Health Tips: ಗರ್ಭಿಣಿ ಎಂದಾಗ, ಆಕೆಗೆ ಬಯಕೆಗಳಿರುತ್ತದೆ. ಮನಸ್ಸಿಗೆ ಇಷ್ಟವಾಗಿದ್ದು ತಿನ್ನಬೇಕು ಎನ್ನಿಸುತ್ತದೆ. ಆದರೆ ಬಸರಿ ಬಯಕೆ ಎಂದು ಸಿಕ್ಕ ಸಿಕ್ಕ ತಿಂಡಿಗಳನ್ನ ತಿಂದ್ರೆ, ಅದರಿಂದ ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಕುತ್ತು ಬರುತ್ತದೆ. ಹಾಗಾಗಿ ಹೆಚ್ಚು ಜಂಕ್ ಫುಡ್, ಎಣ್ಣೆ ಪದಾರ್ಥ, ಉಪ್ಪು, ಹುಳಿ, ಮಸಾಲೆ, ಸಿಹಿ ತಿಂಡಿಗಳನ್ನ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು ಅಂತಾ ಹೇಳುವುದು. ನಾವಿಂದು ಗರ್ಭಿಣಿಯರು ಯಾಕೆ ಹೆಚ್ಚು ಸಿಹಿ ತಿಂಡಿಗಳನ್ನು ತಿನ್ನಬಾರದು ಅಂತಾ ಹೇಳಲಿದ್ದೇವೆ.
ಮೊದಲನೇಯದಾಗಿ ಗರ್ಭಿಣಿಯರಿಗೆ ಸಕ್ಕರೆ ಖಾಯಿಲೆ ಬರುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಹಾಗಾಗಿ ಆಕೆಗೆ ಸಿಹಿ ಪದಾರ್ಥವನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಲು ಕೊಡುವುದಿಲ್ಲ. ಯಾವಾಗಲಾದರೂ ಒಮ್ಮೆ, ಸಿಹಿ ತಿಂಡಿ ತಿನ್ನಬಹುದು. ಆದರೆ ಪ್ರತಿದಿನ ವೆರೈಟಿ ವೆರೈಟಿ ಸಿಹಿ ತಿಂಡಿ ತಿಂದರೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಆಗ ತಾಯಿ ಮಗು ಇಬ್ಬರಿಗೂ ಸಕ್ಕರೆ ಖಾಯಿಲೆ ಬರುವ ಎಲ್ಲ ಸಾಧ್ಯತೆಗಳಿರುತ್ತದೆ. ಮತ್ತು ಸಕ್ಕರೆ ಖಾಯಿಲೆ ಇರುವವರಿಗೆ ನಾರ್ಮಲ್ ಡಿಲೆವರಿಯಾಗಲು ಸಾಧ್ಯವಿಲ್ಲ. ಅಂಥವರಿಗೆ ಸಿಸೇರಿನ್ ಮಾಡಲಾಗುತ್ತದೆ.
ಅಲ್ಲದೇ, ಗರ್ಭಾವಸ್ಥೆಯಲ್ಲಿ ಸಿಹಿ ಪದಾರ್ಥ ತಿನ್ನುವುದರಿಂದ ಹಲ್ಲು ಹಾಳಾಗುವ ಸಾಧ್ಯತೆಯೂ ಹೆಚ್ಚಿದೆ. ಹಲ್ಲು ಹಾಳಾದ್ರೆ, ಡೆಂಟಿಸ್ಟ್ ಸರಿ ಮಾಡ್ತಾರೆ ಅಂತಾ ನೀವು ಹೇಳಬಹುದು. ಆದರೆ ಗರ್ಭಾವಸ್ಥೆಯಲ್ಲಿದ್ದಾಗ, ಯಾವ ಡೆಂಟಿಸ್ಟ್ ಕೂಡ ಹಲ್ಲಿನ ಚಿಕಿತ್ಸೆ ಮಾಡುವುದಿಲ್ಲ. ಏಕೆಂದರೆ, ಇದರಿಂದ ತಾಯಿ ಮಗುವಿನ ಮೇಲೆ ಸೈಡ್ ಎಫೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಗರ್ಭಿಣಿಯರು ಹಲ್ಲನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ.
ಅಷ್ಟೇ ಅಲ್ಲದೇ, ಗರ್ಭಾವಸ್ಥೆಯಲ್ಲಿ ದೇಹದ ತೂಕ ಹೆಚ್ಚಾಗುತ್ತದೆ. ಆದರೆ ನೀವು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂದರೆ, ನಿಮ್ಮ ದೇಹದ ತೂಕ ಇನ್ನಷ್ಟು ಹೆಚ್ಚಾಗುತ್ತದೆ. ಅದು ಅನಾರೋಗ್ಯಕರ ರೀತಿಯಿಂದ. ಅಲ್ಲದೇ, ಇದರಿಂದ ಮಗುವಿನ ತೂಕವೂ ಅಗತ್ಯಕ್ಕಿಂತ ಹೆಚ್ಚಾಗಬಹುದು. ಮತ್ತು ನಾರ್ಮಲ್ ಡಿಲೆವರಿಯಾಗಲು ಇದು ಅಡ್ಡಿಯಾಗಬಹುದು. ಹಾಗಾಗಿ ಗರ್ಭಿಣಿಯಾಗಿದ್ದಾಗ, ಡಯಟ್, ವ್ಯಾಯಾಮ ಎಲ್ಲವೂ ಮುಖ್ಯವಾಗಿರುತ್ತದೆ. ಆ ಸಮಯದಲ್ಲಿ ಗರ್ಭಿಣಿ ಸಮ ತೂಕದಲ್ಲಿದ್ದಷ್ಟು, ಆಕೆ ಮತ್ತು ಆಕೆಯ ಮಗುವಿನ ಆರೋಗ್ಯ ಅತ್ಯುತ್ತಮವಾಗಿರುತ್ತದೆ.