ಹುಟ್ಟಿದ ಮಗುವಿಗೆ ನೀರು ಕೊಡಬಾರದು.. ಯಾಕೆ ಗೊತ್ತಾ..?

Health Tips: ತಾಯಿ ಮಗುವಿನ ಆರೋಗ್ಯದ ಬಗ್ಗೆ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ವೈದ್ಯರು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಕೂಡ ವೈದ್ಯೆಯಾದ ಸಹನಾ ದೇವದಾಸ್, ಹುಟ್ಟಿನ ಮಗುವಿಗೆ ನೀರು ಯಾಕೆ ಕೊಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಮಗುವಿಗೆ ಯಾವ ಯಾವ ಆರೋಗ್ಯಕರ ಅಂಶಗಳು ಬೇಕೋ, ಆ ಅಂಶಗಳೆಲ್ಲ ತಾಯಿಯ ಹಾಲಿನಲ್ಲೇ ಇರುತ್ತದೆ. ಹಾಗಾಗಿ ಹುಟ್ಟಿದ ಮಗುವಿಗೆ ನೀರು ಕೊಡಬಾರದು. ಬರೀ ಎದೆ ಹಾಲು ಉಣಿಸಬೇಕು. ಅದೇ ಹಾಲಿನಲ್ಲಿ ನೀರಿನಂಶ ಇರುತ್ತದೆ. ಹಾಗಾಗಿ ಮಗುವಿಗೆ ಬೇರೆ ಹಾಲಿನ ಅವಶ್ಯಕತೆ ಇರುವುದಿಲ್ಲ.

ಇನ್ನು ಹಾಲು ಕಡಿಮೆ ಇದೆ ಅನ್ನೋದು ತಾಯಿಯ ಭ್ರಮೆಯಾಗಿರುತ್ತದೆ ಅಂತಾರೆ ವೈದ್ಯರು. ಮಗು ಎಷ್ಟು ಹಾಲು ಕುಡಿಯುತ್ತೋ, ತಾಯಿಯ ಎದೆಯಲ್ಲಿ ಅಷ್ಟು ಹೆಚ್ಚು ಹಾಲು ಉತ್ಪತ್ತಿಯಾಗುತ್ತದೆ. ಜೊತೆಗೆ ತಾಯಿಯಾದವಳು ಉತ್ತಮ ಆಹಾರ ಸೇವನೆ, ನೀರಿನ ಸೇವನೆ ಮಾಡಬೇಕು. ಆಗಲೇ, ಮಗುವಿಗೆ ಹೆಚ್ಚು ಹಾಲು ಸಿಗುತ್ತದೆ.

ಎದೆ ಹಾಲು 2 ವರ್ಷಗಳ ಕಾಲ ಕುಡಿಸುವುದರಿಂದ, ತಾಯಿ ಮಗುವಿನ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ಅದು ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಹಾಗಾಗಿ ಮಗುವಿಗೆ 2 ವರ್ಷವಾಗುವವರೆಗೂ, ತಾಯಿಯ ಎದೆ ಹಾಲು ಕುಡಿಸಬೇಕು ಅಂತಾ ಹೇಳಲಾಗುತ್ತದೆ.

ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..

Liver Cancer ಇದ್ರೂ ಗೊತ್ತಾಗಲ್ಲಎಚ್ಚರ!

Kidneyಯಲ್ಲಿ ಕಲ್ಲಾಗಿದ್ಯಾ? ನಿಮ್ಮ ತೋಟದಲ್ಲೇ ಇದೆ ಮದ್ದು

About The Author