Health Tips: ಹೆಣ್ಣಿಗೆ ಗರ್ಭಕೋಶ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಇದರ ಮೂಲಕವೇ ಆಕೆ ತಾಯಿಯಾಗಲು ಸಾಧ್ಯ. ಗರ್ಭಕೋಶಕ್ಕೆ ತೊಂದರೆಯಾದರೆ, ಹೆಣ್ಣಿನ ಅರ್ಧ ಆರೋಗ್ಯ ಹಾಳಾದಂತೆ. ಹಾಗಾಗಿ ಗರ್ಭಕೋಶಕ್ಕೆ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳಬೇಕು. ಗರ್ಭಕೋಶ ದಪ್ಪವಾದರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯೆಯಾದ ಡಾ.ವಿದ್ಯಾ ಭಟ್ ವಿವರಿಸಿದ್ದಾರೆ.
ಗರ್ಭಕೋಶ ದಪ್ಪ ಆಗುವುದನ್ನು ಎಡಿನೋಮಯಾಸಿಸ್ ಎಂದು ಕರೆಯುತ್ತಾರೆ. ಹೀಗಾದಾಗ ಸಿಕ್ಕಾಪಟ್ಟೆ ಹೊಟ್ಟೆ ನೋವಾಗುತ್ತದೆ. ಹೆಚ್ಚು ರಕ್ತಸ್ರಾವವಾಗುತ್ತದೆ. ಹೀಗಾದಾಗ ಮಕ್ಕಳಾಗುವುದು ಕಷ್ಟವಾಗುತ್ತದೆ. ಜೀವನ ನಿರ್ವಹಿಸಲು ಕೂಡ ಕಷ್ಟವಾಗುತ್ತದೆ. ಹಾಗಾಗಿ ಇಂಥ ಲಕ್ಷಣಗಳು ಕಂಡುಬಂದಾಗ, ನೀವು ವೈದ್ಯರ ಬಳಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.
ಹಾಗಂತ ಗರ್ಭಕೋಶವನ್ನು ಮಾತ್ರ ತೆಗೆಸಿಕೊಳ್ಳಬಾರದು. 35ರಿಂದ 45 ವಯಸ್ಸಿನವರೆಗೂ ಗರ್ಭಕೋಶವನ್ನು ತೆಗೆಸಿಕೊಳ್ಳಬಾರದು. ಹಾಗೆ ಮಾಡಿದ್ದಲ್ಲಿ, ಅನಾರೋಗ್ಯಕ್ಕೀಡಾಗುತ್ತೀರಿ. ಅಲ್ಲದೇ, ಕೋರ್ಟ್ ಕೂಡ ಈ ಬಗ್ಗೆ ಆದೇಶ ನೀಡಿದ್ದು, 40 ವರ್ಷದೊಳಗಿನವರುಗರ್ಭಕೋಶವನ್ನು ತೆಗೆಸಲು ಅದಕ್ಕೆ ಸರಿಯಾದ ಕಾರಣ ಕೊಡಲೇಬೇಕು. ಇಲ್ಲವಾದಲ್ಲಿ, ಅಂಥ ಕೆಲಸ ಮಾಡಿದ ವೈದ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳಾಗುತ್ತದೆ.
ಇನ್ನು ಗರ್ಭಕೋಶ ತೆಗೆಯುವುದರಿಂದ ಆರೋಗ್ಯಕ್ಕಾಗುವ ನಷ್ಟವೇನು ಎಂದರೆ, ಮೂಳೆ ಸವೆಯುತ್ತದೆ. ಹೃದಯದ ಆರೋಗ್ಯ ಹಾಳಾಗುತ್ತದೆ. ಸಂಭೋಗ ಮಾಡಲು ತೊಂದರೆಯಾಗುತ್ತದೆ. ಇದರ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ. ಹಾಗಾಗಿ ಓರ್ವ ಹೆಣ್ಣಿಗೆ 50 ವರ್ಷವಾಗುವ ವರೆಗಾದರೂ ಗರ್ಭಕೋಶವಿರಲೇಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ.
ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?
ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..
ಮಕ್ಕಳ ಹೊಟ್ಟೆ ತುಂಬಲು ಹಾಲು ಬಿಸ್ಕೇಟ್ ಕೊಡುತ್ತೀರಾ..? ಅದೆಷ್ಟು ಅಪಾಯಕಾರಿ ಗೊತ್ತಾ..?