ಅನ್ನಾಹಾರವಿಲ್ಲದೆ ಸೀತೆ ಅಶೋಕ ವನದಲ್ಲಿ ಹೇಗೆ ಬದುಕಿದ್ದಳು..?

ಲಂಕಾಪತಿ ರಾವಣ, ರಾಮನ ಮೇಲಿನ ಸೇಡಿಗಾಗಿ, ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟಿದ್ದ. ಸೀತೆಯ ಮೇಲೆ ರಾವಣನಿಗೆ ಆಸೆ ಇದ್ದರೂ ಕೂಡ, ಅವನು ಆಕೆಯನ್ನು ಸ್ಪರ್ಶಿಸಿರಲಿಲ್ಲ. ಯಾಕಂದ್ರೆ ಅವಳು ಪರಿವೃತಾ ಶಿರೋಮಣಿಯಾಗಿದ್ದಳು. ಆಕೆಯನ್ನು ಮುಟ್ಟಿದರೆ, ಆ ಕ್ಷಣವೇ ಅವನು ಭಸ್ಮವಾಗುತ್ತಿದ್ದನೆಂದು ಅವನಿಗೆ ಗೊತ್ತಿತ್ತು. ಅಂಥ ಸ್ಥಾನದಲ್ಲಿ ಸೀತೆ ಅನ್ನಾಹಾರವನ್ನೂ ಮುಟ್ಟಿರಲಿಲ್ಲ. ಹಾಗಾದ್ರೆ ಸೀತೆ ಅಶೋಕವನದಲ್ಲಿ ಆಹಾರ ಸೇವಿಸದೇ, ಹೇಗಿದ್ದಳು..? ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

 

ಸೀತೆ ಅಶೋಕವನದಲ್ಲಿದ್ದಾಗ, ರಾಮನ ಯೋಚನೆಯಲ್ಲೇ ಊಟ ನಿದ್ದೆ, ನೀರನ್ನೂ ಕೂಡ ತ್ಯಜಿಸಿದ್ದಳು. ಯಾಕಂದ್ರೆ ಸೀತೆ ಲಕ್ಷ್ಮೀಯ ಅವತಾರವಾಗಿದ್ದಳು. ಹಾಗಾಗಿ ರಾಕ್ಷಸ ರಾಜನ ಸಂಸ್ಥಾನದಲ್ಲಿ ಆಕೆ ಊಟ ಮಾಡುವುದು ದೂರದ ಮಾತು, ನೀರನ್ನೂ ಕೂಡ ಕುಡಿಯುತ್ತಿರಲಿಲ್ಲ. ಆಗ ಅಲ್ಲಿದ್ದ ಓರ್ವ ರಾಕ್ಷಸಿ, ನೀನು ರಾವಣನನ್ನು ಒಪ್ಪಿಕೋ, ಆರಾಮವಾಗಿ, ರುಚಿ ರುಚಿಯಾದ ಭೋಜನವನ್ನುಂಡು ರಾಣಿಯಂತಿರು. ಯಾಕೆ ಹೀಗೆ ಉಪವಾಸವಿದ್ದು, ಕಷ್ಟ ಪಡುತ್ತಿ.

ಅಕ್ಟೋಬರ್ 2021ರ ಮಾಸ ಭವಿಷ್ಯ, ಈ ರಾಶಿಗೆ ಶುಕ್ರ ದೆಸೆ ಶುರೂ..?!

ರಾವಣ ರಾಜ ನಮಗೆಲ್ಲ ಆಜ್ಞೆ ಮಾಡಿದ್ದಾರೆ. ನೀವು ಊಟ ಮಾಡುವವರೆಗೂ ನಿಮಗೆ ತರಹೇವಾರಿಯಾಗಿ ಹೆದರಿಸಬೇಕಂತೆ. ನಾವೆಷ್ಟೇ ಹೆದರಿಸಿದರೂ ನೀವು ಯಾವುದಕ್ಕೂ ಜಗ್ಗದೇ, ಉಪವಾಸವಿರುವೆಯಲ್ಲ ಎನ್ನುತ್ತಾಳೆ. ಸೀತೆ ಮೌನವಾಗಿರುತ್ತಾರೆ. ಕೆಲ ದಿನಗಳ ಬಳಿಕ ರಾವಣನೇ ರುಚಿಯಾದ ಭೋಜನ ತೆಗೆದುಕೊಂಡು ಬರುತ್ತಾನೆ. ನಿನಗಾಗಿ ನಾನು ಮಂಡೋದರಿಯನ್ನೇ ದಾಸಿಯನ್ನಾಗಿ ಮಾಡಿಕೊಳ್ಳುವೆ ಎನ್ನುತ್ತಾನೆ. ಆದರೂ ಸೀತೆ ಒಪ್ಪುವುದಿಲ್ಲ.

ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆ ನಿಷೇಧವೇಕಿದೆ..?

ಆಗ ಇಂದ್ರನಿಗೆ ಈ ಬಗ್ಗೆ ಗೊತ್ತಾಗುತ್ತದೆ. ಹೀಗೆ ಆದರೆ ಅನರ್ಥವಾಗುತ್ತದೆ ಎಂದು ತಿಳಿದು, ಇಂದ್ರ ಸೀತೆಯಲ್ಲಿಗೆ ಬರುತ್ತಾನೆ. ಮೊದಲು ರಾವಣನೇ ವೇಷ ಬದಲಿಸಿ ಬಂದಿದ್ದಾನೆಂದು ಸೀತೆ ತಿಳಿದಿದ್ದಳು. ಆದ್ರೆ ಇಂದ್ರನ ಮಾತಿನಿಂದ ಆಕೆಗೆ ಅವನು ಇಂದ್ರನೇ ಎಂದು ಗೊತ್ತಾಯಿತು. ಆಗ ಇಂದ್ರನ ಬಳಿ ಶ್ರೀರಾಮನ ಬಗ್ಗೆ ಕೇಳುತ್ತಾಳೆ ಸೀತೆ. ಆಗ ಇಂದ್ರ ಈ ಪಾಯಸವನ್ನು ಸೇವಿಸಿ. ಇದನ್ನು ಸೇವಿಸುವುದರಿಂದ ನಿಮಗೆ ಹಲವು ವರ್ಷಗಳ ಕಾಲ ಹಸಿವಾಗುವುದಿಲ್ಲ ಎಂದು ಪಾಯಸ ಕೊಡುತ್ತಾನೆ. ಅದನ್ನು ಸೇವಿಸಿಯೇ ಸೀತೆ ಅಷ್ಟು ವರ್ಷ ಅಶೋಕ ವನದಲ್ಲಿ ಜೀವಿಸುತ್ತಾಳೆ.

About The Author