Health Tips: ಗರ್ಭಾವಸ್ಥೆಯಲ್ಲಿದ್ದಾಗ ಹೆಣ್ಣು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾಳೆ. ತೂಕ ಹೆಚ್ಚಳವಾಗುವುದು. ವಾಕರಿಕೆ ಬರುವುದು. ಪರಿಮಳವೂ ವಾಸನೆಯಂತೆ ಅಸಹ್ಯ ಹುಟ್ಟಿಸುವುದು. ಕಾಲಿನಲ್ಲಿ ನೀರು ತುಂಬಿಕೊಳ್ಳುವುದು ಹೀಗೆ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಾಳೆ. ಇದರೊಂದಿಗೆ ವೈಟ್ ಡಿಸ್ಚಾರ್ಜ್ ಸಮಸ್ಯೆ ಕೂಡ ಒಂದು. ಹಾಗಾದ್ರೆ ಈ ಸಮಸ್ಯೆ ಯಾಕಾಗುತ್ತದೆ..? ಇದು ಸಹಜನಾ..? ಅಸಹಜನಾ ಅಂತಾ ತಿಳಿಯೋಣ ಬನ್ನಿ..
ಪ್ರತೀ ಗರ್ಭಿಣಿಗೂ ವೈಟ್ ಡಿಸ್ಚಾರ್ಜ್, ಅಂದ್ರೆ ಬಿಳಿ ಪದರ ಹೋಗುವುದು ಸಹಜ. ಆದರೆ ಇದು ಅತೀ ಹೆಚ್ಚಾಗುವುದು, ವಾಸನೆ ಬರುವಷ್ಟು ಬಿಳಿ ಪದರ ಹೋಗುತ್ತಿದ್ದರೆ, ಅದಕ್ಕಾಗಿ ವೈದ್ಯರನ್ನ ಖಂಡಿತ ಭೇಟಿ ಮಾಡಲೇಬೇಕು. ಇದನ್ನು ನಿರ್ಲಕ್ಷ್ಯ ಮಾಡಿದ್ದಲ್ಲಿ, ಮುಂದೆ ಇದೊಂದು ದೊಡ್ಡ ತೊಂದರೆಯಾಗಬಹುದು. ತಾಯಿ ಮಗು ಇಬ್ಬರಿಗೂ ಇದರಿಂದ ಅಪಾಯವಾಗುವ ಸಾಧ್ಯತೆ ಇದೆ.
ಹಾಗಾಗಿ ವೈಟ್ ಡಿಸ್ಚಾರ್ಜ್ ನಾರ್ಮಲ್ ಆಗಿದ್ದರೆ ಓಕೆ. ಅತೀ ಹೆಚ್ಚಾಗುತ್ತಿದೆ. ಪ್ಯಾಡ್ ಬಳಸುವಷ್ಟು ವೈಟ್ ಡಿಸ್ಚಾರ್ಜ್ ಹೋಗುತ್ತಿದೆ. ವಾಸನೆ ಬರುತ್ತಿದೆ. ಅದರ ಬಣ್ಣ ಹಳದಿಯಾಗಿದೆ ಎಂದಲ್ಲಿ, ಅಂಥವರು ಖಂಡಿತವಾಗಿ ವೈದ್ಯರನ್ನ ಸಂಪರ್ಕಿಸಬೇಕು. ಕೆಲವರಿಗೆ ಈ ವೇಳೆ ಆ ಸ್ಥಳದಲ್ಲಿ ರಕ್ತ ಬರುವಷ್ಟು ತುರಿಕೆಯಾಗುತ್ತದೆ. ನೋವಾಗುತ್ತದೆ. ಇದನ್ನು ಹಾಗೆ ಬಿಟ್ಟರೆ ಮೂತ್ರನಾಳದ ಸೋಂಕಾಗುತ್ತದೆ. ಹಾಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗಿದೆ.
ನೀವು ವೈದ್ಯರು ಸೂಚಿಸುವ ಸೋಪ್, ಜೆಲ್ ಬಳಸಿ, ಆ ಸ್ಥಳವನ್ನು ಕ್ಲೀನ್ ಮಾಡಿಕೊಳ್ಳಬೇಕು. ನಿಮ್ಮ ಒಳವಸ್ತ್ರವನ್ನು ಬಿಸಿ ನೀರಿನಲ್ಲಿ, ಸ್ವಚ್ಛವಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಿದರೆ ಒಳ್ಳೆಯದು. ಇದರಿಂದ ಒಳ ಉಡುಪು ಸ್ವಚ್ಛವಾಗಿ, ಬ್ಯಾಕ್ಟಿರಿಯಾ ಇಲ್ಲದಂತೆ ಇರುತ್ತದೆ.
ಮುಟ್ಟು ಮುಂದೂಡಲು ಪದೇ ಪದೇ ಮಾತ್ರೆ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ..?