ಇಂಗ್ಲೆಂಡ್: ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ಟೀಮ್ ಇಂಡಿಯಾದ್ದೇ ಹವಾ. ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿರುವ ಕೊಹ್ಲಿ ಪಡೆ, ವಿಶ್ವಕಪ್ ಎತ್ತಿಹಿಡಿಯುವ ನಿರೀಕ್ಷೆ ಮೂಡಿಸಿದೆ. ಈ ನಡುವೆ ಭಾರತ ತಂಡದಲ್ಲಿ ಮಂಗಳೂರು ಬಾಯ್ ಮಿಂಚು ಜೋರಾಗಿದೆ.
ಹೌದು, ಟೀಮ್ ಇಂಡಿಯಾ ಓಪನರ್ ಕೆ. ಎಲ್. ರಾಹುಲ್, ಇಂಗ್ಲೆಂಡ್ ನಲ್ಲಿ ಮಿಂಚುತ್ತಿದ್ದಾರೆ. ಬಾಂಗ್ಲಾ ಎದುರು ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ಫಾರ್ಮ್ ಕಂಡುಕೊಂಡ ರಾಹುಲ್, ನಂತರ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಎದುರಿನ ವಿಶ್ವಕಪ್ ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ರು. ಈ ನಡುವೆ ಓಪನರ್ ಬ್ಯಾಟ್ಸ್ ಮನ್ ಶಿಖರ್ ಧವನ್, ಗಾಯಗೊಂಡು ತವರಿಗೆ ಮರಳಿದ ಕಾರಣ, ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವ ಹೊಣೆ ರಾಹುಲ್ ಮೇಲೆ ಬಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಮಂಗಳೂರಿನ ಯಂಗ್ ಬ್ಯಾಟ್ಸ್ ಮನ್, ಪಾಕ್ ವಿರುದ್ಧದ ಹೈ ವೋಲ್ಟೆಜ್ ಪಂದ್ಯದಲ್ಲಿ ಮೊದಲ ವಿಕೆಟಿಗೆ ಶತಕದ ಜೊತೆಯಾಟವಾಡಿದ್ದಲ್ಲದೆ ವಯಕ್ತಿಕ ಅರ್ಧ ಶತಕ ಸಿಡಿಸಿದ್ರು. ನಂತರ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ 30 ರನ್ ಗಳಿಸಿದ ರಾಹುಲ್, ನಿನ್ನೆ ನಡೆದ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ 48 ರನ್ ಗಳಿಸಿ ಅರ್ಧ ಶತಕವನ್ನ ಮಿಸ್ ಮಾಡಿಕೊಂಡ್ರು.
ಒಟ್ಟಾರೆ ವಿಶ್ವಕಪ್ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿರೋ ರಾಹುಲ್, 172 ರನ್ ಕಲೆ ಹಾಕಿದ್ದಾರೆ. ಈ ಮೂಲಕ ತಂಡದಲ್ಲಿ ಭರವಸೆಯ ಬ್ಯಾಟ್ಸ್ ಮನ್ ಆಗಿದ್ದಾರೆ. ಟೂರ್ನಿಯಲ್ಲಿ ಇನ್ನು ಮುಂದೆ ದೊಡ್ಡದೊಡ್ಡ ಸವಾಲುಗಳು ಎದುರಾಗಲಿದ್ದು, ಆರಂಭಿಕನಾಗಿ ರಾಹುಲ್ ಹೆಗಲ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಈ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸೋ ಮೂಲಕ, ಅನಿರೀಕ್ಷಿತವಾಗಿ ತಂಡಕ್ಕೆ ಎದುರಾಗಿರುವ ಶಿಖರ್ ಧವನ್ ಅನುಪಸ್ಥಿತಿಯನ್ನ ಮರೆಮಾಚುವಂತೆ ರಾಹುಲ್ ಪ್ರದರ್ಶನ ನೀಡಬೇಕಾಗಿದೆ. ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತದ ಪರ ಕಣಕ್ಕಿಳಿಯುತ್ತಿರುವ ರಾಹುಲ್, ತಂಡದಲ್ಲಿ ಕನ್ನಡಿಗರ ಪ್ರತಿನಿಧಿಯಾಗಿದ್ದಾರೆ.
ಸಚಿನ್ ದಾಖಲೆ ಬ್ರೇಕ್ ಮಾಡಿದ ವಿರಾಟ್..!ಮಿಸ್ ಮಾಡದೇ ಈ ವಿಡಿಯೋ ನೋಡಿ