Monday, October 6, 2025

Latest Posts

ಪೂಜೆ ವೇಳೆ ಕಪ್ಪು ಬಟ್ಟೆ ಧರಿಸಬಾರದು ಅಂತಾ ಹೇಳುವುದೇಕೆ..?

- Advertisement -

Spiritual Story: ಪೂಜೆ ವೇಳೆ, ಮದುವೆ ಮುಂಜಿಯಂಥ ಶುಭಕಾರ್ಯದ ವೇಳೆ, ಅಥವಾ ಯಾವುದೇ ಶುಭ ಸಂದರ್ಭದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಕೆಲವರು ಇತ್ತೀಚೆಗೆ ಕಪ್ಪು ಬಣ್ಣದ ಬಟ್ಟೆ ಧರಿಸುತ್ತಾರೆ. ಆದರೆ ಶುಭಕಾರ್ಯದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹೇಳುವುದೇಕೆ ಅಂತಾ ತಿಳಿಯೋಣ ಬನ್ನಿ..

ಕಪ್ಪು ಎಂದರೆ, ನಕಾರಾತ್ಮಕ ಶಕ್ತಿ ಸೆಳೆಯುವ ಬಣ್ಣ. ಹಾಗಾಗಿ ಶುಭ ಸಂದರ್ಭದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹೇಳಲಾಗುತ್ತದೆ. ಈ ವೇಳೆ ನೀವು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ, ನಿಮದೆ ಪೂಜೆಯಲ್ಲಿ ಬರುವ ಸಕಾರಾತ್ಮಕ ಶಕ್ತಿಯ ಪ್ರಬಾವಕ್ಕಿಂತ ಹೆಚ್ಚು, ನಕಾರಾತ್ಮಕ ಶಕ್ತಿ ಸೆಳೆಯುತ್ತದೆ. ಹಾಗಾಗಿ ಶುಭಕಾರ್ಯದ ಶುಭ ಫಲ ಬೇಕೆಂದಲ್ಲಿ ತಿಳಿ ಬಣ್ಣದ ಬಟ್ಟೆ ಧರಿಸಿ.

ಇನ್ನು ಶುಭಕಾರ್ಯದಲ್ಲಿ ಭಾಗವಹಿಸುವವರು ಕಪ್ಪು ಬಣ್ಣದ ಬಟ್ಟೆ ಧರಿಸುವುದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾನೆ. ಅಲ್ಲದೇ ಕಪ್ಪು ನಿಮಗೆ ಬರೀ ಸೋಲು, ಬ್ಯಾಡ್‌ಲಕ್ ತಂದುಕೊಡುತ್ತದೆ. ಇನ್ನು ಶನಿದೋಷ ಇದ್ದವರು ಕಪ್ಪು ಬಣ್ಣದ ಸುದ್ದಿಗೆ ಹೋಗಬಾರದು. ಕಪ್ಪು ಬಣ್ಣ ಧರಿಸಿದಾಗಲೆಲ್ಲ. ಅವರ ಮನಸ್ಸಿಗೆ ನೆಮ್ಮದಿಯೇ ಇರುವುದಿಲ್ಲ.

ಇನ್ನು ಬರೀ ಶುಭಕಾರ್ಯದಲ್ಲಷ್ಟೇ ಅಲ್ಲ, ಸಾವಿನ ಮನೆಗೆ ಹೋಗುವಾಗಲೂ ಕಪ್ಪು ಬಣ್ಣದ ಬಟ್ಟೆ ಧರಿಸಿ ಹೋಗಬಾರದು. ಏಕೆಂದರೆ, ಆತ್ಮಗಳು ಕಪ್ಪು ಬಣ್ಣದೆಡೆಗೆ ಹೆಚ್ಚು ಆಕರ್ಷಣೆಯಾಗುತ್ತದೆ.  ಇದರಿಂದ ದೃಷ್ಟಿ ಉಂಟಾಗುವ ಸಾಧ್ಯತೆ ಇರುತ್ತದೆ. ಆರೋಗ್ಯವೂ ಹಾಳಾಗಬಹುದು. ಹಾಗಾಗಿ ಸಾವಿನ ಮನೆಯಲ್ಲಿ ಬಿಳಿ ಬಣ್ಣದ ಬಟ್ಟೆ ಹೆಚ್ಚಾಗಿ ಧರಿಸಲಾಗುತ್ತದೆ. ಅಥವಾ ತಿಳಿ ಬಣ್ಣದ ಬಟ್ಟೆ ಧರಿಸುತ್ತಾರೆ.

ಹಣೆಗೆ ಯಾವ ತಿಲಕವಿಡಬೇಕು..? ಇದರಿಂದ ಏನು ಪ್ರಯೋಜನ..?

ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ

ಚಾಣಕ್ಯರ ಪ್ರಕಾರ ಅಪ್ಪಿತಪ್ಪಿಯೂ ನಾವು ಈ ಕೆಲಸ ಮಾಡಬಾರದಂತೆ..

- Advertisement -

Latest Posts

Don't Miss