ರಕ್ಷಾಬಂಧನದ ಮಹತ್ವವೇನು..? ಯಾಕೆ ಈ ಹಬ್ಬವನ್ನು ಆಚರಿಸುತ್ತಾರೆ..?

Spiritual: ಶ್ರಾವಣ ಮಾಸದ ಹುಣ್ಣಿಮೆಯಂದು ಬರುವ ಹಬ್ಬವೇ ರಕ್ಷಾಬಂಧನ. ಇದನ್ನು ನೂಲು ಹುಣ್ಣಿಮೆ ಎಂದು ಕರೆಯುತ್ತಾರೆ. ರಕ್ಷಾ ಬಂಧನದಂದು ಸಹೋದರಿಯಾದವಳು, ಸಹೋದರನಿಗೆ ರಾಖಿ ಕಟ್ಟಿ, ಆರತಿ ಮಾಡಿ, ಸಿಹಿ ತಿನ್ನಿಸುತ್ತಾಳೆ. ಮತ್ತು ಸಹೋದರ ಆಕೆಗೆ ಉಡುಗೊರೆ ನೀಡುತ್ತಾನೆ. ಹಾಗಾದರೆ ಯಾಕೆ ರಾಖಿ ಹಬ್ಬವನ್ನು ಆಚರಿಸುತ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಪೌರಾಣಿಕ ಕಥೆಯ ಬಗ್ಗೆ ನೋಡುವುದಾದರೆ, ಶಿಶುಪಾಲನನ್ನು ಕೊಲ್ಲುವಾಗ, ಶ್ರೀಕೃಷ್ಣ ಕೈಗೆ ಗಾಯವಾಗುತ್ತದೆ. ರಕ್ತ ಹರಿಯುತ್ತದೆ. ಆ ರಕ್ತವನ್ನು ತಡೆಯಲು ದ್ರೌಪದಿ, ತನ್ನ ಸೀರೆಯ ಅಂಚನ್ನು ಕತ್ತರಿಸಿ, ಶ್ರೀಕೃಷ್ಣನ ಕೈಗೆ ಕಟ್ಟುತ್ತಾಳೆ. ಆಕೆಯ ಸಹೋದರ ಪ್ರೀತಿಯನ್ನು ಕಂಡು ಶ್ರೀಕೃಷ್ಣ, ಸದಾ ಆಕೆಯ ರಕ್ಷಣೆಗೆ ಮುಂದಾಗಿರುತ್ತಾನೆ. ಹಾಗಾಗಿಯೇ ಆಕೆ ವಸ್ತ್ರಾಪಹರಣದ ವೇಳೆ ಕೃಷ್ಣಾ ಎಂದಾಗ, ಶ್ರೀಕೃಷ್ಣ ಆಕೆಯ ರಕ್ಷಣೆ ಮಾಡಿದ್ದ.

ಇದರೊಂದಿಗೆ ಹಲವು ಕಥೆಗಳಿದೆ, ಹಿಂದಿನ ಕಾಲದಲ್ಲಿ ರಾಣಿಯರು ತಮ್ಮ ರಾಜ ಮತ್ತು ರಾಜ್ಯವನ್ನು ಕಾಪಾಡಿಕೊಳ್ಳಲು, ಆಕ್ರಮಣಕ್ಕೆ ಬಂದ ವಿರೋಧಿಗಳಿಗೆ ರಾಖಿ ಕಟ್ಟುತ್ತಿದ್ದರು. ಮತ್ತು ನೀವು ನಮ್ಮ ಸಹೋದರರಂತೆ ಎಂದು ಅವರನ್ನು ಪ್ರೀತಿಯಿಂದ ಕಟ್ಟಿ ಹಾಕುತ್ತಿದ್ದರು. ಮನುಷ್ಯತ್ವ ಉಳ್ಳವರು, ಇವರ ಸಹೋದರ ಪ್ರೀತಿಗೆ ಬೆಲೆ ಕೊಟ್ಟು, ಯುದ್ಧ ಮಾಡದೇ ಹಿಂದಿರುಗುತ್ತಿದ್ದರು. ರಾಖಿಯನ್ನು ಸಹೋದರ ಸಹೋದರಿಯ ಪ್ರೀತಿಯ ಬಂಧವೆಂದು ಹೇಳಲಾಗುತ್ತದೆ. ರಾಖಿ ಕಟ್ಟಿದ ಸಹೋದರಿಯ ರಕ್ಷಣೆಗೆ ಸಹೋದರ ಸದಾ ಸಿದ್ಧನಾಗಿರುತ್ತಾನೆ ಎಂಬುದೇ ಈ ಹಬ್ಬದ ಅರ್ಥ.

ಈ 6 ಸ್ಥಳದಲ್ಲಿ ರುದ್ರಾಕ್ಷಿ ಧರಿಸಿ, ಓಡಾಡಬಾರದು..

ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆ..

ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?

About The Author