ತಾವು ಫಾಲೋ ಮಾಡೋ ಬ್ಯೂಟಿ ಟಿಪ್ಸ್ ಕೊಟ್ಟ ನಟಿ ಲಾಸ್ಯಾ ನಾಗರಾಜ್..

ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ. ಲಾಸ್ಯಾ ಅವರು ಪಾಲೋ ಮಾಡುವ ಬ್ಯೂಟಿ ಟಿಪ್ಸನ್ನೇ ಅವರು ಶೇರ್ ಮಾಡಿದ್ದಾರೆ.

ಲಾಸ್ಯಾ ಶೂಟಿಂಗ್ ಹೋಗುವ ದಿನ ಮುಖಕ್ಕೆ ಐಸ್ ರಬ್‌ ಮಾಡ್ತಾರಂತೆ. ಐಸ್ ಕ್ಯೂಬ್ಸ್‌ನಿಂದ ಮಸಾಜ್ ಮಾಡುವುದರಿಂದ ಅವರಿಗೆ ಮೇಕಪ್ ಕರೆಕ್ಟ್ ಆಗಿ ಸೆಟ್ ಆಗುತ್ತದೆ. ಐಸ್ ಕ್ಯೂಬ್‌ನಿಂದ ಫೇಸ್‌ ಮಸಾಜ್ ಮಾಡದಿದ್ದಲ್ಲಿ, ಎಣ್ಣೆ ಚರ್ಮವಿದ್ದವರಿಗೆ ಮೇಕಪ್ ಸರಿಯಾಗಿ ಕೂರುವುದಿಲ್ಲ. ಹಾಗಾಗಿ ಐಸ್ ಕ್ಯೂಬ್‌ ಮಸಾಜ್ ಮುಖ್ಯ ಅಂತಾರೆ ಲಾಸ್ಯಾ.

ಅಲ್ಲದೇ ಆಯುರ್ವೇದಿಕ್ ಟಿಪ್ಸನ್ನೇ ಲಾಸ್ಯಾ ಹೆಚ್ಚಾಗಿ ಫಾಲೋ ಮಾಡೋದಂತೆ. ಹಣ್ಣು ಅಥವಾ ಯಾವುದಾದರೂ ತರಕಾರಿ ಕಟ್ ಮಾಡಿ, ಅದರಿಂದಲೂ ಫೇಸ್‌ ಮಸಾಜ್ ಮಾಡ್ತಾರೆ. ಅಲ್ಲದೇ ಅವರ ಅಮ್ಮ ಕೂಡ ತಲೆ ಕೂದಲ ಸೌಂದರ್‌ಯಕ್ಕಾಗಿ ಕೆಲವು ಹೇರ್ ಪ್ಯಾಕನ್ನ ಮನೆಯಲ್ಲೇ ತಯಾರಿಸಿ ಕೊಡ್ತಾರಂತೆ. ಲಾಸ್ಯಾರ ಸುಂದರವಾದ ಕೂದಲ ಹಿಂದಿರುವ ಜಾದೂ ಮೊಟ್ಟೆ. ಮೊಟ್ಟೆ ಬಳಸಿ, ನೀಳ ಕೇಶರಾಶಿ ಬಂದಿದೆ ಅಂತಾರೆ ಲಾಸ್ಯಾ.

ಅಲ್ಲದೇ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಲಾಸ್ಯಾ ಎಣ್ಣೆ ಬಳಸಿ ಬಾಡಿ ಮಸಾಜ್ ಮಾಡ್ತಾರೆ. ಇದರಿಂದ ಹಲವು ಸೌಂದರ್ಯ ಮತ್ತು ಆರೋಗ್ಯ ಪ್ರಯೋಜನಗಳಿದೆ ಅಂತಾರೆ ಲಾಸ್ಯಾ.

About The Author