Health Tips: ಹಲವರಿಗೆ ಕ್ಯಾನ್ಸರ್ ಕೊನೆಯ ಸ್ಟೇಜ್‌ಗೆ ಬಂದಾಗಲೇ, ತಮಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತದೆ. ಅಪರೂಪಕ್ಕೆ ಕೆಲವರು ಹೆಲ್ತ್ ಚೆಕಪ್ ಮಾಡಿಸಿದಾಗ, ಕ್ಯಾನ್ಸರ್‌ನ ಮೊದಲ ಸ್ಟೇಜ್ ಬಗ್ಗೆ ಗೊತ್ತಾಗುತ್ತದೆ. ಹಾಗಾದ್ರೆ ಕ್ಯಾನ್ಸರ್ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ..
ಪುರುಷರಿಗೆ ಹೆಚ್ಚಾಗಿ ಲಿವರ್ ಕ್ಯಾನ್ಸರ್ ಬರುತ್ತದೆ. ಹೆಣ್ಣು ಮಕ್ಕಳಿಗೆ ಬ್ರೀಸ್ಟ್ ಕ್ಯಾನ್ಸರ್ ಬರುತ್ತದೆ. ದೇಹದಲ್ಲಿ ನಾರ್ಮಲ್ ಸೆಲ್ಸ್ ಇರುತ್ತದೆ. ಇದು ನಮ್ಮ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ. ಆದರೆ ಅಬ್ನಾರ್ಮಲ್ ಸೆಲ್ಸ್ ಹುಟ್ಟಿಕೊಂಡಾಗಲೇ, ನಮಗೆ ಕ್ಯಾನ್ಸರ್ ಬರೋದು. ಈ ಕ್ಯಾನ್ಸರ್ ಸೆಲ್ಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಮನುಷ್ಯನ ಆರೋಗ್ಯ ಹದಗೆಡುತ್ತ ಹೋಗುತ್ತದೆ. ಹಾಗಾಗಿ ಮೊದಲ ಸ್ಟೇಜ್‌ನಲ್ಲೇ ಕ್ಯಾನ್ಸರ್ ಸೆಲ್ಸ್ ಸಂಖ್ಯೆ ಹೆಚ್ಚಾಗದಂತೆ, ತಡೆಯಲು ಚಿಕಿತ್ಸೆ ಪಡೆಯಬೇಕು.
ಇನ್ನು ಕ್ಯಾನ್ಸರ್ ಲಕ್ಷಣಗಳೇನು ಅಂತಾ ನೋಡುವುದಾದರೆ, ಅನ್ನನಾಳದಲ್ಲಿ ತೊಂದರೆಯಾಗುತ್ತದೆ. ಆಗ ಊಟ ಮಾಡುವಾಗ, ಗಂಟಲಲ್ಲಿ ಬೇನೆ ಕಾಣಿಸಿಕೊಳ್ಳುತ್ತದೆ. ಹೊಟ್ಟೆನೋವಾಗುತ್ತದೆ. ಮಲ ವಿಸರ್ಜನೆ ಮಾಡುವಾಗ, ತೊಂದರೆಯಾಗುತ್ತದೆ. ದೇಹದ ಕೆಲ ಭಾಗಗಳಲ್ಲಿ ಗಡ್ಡೆಗಳು ಬೆಳೆಯುತ್ತದೆ. ಇಂಥ ಲಕ್ಷಣಗಳು ಕಂಡು ಬಂದಲ್ಲಿ, ಆದಷ್ಟು ಬೇಗ ವೈದ್ಯರ ಬಳಿ ಹೋಗಿ, ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1
ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2