Health tips: ಪ್ರತೀ ಹೆಣ್ಣಿಗೂ, ಪ್ರತೀ ತಿಂಗಳು ಕಾಡುವ ಸಮಸ್ಯೆ ಅಂದ್ರೆ ಮುಟ್ಟಿನ ಸಮಸ್ಯೆ. ಕೆಲವರಿಗೆ ಹತ್ತು ಹಲವು ಆರೋಗ್ಯ ಸಮಸ್ಯೆಗಳಾಗುತ್ತದೆ. ಕಾಲು ನೋವು, ಸೊಂಟ ನೋವು, ಹೊಟ್ಟೆ ನೋವು ಹೀಗೆ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಮತ್ತೆ ಕೆಲವರಿಗೆ, ಮುಟ್ಟಾಗಿದ್ದು ಗೊತ್ತೇ ಆಗುವುದಿಲ್ಲ. ಅಷ್ಟು ಆರಾಮವಾಗಿರುತ್ತಾರೆ. ಆದರೆ ನಿಮಗೆ ಯಾವುದೇ ಮುಟ್ಟಿನ ಸಮಸ್ಯೆ ಇದ್ದರೂ, ಇಲ್ಲದಿದ್ದರೂ, ಆ ಸಮಯದಲ್ಲಿ ನಾವು ಕ್ಲೀನ್ ಆಗಿರುವುದು ತುಂಬಾ ಮುಖ್ಯ ಅಂತಾರೆ ವೈದ್ಯರು. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಪ್ರತಿದಿನ ನಾವು ಸ್ನಾನಾದಿಗಳನ್ನು ಮಾಡಿ, ಬಟ್ಟೆ ಹಾಕಿಕೊಳ್ಳುವುದು ನಾರ್ಮಲ್ ಹೈಜಿನ್. ಆದರೆ ಮುಟ್ಟಿನ ಸಮಯದಲ್ಲಿ ನಾವು ಶುಚಿತ್ವ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ನೀವು ಪ್ಯಾಡ್ಸ್ ಬಳಸುತ್ತಿದ್ದರೆ, 6 ಗಂಟೆಗೆ ಒಂದು ಪ್ಯಾಡ್ ಚೇಂಜ್ ಮಾಡಲೇಬೇಕು. ಅಲ್ಲದೇ, ಆ ಜಾಗವನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.
ನೀವು ವಾಶೇಬಲ್ ಕಾಟನ್ ಪ್ಯಾಡ್ಸ್ ಸಹ ಬಳಸಬಹುದು. ಆದರೆ ಅದನ್ನು ಚೆನ್ನಾಗಿ ತೊಳೆದು ಒಣಗಿಸುವುದು ತುಂಬಾ ಮುಖ್ಯವಾಗಿರುತ್ತದೆ. ಇನ್ನು ವೈದ್ಯರು ಹೇಳುವುದೇನೆಂದರೆ, ಯಾವುದೇ ಕಾರಣಕ್ಕೂ ಬಟ್ಟೆಗಳನ್ನು ಬಳಸಬಾರದೆಂದು. ಬಟ್ಟೆಗಳನ್ನು ಪ್ಯಾಡ್ ರೀತಿ ಯಾಕೆ ಬಳಸಬಾರದು ಎಂದರೆ, ಅದರಿಂದ ಇನ್‌ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಇನ್ನು ಕೆಲವರು ಮೆನ್‌ಸ್ಟ್ರುವಲ್ ಕಪ್ ಬಳಸುತ್ತಾರೆ. ಯಾರಿಗೆ ಇದರಿಂದ ಅನುಕೂಲವಿದೆಯೋ, ಅವರು ಇದನ್ನು ಬಳಸಬಹುದು. ಯಾರಿಗೆ ಇದು ಅನ್‌ಕಂಫರ್ಟೇಬಲ್ ಅನ್ನಿಸುತ್ತದೆಯೋ, ಅವರು ಪ್ಯಾಡ್ ಬಳಸುವುದೇ ಉತ್ತಮ. ಇನ್ನು ಮೆನ್‌ಸ್ಟ್ರುವಲ್ ಕಪ್ ಬಳಸುವವರು, ಅದನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಇದರಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಇನ್ನು ನಿಮಗೆ ಜನನಾಂಗದಲ್ಲಿ ಯೂರಿನ್ ಇನ್‌ಫೆಕ್ಷನ್, ತುರಿಕೆ ಇದ್ದರೆ, ವೈದ್ಯರ ಬಳಿ ಚಿಕಿತ್ಸೆ ಪಡೆದು, ಅದಕ್ಕೆ ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳುವುದು ತುಂಬಾ ಮುಖ್ಯ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ವೀಡಿಯೋ ನೋಡಿ.




