Wednesday, February 19, 2025

Latest Posts

ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಕೊಡಬೇಕಿದ್ದ ಆಹಾರಕ್ಕೆ ಕನ್ನ ಪ್ರಕರಣ: 26 ಜನರ ಬಂಧನ

- Advertisement -

Hubli News: ಹುಬ್ಬಳ್ಳಿ: ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಕೊಡಬೇಕಿದ್ದ ಆಹಾರಕ್ಕೆ ಕನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಹುಬ್ಬಳ್ಳಿ ಪೊಲೀಸರಿಂದ 26 ಜನರ ಬಂಧನವಾಗಿದ್ದು, ಎರಡು ವಾಹನ, 4 ಲಕ್ಷ ಮೌಲ್ಯದ ಪೌಷ್ಟಿಕ ಆಹಾರ ವಶಕ್ಕೆ ಪಡೆಯಲಾಗಿದೆ.

ಶಿವಕುಮಾರ ದೇಸಾಯಿ, ಬಸವರಾಜ ಭದ್ರಶೆಟ್ಟಿ, ಮೊಹಮ್ಮದ್ ಗೌಸ್ ಖಲೀಫಾ, ಗೌತಮ್ ಸಿಂಗ್ ಠಾಕೂರ್, ಮಂಜುನಾಥ ಮಾದರ, ಫಕ್ಕೀರೇಶ ಹಲಗಿ, ಕೃಷ್ಣ ಮಾದರ, ರವಿ ಹರಿಜನ, ಶಮಿಮಾ ಬಾನು ಮುಜಾವರ, ಶಮಿಮಾ ಬಾನು ದಾರುಗಾರ, ಬಿಬಿ ಆಯೆಷ ಕಾರಿಗಾರ, ರೇಷ್ಮಾ, ಶಾಹಿನಾ, ಫೈರೋಜ್ ಮುಲ್ಲಾ, ಬಿಬಿ ಆಯೇಷಾ, ಮೆಹಬೂಬಿ ಹುಲ್ಯಾಳ್, ಶಕುಂತಲಾ ನ್ಯಾಮತಿ, ಚಿತ್ರ ಉರಾಣಿಕರ, ಮೀನಾಕ್ಷಿ ಬೆಟಗೇರಿ, ಹೀನಾ ಕೌಸರ್, ಹೀನಾ ಕೌಸರ್ ಮೇಸ್ತ್ರಿ, ಶೀಲಾ ಹಿರೇಮಠ ಶೃತಿ, ಪರ್ವಿನ್ ಭಾನು, ರೇಣುಕಾ ಮತ್ತು ಗಂಗಮ್ಮ ಬಂಧಿತ ಆರೋಪಿಗಳು.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್,  ಫೆ. 15 ರಂದು ಸಂಜೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಒಂದು ಪ್ರಕರಣ ದಾಖಲಾಗಿತ್ತು. ಗೊಬ್ಬೂರ ಗೋಡೌನ್ ನಲ್ಲಿ ಕ್ರಮವಾಗಿ ಆಹಾರ ಸಂಗ್ರಹಿಸಿಟ್ಟ ಬಗ್ಗೆ ಪ್ರಕರಣ ದಾಖಲಾಗಿತ್ತು. ಬಾಂಣಂತಿಯರು, ಗರ್ಭಿಣಿಯರು, ಮಕ್ಕಳಿಗಾಗಿ ಕೊಡುತ್ತಿದ್ದ ಆಹಾರ ಪದಾರ್ಥ ಸಂಗ್ರಹಿಸಿ ಇಟ್ಟಿದ್ದ ಆರೋಪಿಗಳು. 4 ಲಕ್ಷಕ್ಕೂ ಹೆಚ್ಚು ಮೌಲ್ಯದ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ. ಉಗ್ರಾಣ ಮಾಲೀಕ ಮತ್ತು ಉಗ್ರಾಣವನ್ನು ಬಾಡಿಗೆ ಪಡೆದ ವ್ಯಕ್ತಿ 8 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ವಾಹನ ಚಾಲಕ ಮತ್ತಿತರರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಅವರು ಕೊಟ್ಟ ಸುಳಿವನ್ನು ಆಧರಿಸಿ 18 ಅಂಗನವಾಡಿ ಕಾರ್ಯಕರ್ತೆಯರ ವಶಕ್ಕೆ ಪಡೆಯಲಾಗಿದೆ.

ತಪ್ಪೆಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ 18 ಅಂಗನವಾಡಿ ಕಾರ್ಯಕರ್ತರು ಬಂಧನವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಅಗತ್ಯಕ್ಕಿಂತ ಹೆಚ್ಚು ಪೌಷ್ಟಿಕ ಆಹಾರ ಪೂರೈಕೆ ಮಾಡಿಸಿಕೊಳ್ಳುತ್ತಿದ್ದರೆಂಬ ಆರೋಪವಿದೆ. ಒಂದು ವಾಹನದಲ್ಲಿಯೇ ಅದನ್ನು ಬೇರೆ ಗೋಡೌನ್ ಗೆ ಸಾಗಾಟ ಮಾಡ್ತಿದ್ರು. ನಂತರ ಅದನ್ನು ಕಾಳ ಸಂತೆಗೆ ಪೂರೈಕೆ ಮಾಡುತ್ತಿದ್ದರು. ಘಟನೆಗೆ ಸಬಂಧಿಸಿ ಒಟ್ಟು 26 ಜನ ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ಸಂಘಟಿತ ಅಪರಾಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿಗಳಿಬ್ಬರು ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದಾರೆ. ವಶಕ್ಕೆ ಪಡೆದ ಆರೋಪಿಗಳಿಂದ ಹೆಚ್ಚಿನ ವಿಚಾರಣೆ ಮಾಡ್ತಾ ಇದ್ದೇವೆ. ಆದಷ್ಟು ಬೇಗ ಅವರನ್ನ ಸಹ ಬಂಧಿಸುತ್ತೇವೆ.

ಪ್ರಕರಣದ ಕಿಂಗ್ ಪಿನ್ ಕೂಡ ಅಂಗನವಾಡಿ ಕಾರ್ಯಕರ್ತೆ ಅನ್ನೋ ಮಾಹಿತಿ ಇದೆ. ಪ್ರತ್ಯಕ್ಷ, ಪರೋಕ್ಷವಾಗಿ ಅದರಲ್ಲಿ ಭಾಗಿಯಾದವರನ್ನ ಸಹ ವಶಕ್ಕೆ ಪಡೆಯುತ್ತೇವೆ. ಯಾರು ಕೂಡ ಇದುವರೆಗೂ ನನಗೆ ಪ್ರಶರ್ ಹಾಕಿಲ್ಲ, ಹಾಕಿದರೂ ನಾವು ಕೇಳುವ ಅವಶ್ಯಕತೆ ಇಲ್ಲಾ. ಆರೋಪಿ ಸ್ಥಾನದಲ್ಲಿರೋ ಮಹಿಳೆ ಹಿಂದುಗಳಿಗೆ ಬೈದಿರೋ ವಿಚಾರವನ್ನ ಪರಿಶೀಲನೆ ಮಾಡ್ತೇವೆ. ಈ ವಿಷಯದ ಬಗ್ಗೆ ಯಾರಾದ್ರೂ ಕಂಪ್ಲೇಂಟ್ ಕೊಟ್ರೆ ತಗೋತೀವಿ ಎಂದು ಕಮಿಷನರ್ ಶಶಿಕುಮಾಾರ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಕಸಬಾ ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss