Health Tips: ಹಲವು ಜನಪ್ರಿಯ ವ್ಯಕ್ತಿಗಳು ಮಾನ ಹಾನಿಗೆ ಹೆದರಿ, ಅಥವಾ ಯಾವುದೇ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ, ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಕೇಳಿರುತ್ತೇವೆ. ಹಾಗಾದ್ರೆ ಜನಪ್ರಿಯತೆಗೂ ಸ್ವಹಾನಿಗೂ ಏನು ಸಂಬಂಧ ಅನ್ನೋ ಬಗ್ಗೆ ವೈದ್ಯರಾದ ಡಾ.ಶ್ರೀಧರ್ ವಿವರಿಸಿದ್ದಾರೆ.
ಹೆಚ್ಚಾಗಿ ಸಿನಿಮಾ ನಟ, ನಟಿಯರು ಈ ರೀತಿ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ, ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚು. ಮೊದ ಮೊದಲು ನಟನೆ, ಸಂಗೀತ, ನೃತ್ಯ ಇತ್ಯಾದಿ ಕಲೆಯನ್ನು ಮೈಗೂಡಿಸಿಕೊಂಡು, ತಮ್ಮ ಟ್ಯಾಲೆಂಟ್ ತೋರಿಸುವವರು, ಬಳಿಕ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸುತ್ತಾರೆ. ಬಳಿಕ ಸಿನಿಮಾ ಜೀವನ ಮತ್ತು ವೈಯಕ್ತಿಕ ಜೀವನವನ್ನು ಒಟ್ಟುಗೂಡಿಸಿಬಿಡುತ್ತಾರೆ. ವೈಯಕ್ತಿಕ ವಿಷಯಗಳು ಹೊರಗೆ ಬಂದಾಗ, ಅದರಿಂದ ಎಲ್ಲಿ ಮಾನಹಾನಿಯಾಗುತ್ತದೆಯೋ ಎಂದು ಹೆದರಿ, ಆತ್ಮಹತ್ಯೆಗೆ ಶರಣಾಗುತ್ತಾರೆ.
ಏಕೆಂದರೆ, ಸೆಲೆಬ್ರಿಟಿ ಆದ ಬಳಿಕ, ಅವರ ಪ್ರೈವೆಸಿ ಬಿಟ್ಟುಹೋಗುತ್ತದೆ. ಆಗ ಅವರು ಪಬ್ಲಿಕ್ ಪ್ರಾಪರ್ಟಿಯಾಗುತ್ತಾರೆ. ಹಾಗಾಗಿ ಅವರ ವೈಯಕ್ತಿಕ ವಿಚಾರದ ಬಗ್ಗೆ ಜನ ಮಾತನಾಡಿಕೊಳ್ಳುವಂತಾಗುತ್ತದೆ. ಅಲ್ಲದೇ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಮುಂದುವರಿದಿದ್ದು, ಟ್ರೋಲರ್‌ಗಳ ಕಿರಿಕಿರಿಯೂ ಹೆಚ್ಚಾಗಿದೆ. ತೀರಾ ಕೆಟ್ಟದಾಗಿ ಟ್ರೋಲ್ ಮಾಡಿದ್ದ ಕಾರಣಕ್ಕಾಗಿಯೂ, ಹಲವರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1
ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2




