Friday, September 20, 2024

Latest Posts

ಹುಚ್ಚು ನಾಯಿ ಕಚ್ಚಿದ್ರೆ ಏನು ಮಾಡಬೇಕು..?

- Advertisement -

Health Tips: ಹಣೆಬರಹ ಕೆಟ್ಟಾಗ ಏನು ಬೇಕಾದ್ರೂ ಆಗಬಹುದು ಅಂದ ಹಾಗೆ, ದಾರಿಯಲ್ಲಿ ಸುಮ್ಮನೆ ನಡೆದುಕೊಂಡು ಹೋಗುವಾಗ, ಸಡೆನ್ ಆಗಿ ಬಂದು ಹುಚ್ಚು ನಾಯಿ ಕಚ್ಚಬಹುದು. ಇಂಥ ಹಲವಾರು ಘಟನೆಗಳು ನಡೆದಿದೆ. ಹಾಗಾದ್ರೆ ಹೀಗೆ ಹುಚ್ಚು ನಾಯಿ ಕಚ್ಚಿದಾಗ ನಾವು ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಹುಚ್ಚು ನಾಯಿ ಕಚ್ಚಿ ಬದುಕಿರುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಏಕೆಂದರೆ ನಾಯಿಯ ಎಂಜಿಲಿನಲ್ಲಿ ವೈರಸ್ ಇರುತ್ತದೆ. ನಾಯಿ ಕಚ್ಚಿದಾಗ ನರಗಳ ಮೂಲಕ ಹುಚ್ಚು ಮೆದುಳಿಗೆ ಹತ್ತುತ್ತದೆ. ಹೀಗೆ ಹುಚ್ಚು ಮೆದುಳಿಗೆ ಹತ್ತುವುದಕ್ಕೂ ಮುನ್ನವೇ ಸರಿಯಾದ ಚಿಕಿತ್ಸೆ ಪಡೆದರಷ್ಟೇ, ಮನುಷ್ಯ ಬದುಕಲು ಸಾಧ್ಯ. ಇಲ್ಲವಾದಲ್ಲಿ ಹುಚ್ಚು ನೆತ್ತಿಗೇರಿ, ಮನುಷ್ಯ ಸಾವನ್ನಪ್ಪುತ್ತಾನೆ.

ಡಾ. ಆಂಜಿನಪ್ಪ ಅವರು ಈ ಬಗ್ಗೆ ವಿವರಿಸಿದ್ದು, ಹುಚ್ಚು ನಾಯಿ ಕಚ್ಚಿದ ತಕ್ಷಣ ಏನು ಮಾಡಬೇಕು ಅಂತಾನೂ ಹೇಳಿದ್ದಾರೆ. ಹುಚ್ಚು ನಾಯಿಗಳು ಕಚ್ಚಿದರಷ್ಟೇ ಹುಚ್ಚು ಬರುವುದಿಲ್ಲ. ನಿಮಗೆ ಈಗಾಗಲೇ ಗಾಯವಾಗಿದ್ದು, ಆ ಗಾಯವನ್ನು ಹುಚ್ಚು ನಾಯಿ ನೆಕ್ಕಿದರೂ ನಿಮಗೆ ರೇಬಿಸ್ ಬರುವ ಸಾಧ್ಯತೆ ಇರುತ್ತದೆ.

ಇನ್ನು ಮೊದಲೆಲ್ಲ ನಾಯಿ ಕಚ್ಚಿದರೆ ಹೊಕ್ಕಳ ಸುತ್ತ 14 ಇಂಜೆಕ್ಷನ್ ಕೊಡಿಸಲಾಗುತ್ತಿತ್ತು. ಆದರೆ ಈಗ ವಿಜ್ಞಾನ ಮುಂದುವರಿದಿದ್ದು, ಸುಲಭವಾಗಿ ಚಿಕಿತ್ಸೆ ಕೊಡಲಾಗುತ್ತದೆ. ಆದರೆ ನಾಯಿ ಕಚ್ಚಿಸಿಕೊಂಡವರು ಮಾತ್ರ, ವೈದ್ಯರ ಬಳಿ ಬೇಗ ಹೋಗುವುದು ಮುಖ್ಯ. ಅಲ್ಲದೇ, ನಾಯಿಗಳಿಗೂ ಕೂಡ ಕೆಲವು ವ್ಯಾಕ್ಸಿನ್ ಕೊಡಿಸಬೇಕಾಗುತ್ತದೆ. ಆಗ ಆ ನಾಯಿಗಳಿಗೆ ಹುಚ್ಚು ಹಿಡಿಯುವುದಿಲ್ಲ.

ಇನ್ನು ಹುಚ್ಚು ನಾಯಿ ಕಚ್ಚಿದ ತಕ್ಷಣ, ಆ ಗಾಯಕ್ಕೆ ಲೈಪ್‌ಬಾಯ್ ಅಥವಾ ಬಟ್ಟೆ ಒಗೆಯುವ ಗ್ರೀನ್ ಸೋಪ್ ಹಾಕಿ, ಚೆನ್ನಾಗಿ ಕ್ಲೀನ್ ಮಾಡಿ. ಒಣಗಿಸಬೇಕು. ಬಳಿಕ ವೈದ್ಯರ ಬಳಿ ಹೋಗಿ ಇಂಜೆಕ್ಷನ್ ತೆಗೆದುಕೊಳ್ಳಬೇಕು. 4 ಇಂಜೆಕ್ಷನ್‌ಗಳ ಪ್ರಕಾರ, ಕೆಲ ದಿನಗಳ ಗ್ಯಾಪ್‌ನಲ್ಲಿ ಈ ಇಂಜೆಕ್ಷನ್ ಕೊಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..?

ಮಹಾಲಯ ಅಮವಾಸ್ಯೆ ಪೂಜೆಯ ಮಹತ್ವ..

ಲೇಸರ್ ಟ್ರೀಟ್ಮೆಂಟ್ ಪರ್ಮನೆಂಟ್ ಹೌದೋ, ಅಲ್ಲವೋ..?

- Advertisement -

Latest Posts

Don't Miss