ಸಿ ಸೆಕ್ಷನ್ ಆದ ಬಳಿಕ ಏನು ಮಾಡಬೇಕು..? ಏನು ಮಾಡಬಾರದು..?- ಭಾಗ 2

ಮೊದಲ ಭಾಗದಲ್ಲಿ ನಾವು ಸಿ ಸೆಕ್ಷನ್ ಡಿಲೆವರಿಯಾದ ಮೇಲೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದೆವು. ಅದರ ಮುಂದುವರಿದ ಭಾಗವಾಗಿ, ಸಿ ಸೆಕ್ಷನ್ ಆದಮೇಲೆ ಏನು ಮಾಡಬಾರದು ಅಂತಾ ಹೇಳಲಿದ್ದೇವೆ.

ಸಿ ಸೆಕ್ಷನ್ ಡಿಲೆವರಿ ಮುಗಿದ ಮೇಲೆ 2 ತಿಂಗಳು ಯಾವುದೇ ಕೆಲಸ ಮಾಡಬಾರದು. ಮತ್ತು ಚೆನ್ನಾಗಿ ರೆಸ್ಟ್ ಮಾಡಬೇಕು. ಒಂದು ವರ್ಷದ ತನಕ ಅತೀ ಭಾರವಾದ ವಸ್ತುವನ್ನ ಎತ್ತಬೇಡಿ. ಆಪರೇಶನ್ ಆಗಿರುವ ಜಾಗಕ್ಕೆ ವೈದ್ಯರು ಸೂಚಿಸುವ ಕ್ರೀಮ್ ಅಥವಾ ಪೌಡರನ್ನು ತಪ್ಪದೇ, ಹಚ್ಚಿ. ಯಾವುದೇ ಕಾರಣಕ್ಕೂ ಬಿಸಿ ನೀರು ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದನ್ನು ಮರಿಯಬೇಡಿ.

ಸಿ ಸೆಕ್ಷನ್ ಆದ ಬಳಿಕ ಏನು ಮಾಡಬೇಕು..? ಏನು ಮಾಡಬಾರದು..?- ಭಾಗ 1

ಮುಖ್ಯವಾದ ವಿಷಯ ಅಂದ್ರೆ ಸಿ ಸೆಕ್ಷನ್ ಆದಾಗ, ಮಗುವಿಗೆ ಸ್ತನಪಾನ ಮಾಡಿಸಲು ಹಲವರಿಗೆ ತೊಂದರೆಯಾಗುತ್ತದೆ. ಸರಿಯಾಗಿ ಹಾಲು ಉತ್ಪತ್ತಿಯಾಗಿರುವುದಿಲ್ಲ. ಹಾಗಾಗಿ ತೆಂಗಿನ ಹಾಲಿನ ಪದಾರ್ಥ, ತೋವೆ, ಬಿಸಿ ನೀರು, ಬೆಚ್ಚಗಿನ ಹಾಲನ್ನ ತಪ್ಪದೇ ಸೇವಿಸಬೇಕು. ಇನ್ನು ಯಾವುದೇ ಕಾರಣಕ್ಕೂ ಡಿಲೆವರಿ ಆಯ್ತು ಅಂತಾ, ನಿಮಗೆ ಬೇಕಾದ ಭಂಗಿಯಲ್ಲಿ ಮಲಗಬೇಡಿ. ಸರಿಯಾದ ರೀತಿಯಲ್ಲೇ ಮಲಗಿ, ಇಲ್ಲವಾದಲ್ಲಿ ಭವಿಷ್ಯದಲ್ಲಿ ಬೆನ್ನು ನೋವಿನ ಸಮಸ್ಯೆ ಎದುರಿಸಬೇಕಾಗುತ್ತದೆ.

ಇನ್ನು ಹೊಟ್ಟೆ ಬರುವ ಸಾಧ್ಯತೆ ಹೆಚ್ಚಿದ್ದು, ಒಂದು ತಿಂಗಳ ಬಳಿಕ, ಆಪರೇಶನ್ ಮಾಡಿದ ಜಾಗ ಡ್ರೈ ಆದಾಗ, ಹೊಟ್ಟೆಗೆ ಬಟ್ಟೆ, ಅಥವಾ ಬೆಲ್ಟ್ ಕಟ್ಟುವುದನ್ನು ಮರಿಯಬೇಡಿ. ಮೈ ಕೈಗೆ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿ, ಬೆಚ್ಚಗೆ ಬಟ್ಟೆ ಹಾಕಬೇಕು. ಯಾವುದೇ ಕಾರಣಕ್ಕೂ ಸ್ನಾನ ಮಾಡುವಾಗ ನಿರ್ಲಕ್ಷ್ಯ ಮಾಡಬೇಡಿ. ದೇಹಕ್ಕೆ ಎಣ್ಣೆ ಮಸಾಜ್ ಮಾಡಿ, ಬಿಸಿ ನೀರಿನ ಸ್ನಾನ ಮಾಡಿ, ಮೈ ಕೈ ಕಿವಿ ಮುಚ್ಚುವಂತೆ ಬಟ್ಟೆ ಧರಿಸಿ, ಹೊದಿಕೆ ಹೊದ್ದು ಮಲಗಿ. ಫ್ಯಾನ್ ಗಾಳಿ ಬಳಸಬೇಡಿ.

40 ವರ್ಷ ದಾಟಿದ ಬಳಿಕ ಮಹಿಳೆಯರು ಅನುಸರಿಸಬೇಕಾದ ಟಿಪ್ಸ್‌ಗಳಿವು..

ಯಾಕಂದ್ರೆ ನಿಮ್ಮ ದೇಹದಿಂದ ಸರಿಯಾಗಿ ಬೆವರು ಹೊರ ಹೋದಾಗಲೇ, ನೀವು ಆರೋಗ್ಯವಾಗಿರುತ್ತೀರಿ. ಹಾಗಾಗಿ ನೀವೂ ಬೆಚ್ಚಗಿರಿ. ಮಗುವನ್ನೂ ಬೆಚ್ಚಗಿರಿಸಿ. ಇನ್ನು ಮಗುವಿಗೆ ಹಾಲು ಕುಡಿಸುವಾಗ, ಎದ್ದು ಕುಳಿತೇ ಹಾಲು ಕುಡಿಸಿ. ಮಗು ಮಲಗಿ ಹಾಲು ಕುಡಿದು, ಆರಾಮವಾಗಿ ನಿದ್ದೆ ಮಾಡಲು ಕಲಿತಾಗಲೇ, ಮಲಗಿ ಹಾಲು ಕೊಡಿ. ಇಲ್ಲವಾದಲ್ಲಿ, ಮಗುವಿಗೆ ಉಸಿರುಗಟ್ಟುವ ಸಾಧ್ಯತೆ ಇರುತ್ತದೆ.

About The Author