Sunday, June 22, 2025

Latest Posts

ಈಗ ಸ್ಟ್ರೀಟ್ ಸ್ಟೈಲ್ ಪಾಲಕ್ ಪಕೋಡಾ ಚಾಟ್ ಮನೆಯಲ್ಲೇ ತಯಾರಿಸಿ..

- Advertisement -

ಆರೋಗ್ಯಕ್ಕೆ ಉತ್ತಮವಾಗಿರುವ, ಕಬ್ಬಿಣ ಸತ್ವವನ್ನು ಹೊಂದಿರುವ ಪಾಲಕ್ ಸೊಪ್ಪು ಸೇವಿಸಿದ್ರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಪಾಲಕ್‌ನಿಂದ ಪಕೋಡಾ, ಸಾಂಬಾರ್, ಪಲ್ಯ ತಯಾರಿಸಲಾಗತ್ತೆ. ಇಂದು ರುಚಿಕರವಾದ ಪಾಲಕ್ ಪಕೋಡಾ ಚಾಟ್ ತಯಾರಿಸೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ.

ಕೊಬ್ಬರಿ ಮತ್ತು ಶೇಂಗಾ ಚಟ್ನಿ ಪುಡಿಯನ್ನು ಈ ರೀತಿ ತಯಾರಿಸಿ ನೋಡಿ..

ಬೇಕಾಗುವ ಸಾಮಗ್ರಿ: ಒಂದು ಬೌಲ್ ಫ್ರೆಶ್ ಪಾಲಕ್, ಒಂದು ಕಪ್ ಜರಡಿ ಮಾಡಿ ಕ್ಲೀನ್ ಮಾಡಿದ ಕಡಲೆ ಹಿಟ್ಟು, ಅರ್ಧ ಕಪ್ ಅಕ್ಕಿ ಹಿಟ್ಟು, ಎರಡು ಸ್ಪೂನ್ ಕಾರ್ನ್ ಫ್ಲೋರ್, ಕಾಲು ಸ್ಪೂನ್ ಖಾರದ ಪುಡಿ, ಚಿಟಿಕೆ ಇಂಗು, ಕಾಲು ಸ್ಪೂನ್ ವೋಮ, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ನೀರು, ಬೇಕಾದ್ರೆ ಬೇಕಿಂಗ್ ಸೋಡಾ ಬಳಸಬಹುದು. ಕರಿಯಲು ಎಣ್ಣೆ. ಇನ್ನು ಚಾಟ್ ತಯಾರಿಸಲು, ಪುದೀನಾ ಚಟ್ನಿ, ಹುಣಸೆ ಚಟ್ನಿ, ಅರ್ಧ ಕಪ್ ಮೊಸರು, ಚಿಟಿಕೆ ಚಾಟ್‌ ಮಸಾಲೆ ಪುಡಿ ಮತ್ತು ಜೀರಿಗೆ ಪುಡಿ, ಎರಡು ಸಣ್ಣಗೆ ಕತ್ತರಿಸಿದ ಈರುಳ್ಳಿ, ಅರ್ಧ ಕಪ್ ಸೇವ್, ಅರ್ಧ ಕಪ್ ಖಾರಾ ಬೂಂದಿ, ಗಾರ್ನಿಶ್‌ಗಾಗಿ ತುರಿದ ಕ್ಯಾರೆಟ್.

ಪೂರಿ, ಚಪಾತಿಗೆ ಸೂಪರ್ ಕಾಂಬಿನೇಷನ್ ಸೋಯಾ ಚಂಕ್ಸ್ ಗ್ರೇವಿ..

ಮಾಡುವ ವಿಧಾನ: ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್‌, ಉಪ್ಪು, ಖಾರದ ಲಪುಡಿ, ಕೊಂಚ ಜಜ್ಜಿದ ವೋಮ, ಇಂಗು, ಮತ್ತು ನೀರು ಹಾಕಿ, ಬಜ್ಜಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ. 15 ನಿಮಿಷ ಪಕ್ಕಕ್ಕಿರಿಸಿ. ಈಗ ಪಾಲಕ್ ಎಲೆಯನ್ನ ಹಿಟ್ಟಲ್ಲಿ ಅದ್ದಿ, ಪಾಲಕ್ ಪಕೋಡಾ ತಯಾರಿಸಿಕೊಳ್ಳಿ.

ಈಗ ಈ ಪಕೋಡಾವನ್ನು ಪ್ಲೇಟ್‌ಗೆ ಹಾಕಿ, ಇದರ ಮೇಲೆ ಗ್ರೀನ್ ಚಟ್ನಿ, ಸ್ವೀಟ್ ಚಟ್ನಿ, ಎರಡು ಸ್ಪೂನ್ ಮೊಸರು, ಎರಡು ಸ್ಪೂನ್ ಈರುಳ್ಳಿ, ಚಾಟ್‌ ಮಸಾಲೆ ಪುಡಿ, ಜೀರಿಗೆ ಪುಡಿ, ಚಿಟಿಕೆ ಖಾರದ ಪುಡಿ, ಸ್ವಲ್ಪ ಸೇವ್ ಮತ್ತು ಖಾರಾ ಬೂಂದಿ ಹಾಕಿ, ಕೊನೆಗೆ ಕ್ಯಾರೆಟ್ ತುರಿಯಿಂದ ಗಾರ್ನಿಶ್ ಮಾಡಿದ್ರೆ, ಪಾಲಕ್ ಪಕೋಡಾ ಚಾಟ್ ರೆಡಿ.

- Advertisement -

Latest Posts

Don't Miss