ರಾಯಚೂರು : ಅಲ್ಲಿ ನಿತ್ಯವೂ ಆಂದ್ರ(Andhra), ತೆಲಂಗಾಣ (Telangana)ಕ್ಕೆ ಸಂಚರಿಸುವ ಗಡಿ ಗ್ರಾಮಗಳ ಜನರು ಆ ರೈಲ್ವೇ ನಿಲ್ದಾಣಕ್ಕೆ ಬಂದೇ ರೈಲು ಹತ್ತುತಿದ್ರು. ಆದ್ರೆ ಕೊರೋನಾ (CORONA) ಹೊಡೆತಕ್ಕೆ ಸಿಲುಕಿ ಸಂಚರಿಸ್ತಿದ್ದ ಏಕೈಕ ರೈಲು ಸ್ಥಗಿತ ಗೊಂಡಿದ್ದು, ಈಗ ಆ ರೈಲ್ವೇ ನಿಲ್ದಾಣ ಕಂಪ್ಲೀಟ್ ಅನೈತಿಕ ಚಟುವಟಿಗಳ ತಾಣವಾಗಿದೆ. ರೈಲೇ ನಿಲ್ಲದ, ಅನೈತಿಕ ಚಟುವಟಿಕೆ ತಾಣವಾಗಿ, ಭೂತ ಬಂಗಲೆಯಾಗಿರುವ ಆ ರೈಲ್ವೇ ನಿಲ್ದಾಣ (Railway Station) ಯಾವುದು ಅಂತೀರಾ ಈ ಸ್ಟೋರಿ ನೋಡಿ. ಎಲ್ಲಿ ನೋಡಿದರು ಮುಳ್ಳಿನ ಬೆಲಿ, ಮೂಲೆ ಮೂಲೆಗಳಲ್ಲಿ ಮದ್ಯಪಾನದ ಬಾಟಲ್ ಗಳು, ಎತ್ತ ನೋಡಿದರೂ ಪ್ರಯಾಣಿಕರ ಇಲ್ಲದ ರೈಲ್ವೆ ನಿಲ್ದಾಣ ಹೌದ ಅಲ್ವ ಎಂಬ ಅನುಮಾನ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ತಾಲ್ಲೂಕಿನ ಚಂದ್ರಬಂಡ(Chandrabanda) ರೈಲು ನಿಲ್ದಾಣದಲ್ಲಿ. ಗದ್ವಾಲ್ (Gadwal)ಮಾರ್ಗದ ಲ್ಲಿರುವ ಚಂದ್ರಬಂಡ ಗ್ರಾಮದ ರೈಲು ನಿಲ್ದಾಣದವು ಗ್ರಾಮೀಣ ಪ್ರದೇಶದಲ್ಲಿ ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿ ಸಿತ್ತು. ಆದರೆ ಕೊರೊನಾ ವೇಳೆ ರೈಲು ಸಂಚಾರ ಸ್ಥಗಿತವಾಗಿದ್ದರಿಂದ ನಿಲ್ದಾಣವನ್ನು ಕೇಳುವವರೇ ಇಲ್ಲದಂತಾಗಿದೆ ಅನೈತಿಕ ಚಟುವಟಿಕೆ ತಾಣವಾಗಿದೆ. ಇನ್ನೂ ಕೋವಿಡ್ ಹಿನ್ನೆಲೆಯಲ್ಲಿ ರಾಯಚೂರು – ಗದ್ವಾಲ್ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತದಿಂದ ಇಲ್ಲಿನ ಸಿಬ್ಬಂದಿಯನ್ನು ರೈಲ್ವೆ ಇಲಾಖೆ ವಾಪಸ್ ಕರೆಯಿಸಿಕೊಂಡಿದ್ದರಿಂದ ನಿಲ್ದಾಣವನ್ನು ಕೇಳುವವರೇ ಇಲ್ಲವಾಗಿದೆ . ಹೀಗಾಗಿ ಚಂದ್ರಬಂಡ ರೈಲ್ವೆ ನಿಲ್ದಾಣ ಪಾಳು ಬಿದ್ದಿದೆ . ಪ್ಲಾಟ್ ಫಾರ್ಮ್ ಹಾಗೂ ರೈಲು ನಿಲ್ದಾಣ ಕಟ್ಟಡ ಪಾಳು ಬಿದ್ದಿದ್ದು, ಎಲ್ಲೆಡೆ ಕಸ ಬಿದ್ದಿದೆ. ನಿಲ್ದಾಣದಲ್ಲಿ ಮದ್ಯದ ಬಾಟಲಿ ಗಳನ್ನು ಬಿಸಾಕಿರುವುದು ಕಾಣಸಿಗುತ್ತಿದೆ. ಈ ಗ್ರಾಮದಲ್ಲಿ ಅತಿ ಹೆಚ್ಚು ತರಕಾರಿ ಬೆಳೆಯುತ್ತಿದ್ದು, ಪಕ್ಕದ ರಾಜ್ಯ ತೆಲಂಗಾಣದ ಗದ್ವಾಲ್ ಹಾಗೂ ಹೈದರಾಬಾದ್‌ಗೆ (Hyderabad) ಕಡಿಮೆ ಖರ್ಚಿನಲ್ಲಿ ಸಂಚರಿಸಲು ರೈಲು ಅನುಕೂಲವಾಗಿತ್ತು. ಈಗ ರೈಲು ಸಂಚಾರ ಸ್ಥಗಿತದಿಂದ ಸುತ್ತಲಿನ ಪ್ರದೇಶದ ಜನತೆ ನಿಲ್ದಾಣದತ್ತ ತಿರುಗಿಯೂ ನೋಡುತ್ತಿಲ್ಲ. ಈ ರೈಲು ನಿಲ್ದಾಣದ ನಂತರದಲ್ಲಿ ತೆಲಂಗಾಣ ರಾಜ್ಯದ ವ್ಯಾಪ್ತಿಯಲ್ಲಿ ಮಾರ್ಗ ಸಾಗುತ್ತದೆ. ಕೇಂದ್ರದಲ್ಲಿ 1984 ರ ಯುಪಿಎ ಸರಕಾರದ ಅವಧಿಯಲ್ಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ರಾಯಚೂರು – ಗದ್ವಾಲ್ – ಹೈದರಾಬಾದ್ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು . ರಾಯಚೂರಿಗೆ ಡೆಮು ರೈಲು ಈ ಮಾರ್ಗದಲ್ಲಿ ದಿನವೂ ಸಂಚರಿಸುತ್ತಿತ್ತು. ಆದರೆ ಗ್ರಾಮೀಣ ಭಾಗದ ಜನತೆ ತೆಲಂಗಾಣದ ನಾನಾ ನಗರಗಳಿಗೆ ತೆರಳಲು ರೈಲು ಕೊಂಚಮಟ್ಟಿಗೆ ನೆರವಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದ 2 ವರ್ಷದಿಂದ ರೈಲು ಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ. ಎರಡು ವರ್ಷದಿಂದ ರೈಲು ಸಂಚಾರ ವಿಲ್ಲದ್ದರಿಂದ ಈ ರೈಲು ನಿಲ್ದಾಣ ಬಳಕೆಯಾಗದೆ ಅನೈತಿಕ ಚಟುವಟಿಕೆಗಳಿಗೆ ಆಶ್ರಯವಾಗಿದೆ. ಪಕ್ಕದ ರಾಜ್ಯ ದಿಂದ ಕೃಷಿ ಚಟುವಟಿಕೆ ಗೆ ರೈತರಿಗೆ ಈ ರೈಲು ಮಾರ್ಗ ಅನುಕೂಲವಾಗಿತ್ತು. ಆದರೆ ಮೊದಲ ನೇ ಅಲೆ ಕರೋನ ದಿಂದ ಈ ಮಾರ್ಗದಿಂದ ಸಂಚಾರ ಮಾಡ್ತಿದ್ದ ರೈಲು ಸ್ಥಗಿತವಾಗಿದೆ. ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವರು ಇತ್ತ ಕಡೆ ಗಮನ ಹರಿಸಿ, ನಿತ್ಯ ರೈಲು ಸಂಚರಿಸಲುವಕ್ರಮ ವಹಿಸಿ, ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕಿದೆ.