ. ಅಥವಾ ಆಫೀಸಿನ ಕೆಲಸದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಇನ್ನು ಮನೆಯಲ್ಲಿ ಹಲ್ಲಿ ಸತ್ತುಬಿದ್ದರೆ, ಅದನ್ನು ಬೇಗ ಹೊರಹಾಕಿ. ಇಲ್ಲದಿದ್ದಲ್ಲಿ, ಮನೆಮಂದಿಗೆ ರೋಗ ರುಜಿನ ತಗುಲುವ ಸಾಧ್ಯತೆ ಇರುತ್ತದೆ.
ಕೇರಳದ ತ್ರಿಶೂರಿನಲ್ಲಿರುವ ರೊಬೋಟಿಕ್ ಆನೆ ಬಗ್ಗೆ ಇಲ್ಲಿದೆ ನೋಡಿ ಪುಟ್ಟ ಮಾಹಿತಿ..
ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ