ಬೆಂಗಳೂರು: ಮೈತ್ರಿ ಸರ್ಕಾರ ಅಸ್ಥಿರಗೊಂಡಿದ್ದು ಕೂಡಲೇ ಸಿಎಂ ಎಚ್.ಡಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರೋ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಯಡಿಯೂರಪ್ಪ, ಅತೃಪ್ತ ಶಾಸಕರ ಹಕ್ಕನ್ನು ಕಸಿದುಕೊಂಡು ಸರ್ಕಾರ ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಈ ಹಿಂದೆ ಗುಜರಾತ್ ಶಾಸಕರನ್ನು ಇಲ್ಲಿದೆ ಕರೆತಂದು ರೆಸಾರ್ಟ್ ನಲ್ಲಿಟ್ಟು ಅವರ ಹಕ್ಕನ್ನು ಕಸಿದುಕೊಂಡ ಡಿ.ಕೆ ಶಿವಕುಮಾರ್ ಇದೀಗ ಮುಂಬೈಗೆ ತೆರಳಿ ಅತೃಪ್ತರನ್ನು ಭೇಟಿ ಮಾಡೋ ಪ್ರಯತ್ನ ಮಾಡ್ತಿದ್ದಾರೆ ಅಂತ ಬಿಎಸ್ವೈ ಕಿಡಿ ಕಾರಿದ್ರು. ಇನ್ನು ಬಲವಂತದಿಂದಾದರೂ ಸರಿ ಶಾಸಕರನ್ನ ಕರೆದುಕೊಂಡು ಬರ್ತೀವಿ ಅಂತ ಹೇಳೋ ಕುಮಾರಸ್ವಾಮಿ ಅವರೆಲ್ಲಾ ಇಲ್ಲಿಗೆ ಮೇಲೆ ಗೂಂಡಾಗಿರಿ ಮಾಡೋ ಪ್ರಯತ್ನ ಮಾಡ್ತಿದ್ದೀರ ಅಂತ ಹೇಳಿದ್ರು.
ಇನ್ನು ಕೇಂದ್ರ ಗೃಹ ಸಚಿವರಿಗೂ ಈ ಎಲ್ಲಾ ಬೆಳವಣಿಗೆಗಳನ್ನು ಗಮನಕ್ಕೆ ತಂದಿದ್ದೇವೆ. ದಯಮಾಡಿ ಇನ್ನೂ ತಡಮಾಡದೇ ರಾಜೀನಾಮೆ ಪತ್ರಗಳನ್ನು ಅಂಗೀಕರಿಸಬೇಕು ಅಂತ ಇದೇ ವೇಳೆ ಬಿಎಸ್ವೈ ಮನವಿ ಮಾಡಿದ್ರು. ನಾಳಿದ್ದು 12ರಂದು ವಿಧಾನಮಂಡಲ ಅಧಿವೇಶನ ನಡೆಯಬೇಕು, ಆದ್ರೆ ಶಾಸಕರ ಬಹುಮತವಿಲ್ಲದೆ ಅಧಿವೇಶನ ನಡೆಯೋದಿಲ್ಲ. ಹೀಗಾಗಿ ಸಿಎಂ ಕುಮಾರಸ್ವಾಮಿಯವರಿಗೆ ಕಿಂಚಿತ್ತು ಮಾನ ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ಕೊಟ್ಟು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಅಂತ ಯಡಿಯೂರಪ್ಪ ಒತ್ತಾಯಿಸಿದ್ರು. ಈ ಕುರಿತಾಗಿ ಸ್ಪೀಕರ್ ರಮೇಶ್ ಕುಮಾರ್ ರವನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ ಅಂತ ತಿಳಿಸಿದ್ರು.
ಬಿಜೆಪಿ ರಣತಂತ್ರ, ದೋಸ್ತಿ ಅತಂತ್ರ..! ಮಿಸ್ ಮಾಡದೇ ಈ ವಿಡಿಯೋ ನೋಡಿ