Friday, November 14, 2025

Latest Posts

ವೈಟ್ ಡಿಸ್ಚಾರ್ಜ್ ಬಗ್ಗೆ ಭಯಪಡಬೇಡಿ: ಈ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

- Advertisement -

ಹೆಣ್ಣು ಮಕ್ಕಳಿಗಿರುವ ಹಲವು ಸಮಸ್ಯೆಗಳಲ್ಲಿ ವೈಟ್ ಡಿಸ್ಚಾರ್ಜ್ ಕೂಡ ಒಂದು. ಅದು ನಾರ್ಮಲ್ ಆಗಿದ್ರು, ಕೆಲವರು ಆ ಬಗ್ಗೆ ಟೆನ್ಶನ್ ತೆಗೆದುಕೊಳ್ತಾರೆ. ಯಾಕಂದ್ರೆ ಅವರಿಗೆ ನಾರ್ಮಲ್ ವೈಟ್ ಡಿಸ್ಚಾರ್ಜ್ ಮತ್ತು ನಾರ್ಮಲ್ ಅಲ್ಲದ ವೈಟ್ ಡಿಸ್ಚಾರ್ಜ್ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ವೈದ್ಯೆ ದೀಪ್ಶಿಕಾ ಝಾ ಮಾಹಿತಿ ನೀಡಿದ್ದಾರೆ.

ಡಾ. ದೀಪ್ಶಿಕಾ ಪ್ರಕಾರ, ತಿಳಿ ಹಳದಿ ಬಣ್ಣಕ್ಕೆ ತಿರುಗದ, ವಾಸನೆ ಬರದ, ವೈಟ್ ಡಿಶ್ಚಾರ್ಜ್ ನಾರ್ಮಲ್ ವೈಟ್ ಡಿಶ್ಚಾರ್ಜ್. ಆದ್ರೆ ಅದು ತಿಳಿ ಹಳದಿ ಬಣ್ಣಕ್ಕೆ ತಿರುಗಿದ್ದು, ವಾಸನೆ ಬರುತ್ತಿದ್ದು, ನೀವು ಪ್ಯಾಡ್ ಬದಲಿಸುವಷ್ಟು ನಿಮಗೆ ತೊಂದರೆಯಾಗುತ್ತಿದ್ದರೆ, ಖಂಡಿತ ಅದು ನಾರ್ಮಲ್ ಅಲ್ಲ. ನಿಮಗೆ ಹಾಗೇನಾದರೂ ಆಗಿದ್ದಲ್ಲಿ, ಖಂಡಿತ ನೀವು ಈ ಬಗ್ಗೆ ವೈದ್ಯರ ಬಳಿ ಹೇಳಿಕೊಳ್ಳಬೇಕು. ಮತ್ತು ಅದಕ್ಕೆ ಸರಿಯಾದ ಚಿಕಿತ್ಸೆ ಪಡಿಯಬೇಕು.

ಇನ್ನು ನಾರ್ಮಲ್ ವೈಟ್ ಡಿಸ್ಚಾರ್ಜ್ ಎಂದರೆ, ಋತುಚಕ್ರಕ್ಕೂ ಕೆಲ ದಿನಗಳ ಮುಂಚೆಯಾಗುವ ಡಿಸ್ಚಾರ್ಜ್. ಆದ್ರೆ ನಿಮಗೇನಾದ್ರೂ, ಪ್ರತಿದಿನ ವೈಟ್ ಡಿಸ್ಚಾರ್ಜ್ ಹೆಚ್ಚೆಚ್ಚು ಹೋಗುತ್ತಿದ್ದರೆ, ಆ ಜಾಗದಲ್ಲಿ ತುರಿಕೆ ಸಮಸ್ಯೆ ಇದ್ದರೆ, ಗುಳ್ಳೆಗಳಾಗಿದ್ದರೆ, ಖಂಡಿತ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಚಿಕಿತ್ಸೆ ಪಡೆಯಿರಿ. ಇನ್ನು ಅಬ್ನಾರ್ಮಲ್ ಇನ್‌ಫೆಕ್ಷನ್ ಆಗಲು ಕಾರಣವೇನಂದ್ರೆ, ಆ ಜಾಗದಲ್ಲಿ ಇನ್‌ಪೆಕ್ಷನ್ಸ್ ಆಗಿರುತ್ತದೆ.

ಹಾಗಾದ್ರೆ ಆ ಇನ್‌ಫೆಕ್ಷನ್ ತಡೆಗಟ್ಟಬೇಕಾದರೆ, ನೀವು ಆ ಜಾಗವನ್ನ ಕ್ಲೀನ್ ಆಗಿ ಇಟ್ಟುಕೊಳ್ಳಿ. ಯೂರಿನ್ ಪಾಸ್ ಮಾಡುವುದನ್ನ ಎಂದಿಗೂ ತಡೆ ಹಿಡಿಯಬೇಡಿ. ಈ ಕಾರಣಕ್ಕೆ ಇನ್‌ಫೆಕ್ಷನ್ ಆಗುತ್ತದೆ. ಇನ್ನು ನಿಮಗೆ ಇನ್‌ಫೆಕ್ಷನ್ ಆಗಿದ್ರೆ, ಯಾವುದೇ ಕಾರಣಕ್ಕೂ ನಾಚಿಕೆ ಪಡದೇ, ಹೆದರದೇ ಚಿಕಿತ್ಸೆ ಪಡೆಯಿರಿ. ಯಾಕಂದ್ರೆ ಇಂಥ ತೊಂದರೆಗಳನ್ನು ಮುಚ್ಚಿಡುವುದು ಒಳ್ಳೆಯದಲ್ಲ.

- Advertisement -

Latest Posts

Don't Miss