Wednesday, January 22, 2025

Latest Posts

ಬಲರಾಮ ಮಹಾಭಾರತ ಯುದ್ಧದಿಂದ ದೂರವಿದ್ದಿದ್ದಕ್ಕೆ ಕಾರಣವೇನು..?

- Advertisement -

ಮಹಾಭಾರತ ಯುದ್ಧದಲ್ಲಿ ಪಾಂಡವರು, ಕೌರವರು ಸೇರಿ ಲಕ್ಷಾಂತರ ಜನ ಭಾಗಿಯಾಗಿದ್ದರು. ಪಾಂಡವರಿಗೆ ಕೆಲವರು ಮತ್ತು ಕೌರವರಿಗೆ ಕೆಲವರು ಬೆಂಬಲ ನೀಡಿದ್ದರು. ಆದ್ರೆ ಬಲಶಾಲಿಯಾಗಿದ್ದ ಬಲರಾಮ ಮಾತ್ರ ಮಹಾಭಾರತ ಯುದ್ಧದಿಂದ ದೂರ ಉಳಿದಿದ್ದ. ಹಾಗಾದ್ರೆ ಯಾಕೆ ಬಲರಾಮ ಮಹಾಭಾರತ ಯುದ್ಧದಿಂದ ದೂರ ಉಳಿದಿದ್ದ ಅಂತಾ ತಿಳಿಯೋಣ ಬನ್ನಿ..

ಬೌದ್ಧ ಮತ್ತು ಜೈನ ಧರ್ಮ ಹಿಂದೂ ಧರ್ಮಕ್ಕಿಂತ ಹೇಗೆ ಭಿನ್ನ..?

ಬಲರಾಮ ಭೀಮ ಮತ್ತು ದುರ್ಯೋಧನ ಇಬ್ಬರಿಗೂ ಗಧೆ ಹೇಗೆ ಬಳಸುವುದು ಅನ್ನೋ ವಿದ್ಯೆ ಹೇಳಿಕೊಟ್ಟಿದ್ದ. ಹಾಗಾಗಿ ಅವನಿಗೆ ಕೌರವರು ಪಾಂಡವರು ಇಬ್ಬರೂ ಇಷ್ಟವಾಗುತ್ತಿದ್ದರು. ಅವನಿಗೆ ಮಹಾಭಾರತ ಯುದ್ಧದಲ್ಲಿ ಒಬ್ಬರ ಪರವಹಿಸಿ, ಇನ್ನೊಬ್ಬರ ವಿರುದ್ಧ ಯುದ್ಧದಲ್ಲಿ ಭಾಗಿಯಾಗಲು ಇಷ್ಟವಿರಲಿಲ್ಲ. ಹಾಗಾಗಿ ಬಲರಾಮ ಯುದ್ಧ ಶುರುವಾದ ಮೇಲೆ ತೀರ್ಥಯಾತ್ರೆಗೆ ಹೋದ. ಆದ್ರೆ ತೀರ್ಥಯಾತ್ರೆಗೆ ಹೋಗುವ ಮುನ್ನ ಬಲರಾಮ, ಪಾಂಡವರ ಕುಟೀರಕ್ಕೆ ಬಂದಿದ್ದ.

ಯುಧಿಷ್ಟಿರನನ್ನು ಕುರಿತು, ನನಗೆ ಈ ಯುದ್ಧ ನಡೆಯುವುದೇ ಇಷ್ಟವಿಲ್ಲ. ನನಗೆ ಕೌರವರು ಪಾಂಡವರು ಇಬ್ಬರನ್ನು ಕಂಡರೂ ಪ್ರೀತಿ ಇದೆ. ಹಾಗಾಗಿ ನಾನು ಯಾರ ಪರವೂ ನಿಲ್ಲುವುದಿಲ್ಲ. ಶ್ರೀಕೃಷ್ಣನಿಗೂ ಈ ಬಗ್ಗೆ ಹೇಳಿದ್ದೆ. ಆದರೆ ಅವನು ಅರ್ಜುನನ ಪರವಹಿಸುತ್ತಿದ್ದಾನೆ. ಭೀಮ ಮತ್ತು ದುರ್ಯೋಧನ ಇಬ್ಬರೂ ನನಗೆ ಪ್ರೀತಿ ಪಾತ್ರರು. ಎಲ್ಲರಿಗೂ ಒಳ್ಳೆಯದಾಗಲಿ. ನಾನು ಯುದ್ಧ ಸಮಯದಲ್ಲಿ ತೀರ್ಥ ಯಾತ್ರೆಗೆ ಹೊರಡುತ್ತೇನೆಂದು ಹೇಳಿ ಹೊರಟ.

ಯಮನನ್ನೇ ಗೊಂದಲಕ್ಕೆ ತಳ್ಳಲು ಹೋದ ಅಹಂಕಾರಿ ಕಲಾಕಾರನಿಗೆ ಸಾವು ಸಂಭವಿಸಿದ ಕಥೆ..

ಆದರೆ ಬಲರಾಮ ತೀರ್ಥಯಾತ್ರೆ ಮುಗಿಸಿ ಬಂದ ಬಳಿಕ, ಭೀಮ ದುರ್ಯೋಧನನ ಮೇಲೆ ಗಧಾ ಪ್ರಹಾರ ಮಾಡಿದ್ದನ್ನ ನೋಡಿ ಕೋಪಗೊಂಡ. ದುರ್ಯೋಧನನನ್ನು ಈ ರೀತಿ ಮೋಸದಿಂದ ಕೊಲ್ಲುವುದು ಅಧರ್ಮ. ಇದಕ್ಕಾಗಿ ಭೀಮನಿಗೆ ಶಿಕ್ಷೆಯಾಗಲೇಬೇಕೆಂದು ಹೇಳಿದ. ಆಗ ಶ್ರೀಕೃಷ್ಣ, ನೀನು ಮಹಾಭಾರತ ಯುದ್ಧವಾಗುವ ಮುನ್ನ, ನಾನು ಯಾರ ಪರವೂ ನಿಲ್ಲುವುದಿಲ್ಲ. ತೀರ್ಥಯಾತ್ರೆಗೆ ಹೋಗುತ್ತೇನೆಂದು ಹೇಳಿದ್ದಿ. ಆದ್ರೆ ಈಗ ದುರ್ಯೋಧನನ ಮೃತ್ಯುವಾಯಿತೆಂದು, ಬಲರಾಮನಿಗೆ ಶಿಕ್ಷೆ ಕೊಡಲು ಬರುವುದು ಸಮವಲ್ಲ. ಹಾಗಾಗಿ ನೀನು ಇದರಿಂದ ದೂರ ಉಳಿದುಬಿಡು ಎಂದು ಹೇಳುತ್ತಾನೆ. ಈ ರೀತಿ ಬಲರಾಮ ಮಹಾಭಾರತ ಯುದ್ಧದಿಂದ ದೂರ ಉಳಿಯುತ್ತಾನೆ.

- Advertisement -

Latest Posts

Don't Miss