ಈಗ ಮಹಾಲಯದ ದಿನಗಳು ನಡೆಯುತ್ತಿದೆ. ಇದೇ ತಿಂಗಳು 25ನೇ ತಾರೀಖಿಗೆ ಮಹಾಲಯ ಅಮವಾಸ್ಯೆ ಮುಗಿದು, ನವರಾತ್ರಿ ಶುರುವಾಗುತ್ತದೆ. ಈ ಸಮಯದಲ್ಲಿ 9 ದಿನ ಹಿಂದೂಗಳು ದೇವಿಯರ ಹೆಸರಿನಲ್ಲಿ ನವರಾತ್ರಿಯನ್ನು ಆಚರಿಸುತ್ತಾರೆ. ಹಲವೆಡೆ ಕೋಲಾಟವಾಡಿ, ಆ ಸದ್ದಿನಿಂದ ದೇವಿಯನ್ನು ಪ್ರಸನ್ನಗೊಳಿಸಲಾಗುತ್ತದೆ. ಇದೇ ರೀತಿ 9 ದಿನ 9 ರೀತಿಯ ನೈವೇದ್ಯವನ್ನು ದೇವಿಗೆ ಅರ್ಪಿಸಿದರೆ, ಉತ್ತಮ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ನವರಾತ್ರಿಯ ಮೊದಲನೇಯ ದಿನ ಯಾವ ನೈವೇದ್ಯವನ್ನು ಮಾಡಬಹುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..
ಸೌತ್ ಕೆನರಾ ಶೈಲಿಯ ಗೋಧಿ ಹಿಟ್ಟಿನ ಹಲ್ವಾ(ಗೋಧಿ ಶೀರಾ) ರೆಸಿಪಿ..
ನವರಾತ್ರಿಯ ಮೊದಲನೇಯ ದಿನ ಶೈಲಪುತ್ರಿಯ ಉಪಾಸನೆ ಮಾಡಲಾಗುತ್ತದೆ. ಈ ವೇಳೆ ಒಂದು ಸಣ್ಣ ಬಟ್ಟಲಿನಲ್ಲಿ, ಶುದ್ಧ ತುಪ್ಪವನ್ನು ಇಟ್ಟು ನೈವೇದ್ಯ ಮಾಡಬೇಕು. ಹಾಗಾಗಿ ಇಂದು ನಾವು ತುಪ್ಪ ಬಳಸಿ ಬೇಸನ್ ಲಡ್ಡು ಪ್ರಸಾದ ಮಾಡುವ ಬಗ್ಗೆ ತಿಳಿಯೋಣ..
ಮೊದಲಿಗೆ 6 ಸ್ಪೂನ್ ತುಪ್ಪವನ್ನು ಒಂದು ಬಾಣಲೆಗೆ ಹಾಕಿ, ಕೊಂಚ ಬಿಸಿ ಮಾಡಬೇಕು. ನಂತರ ಒಂದು ದೊಡ್ಡ ಕಪ್ ಸ್ವಚ್ಛಗೊಳಿಸಿದ ಕಡಲೆ ಹಿಟ್ಟನ್ನು ಇದಕ್ಕೆ ಹಾಕಿ, ಹುರಿಯಬೇಕು. ಘಮ ಬರುವವರೆಗೂ ಹುರಿದು, ಒಂದು ಕಪ್ ಸಕ್ಕರೆ ಅಥವಾ ಸಕ್ಕರೆ ಪುಡಿಯನ್ನು ಇದಕ್ಕೆ ಸೇರಿಸಿ, ಮತ್ತಷ್ಟು ಹುರಿಯಿರಿ. ಇದಕ್ಕೆ ಮತ್ತಷ್ಟು ತುಪ್ಪ ಸೇರಿಸುವ ಅವಶ್ಯಕತೆ ಇದ್ದಲ್ಲಿ, ಮತ್ತಷ್ಟು ತುಪ್ಪ ಸೇರಿಸಿ.
ಮಂಗಳೂರು ಶೈಲಿಯ ಗೋಧಿ ಕಡಿ ಪಾಯಸ ರೆಸಿಪಿ..
ಲಾಡು ಕಟ್ಟಲು ಬರುವ ಹದಕ್ಕೆ ಈ ಮಿಶ್ರಣ ತಯಾರಾಗಿರಬೇಕು. ಈಗ ಈ ಮಿಶ್ರಣವನ್ನು ಬಳಸಿ, ಲಾಡು ಕಟ್ಟಿ. ಬೇಕಾದಲ್ಲಿ ದ್ರಾಕ್ಷಿ ಮತ್ತು ಗೋಡಂಬಿ ಬಳಸಿ, ಲಾಡು ಕಟ್ಟಿದರೆ, ನವರಾತ್ರಿಯ ಮೊದಲ ದಿನ ದೇವಿಗೆ ನೈವೇದ್ಯಕ್ಕಿಡುವ, ಬೇಸನ್ ಲಾಡು ಪ್ರಸಾದ ಸಿದ್ಧ.