Sunday, September 8, 2024

Latest Posts

ಬಿಲ್ ಗೇಟ್ಸ್ ಶ್ರೀಮಂತನಾಗಲು ಕಾರಣವೇನು..? ಸಫಲತೆಯ ಹಿಂದಿನ ದಾರಿ..

- Advertisement -

Business Tips: ಬಿಲ್ ಗೇಟ್ಸ್. ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ಉದ್ಯಮಿ ಎನ್ನಿಸಿಕೊಂಡವರು. ಬಿಲ್ ಗೇಟ್ಸ್, ಸಾಫ್ಟವೇರ್ ನಲ್ಲಿ ಹೆಚ್ಚಿ ಆಸಕ್ತಿ ಹೊಂದಿದ್ದು, ಮೈಕ್ರೋಸಾಫ್ಟ್ ಎಂಬ ಕಂಪನಿ ಶುರು ಮಾಡಿ, ಗೆದ್ದವರು. ಇಂದು ನಾವು ಬಿಲ್ ಗೇಟ್ಸ್ ಜೀವನದ ಬಗ್ಗೆ ವಿವರಿಸಲಿದ್ದೇವೆ.

ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ತಪ್ಪು. ಹಾಗಾಗಿ ನಿಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಿ. ನಿಮ್ಮನ್ನು ನೀವು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬೇಡಿ. ಇದು ನಿಮಗೆ ನೀವು ಮಾಡಿಕೊಳ್ಳುವ ಅಪಮಾನ. ಜೀವನ ಎಷ್ಟೇ ಸಣ್ಣದಾಗಿರಲಿ, ನೀವು ಸಮಯ ವ್ಯರ್ಥ ಮಾಡುತ್ತಿದ್ದರೆ, ಜೀವನ ಇನ್ನೂ ಚಿಕ್ಕದಾಗುತ್ತದೆ. ಈ ಮಾತುಗಳನ್ನು ಹೇಳಿದವರು, ಕೋಟ್ಯಾಧೀಶ್ವರ ಬಿಲ್ ಗೇಟ್ಸ್. ಮೈಕ್ರೋಸಾಫ್ಟ್‌ ಕಂಪನಿಯ ಮಾಲೀಕ ಬಿಲ್ ಗೇಟ್ಸ್ ಹುಟ್ಟು ಶ್ರೀಮಂತನಲ್ಲ. ಆದರೆ ವಿದ್ಯಾಭ್ಯಾಸಕ್ಕೇನೂ ಕೊರತೆ ಇರಲಿಲ್ಲ. ತಂದೆ ಲಾಯರ್ ಆದ ಕಾರಣ, ಮಗನ ವಿದ್ಯಾಭ್ಯಾಸ ಅತ್ಯುತ್ತಮವಾಗಿ ನಡೆಯುತ್ತಿತ್ತು.

ಆದರೆ ತಂದೆಯ ಆಸೆ ಬೇರೆಯೇ ಇತ್ತು. ಮಗನ ಆಸೆ ಬೇರೆಯಾಗಿತ್ತು. ತಂದೆಗೆ ಮಗ ದೊಡ್ಡ ಕಾಲೇಜಿನಲ್ಲಿ ಕಲಿತು, ತನಗಿಂತ ದೊಡ್ಡ ಲಾಯರ್ ಆಗಬೇಕು ಎಂಬ ಆಸೆ. ಆದರೆ ಮಗನಿಗೆ ಕಂಪ್ಯೂಟರ್‌ನಲ್ಲಿ ಆಸಕ್ತಿ. ಹಾಗಾಗಿ ಕಾಲೇಜು ಬಿಟ್ಟ ಬಿಲ್, ತನ್ನ ಗೆಳೆಯನೊಂದಿಗೆ ಸೇರಿ, ಕಂಪ್ಯೂಟರ್ ಸಾಫ್ಟವೇರ್ ತಯಾರಿಸುವಲ್ಲಿ ನಿರತನಾದ. ಸಫಲನಾದ. ಕೊನೆಗೆ ಮೈಕ್ರೋಸಾಫ್ಟ್ ಕಂಪನಿಯ ಮಾಲೀಕನಾದ. ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲಿಗನೂ ಎನ್ನಿಸಿಕೊಂಡ. ಹೀಗೆ ಜೀವನದಲ್ಲಿ ಸಾಧನೆ ಮಾಡಿರುವ ಬಿಲ್ ಗೇಟ್ಸ್ ಕೆಲ ಮಾತುಗಳನ್ನು ಹೇಳಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಬಿಲ್ ಪ್ರಕಾರ, ನಮ್ಮ ಜೀವನ ಸರಿಯಾಗಿ ಇಲ್ಲವೆಂದು ನಾವು ಕೈ ಚೆಲ್ಲಿ ಕುಳಿತುಕೊಳ್ಳಬಾರದು. ಬದಲಾಗಿ ಅದನ್ನು ಸರಿ ಮಾಡಲು, ನಮ್ಮ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಲ್ಲದೇ ಸಫಲತೆ ಎಷ್ಟು ಕೆಳಮಟ್ಟದ ಸಾಧನೆ ಎಂದರೆ, ಇದು ಜನರ ಮನಸ್ಸಿನಲ್ಲಿ ನಾನು ಯಾವಾಗಲೂ ಸಫಲನೇ ಎಂಬ ಅಹಂ ಉತ್ಪತ್ತಿ ಮಾಡುತ್ತದೆ.

ಹಾಗಂತ ಸಫಲರಾದಾಗ ಅದರಿಂದ ಖುಷಿ ಪಡಬಾರದು ಅಂತಲ್ಲ. ಆದರೆ ಅಸಫಲರಾದಾಗ, ಧೃತಿಗೆಡದೇ, ಅದರಿಂದಲೂ ಜೀವನ ಪಾಠ ಕಲಿಯಬೇಕು. ನೀವು ಸಫಲರಾದ ಬಳಿಕ, ಲೈಫನ್ನು ಚೆನ್ನಾಗಿ ಎಂಜಾಯ್ ಮಾಡಿ. ಆದರೆ ಆ ಖುಷಿಯ ಕ್ಷಣದಲ್ಲೂ ನೀವು ಕಷ್ಟಪಟ್ಟ ಕ್ಷಣವನ್ನ, ಅಸಫಲತೆಯ ಕ್ಷಣವನ್ನು ಎಂದಿಗೂ ಮರೆಯಬೇಡಿ ಎನ್ನುವುದು ಬಿಲ್ ಮಾತು.

ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?

ಬರೀ ಕೆಲವೇ ಕೆಲವು ಜನ ಜೀವನದಲ್ಲಿ ಸಫಲರಾಗಲು ಕಾರಣವೇನು..?

ನಿಮ್ಮ ಇಚ್ಛಾಶಕ್ತಿ (Will Power) ಹೆಚ್ಚಿಸುವುದು ಹೇಗೆ..?

- Advertisement -

Latest Posts

Don't Miss