Saturday, June 21, 2025

Latest Posts

ಪಿಸಿಓಡಿ ಸಮಸ್ಯೆ ಪರಿಹಾರಕ್ಕೆ ಸೇವಿಸಬೇಕಾದ ಆಹಾರಗಳಿವು..

- Advertisement -

ಇಂದಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಪಿಸಿಓಡಿ ಸಮಸ್ಯೆ ಕಂಡುಬರುತ್ತಿದೆ. ಜಂಕ್ ಫುಡ್ ಸೇವನೆ, ಬ್ಯುಸಿ ಲೈಫ್, ಸರಿಯಾಗಿ ಸಮಯಕ್ಕೆ, ಸರಿಯಾದ ಆಹಾರ ಸೇವನೆ ಇಲ್ಲದ ಕಾರಣ ಹೆಣ್ಣು ಮಕ್ಕಳಲ್ಲಿ ಪಿಸಿಓಡಿ ಸಮಸ್ಯೆ ಕಾಣಿಸುತ್ತಿದೆ. ಹಾಗಾದ್ರೆ ಪಿಸಿಓಡಿ ಸಮಸ್ಯೆ ಬರಬಾರದು ಎಂದಲ್ಲಿ ಎಂಥ ಆಹಾರವನ್ನು ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..

ತಂದೆ-ತಾಯಿಯಾಗಲು ಬಯಸುವವರು ಈ ಆಹಾರಗಳನ್ನು ಸೇವಿಸಿ..

ಪಿಸಿಓಡಿ ಸಮಸ್ಯೆ ಇದ್ದವರಿಗೆ ಬೊಜ್ಜು ಬೆಳೆಯಬಹುದು. ಪ್ರತಿ ತಿಂಗಳು ಸರಿಯಾಗಿ ಋತುಚಕ್ರವಾಗುವುದಿಲ್ಲ. ಕೂದಲು ಉದುರುವ ಸಮಸ್ಯೆ, ಮೊಡವೆ ಸಮಸ್ಯೆ ಉಂಟಾಗಬಹುದು. ಹಾಗಾಗಿ ಈ ಬಗ್ಗೆ ವೈದ್ಯರ ಬಳಿ ಹೋಗಿ ಸರಿಯಾದ ಚಿಕಿತ್ಸೆ ಪಡೆಯುವುದು ಉತ್ತಮ. ಆದ್ರೆ ನೀವು ಪಿಸಿಓಡಿ ಸಮಸ್ಯೆಯನ್ನ ಕಂಟ್ರೋಲ್‌ನಲ್ಲಿಡಲು ಕೆಲ ನಿಯಮಗಳನ್ನ ಅನುಸರಿಸಬಹುದು.

ಪಿಸಿಓಡಿ ಸಮಸ್ಯೆ ಇದ್ದವರು, ಹೆಚ್ಚು ಜಂಕ್‌ ಫುಡ್ ತಿನ್ನಬಾರದು. ಬೇಕರಿ ತಿಂಡಿ, ಮೈದಾ, ಸಕ್ಕರೆ, ಇಂಥವನ್ನೆಲ್ಲ ತ್ಯಜಿಸಬೇಕು. ಹೆಚ್ಚು ಹಣ್ಣು, ತರಕಾರಿ, ಜ್ಯೂಸ್, ಎಳನೀರು, ಸೇವಿಸಬೇಕು. ಕರಿದ ಪದಾರ್ಥಗಳು, ಬೀದಿ ಬದಿ ಸಿಗುವ ತಿಂಡಿಗಳನ್ನು ತಿನ್ನವುದನ್ನ ಸ್ಟಾಪ್ ಮಾಡಿ. ರಾಗಿ, ಗೋಧಿ, ಬ್ರೌನ್ ರೈಸ್ ತಿನ್ನಬಹುದು.

ರೆಸ್ಟೋರೆಂಟ್ ಸ್ಟೈಲ್ ಮ್ಯಾಂಗೋ ಮಸ್ತಾನಿ ರೆಸಿಪಿ..

ಇನ್ನು ಪ್ರತಿದಿನ ಧ್ಯಾನ, ವ್ಯಾಯಾಮ ಮಾಡುವುದು ತುಂಬಾ ಇಂಪಾರ್ಟೆಂಟ್. ವಾಕಿಂಗ್, ವ್ಯಾಯಾಮ ಸರಿಯಾಗಿ ಮಾಡಿದ್ದಲ್ಲಿ, ನಿಮ್ಮ ಋತುಚಕ್ರ ಸರಿಯಾಗಿ ಆಗುತ್ತದೆ. ತ್ವಚೆ, ಕೂದಲ ಆರೋಗ್ಯಕ್ಕೂ, ಜೀರ್ಣಕ್ರಿಯೆ ಸಮಸ್ಯೆಗೂ ವಾಕಿಂಗ್, ಜಾಗಿಂಗ್, ವ್ಯಾಯಾಮ ತುಂಬಾ ಅಗತ್ಯವಾಗಿದೆ. ಹಾಗಾಗಿ ಡಯಟ್ ಮಾಡುವುದರ ಜೊತೆಗೆ, ವ್ಯಾಯಾಮ ಕೂಡಾ ಇಂಪಾರ್ಟೆಂಟ್ ಆಗಿದೆ.

- Advertisement -

Latest Posts

Don't Miss