Tuesday, October 14, 2025

Latest Posts

ಈ ಸಮಸ್ಯೆ ಇದ್ದವರು ಪಾಲಕ್ ಮತ್ತು ಮೆಂತ್ಯೆ ಸೊಪ್ಪಿನ ಸೇವನೆ ಮಾಡಲೇಬೇಡಿ..

- Advertisement -

ಪಾಲಕ್ ಮತ್ತು ಮೆಂತ್ಯೆ ಸೊಪ್ಪಿನ ಸೇವನೆ ಮಾಡುವುದರಿಂದ ಎಷ್ಟೆಲ್ಲ ಲಾಭವಿದೆ ಅಂತಾ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ಎಲ್ಲರೂ ತಿನ್ನುವಂತಿಲ್ಲ. ಆರೋಗ್ಯ ಸರಿ ಇದ್ದವರಷ್ಟೇ ಈ ಸೊಪ್ಪುಗಳನ್ನ ತಿನ್ನಬಹುದು. ಹಾಗಾದ್ರೆ ಯಾವ ಸಮಸ್ಯೆ ಇದ್ದವರು ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ..

ದೇಹದಲ್ಲಿ ರಕ್ತ ಕಡಿಮೆಯಾಗಿದ್ದರೆ, ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿದ್ದರೆ, ಪಾಲಕ್ ತಿನ್ನಬೇಕು, ಮೆಂತ್ಯೆ ತಿನ್ನಬೇಕು. ಅಲ್ಲದೇ, ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗಿದ್ದರೆ, ಪಾಲಕ್ ಸೊಪ್ಪಿನ ಪದಾರ್ಥ ಸೇವನೆ ಮಾಡುವುದರಿಂದ ಈ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಆದ್ರೆ ಎಲ್ಲರೂ ಹೀಗೆ ಪಾಲಕ್ ಮತ್ತು ಮೆಂತ್ಯೆ ಸೇವನೆ ಮಾಡುವಂತಿಲ್ಲ. ಯಾರಿಗೆ ಪದೇ ಪದೇ ಬೇಧಿಯಾಗುವ ಸಮಸ್ಯೆ ಇರುತ್ತದೆಯೋ, ಅವರು ಪಾಲಕ್ ಮತ್ತು ಮೆಂತ್ಯೆ ಸೊಪ್ಪಿನ ಪದಾರ್ಥ ತಿನ್ನಬಾರದು.

ಯಾರಿಗೆ ಪದೇ ಪದೇ ಬೇಧಿಯಾಗುತ್ತದೆಯೋ, ಅಂಥವರು ಪಾಲಕ್ ಮತ್ತು ಮೆಂತ್ಯೆ ತಿಂದರೆ, ಆ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಅಲ್ಲದೇ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿಲ್ಲವೆಂದಲ್ಲಿ, ಕಿಡ್ನಿ ಸಮಸ್ಯೆ ಇದ್ದವರು ಪಾಲಕ್ ಸೊಪ್ಪನ್ನ ಮತ್ತು ಮೆಂತ್ಯೆಸೊಪ್ಪನ್ನ ತಿನ್ನಬೇಡಿ. ಯಾಕಂದ್ರೆ ಮೆಂತ್ಯೆ ಸೊಪ್ಪನ್ನ ಶುಗರ್ ಇದ್ದವರಿಗೆ ತಿನ್ನೋಕ್ಕೆ ಹೇಳ್ತಾರೆ. ಯಾಕಂದ್ರೆ ಅವರಿಗೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಮೆಂತ್ಯೆ ತಿನ್ನುವುದರಿಂದ ಆ ಸಮಸ್ಯೆ ತಪ್ಪುತ್ತದೆ.

ಅದೇ ರೀತಿ ಪಾಲಕ್ ಸೊಪ್ಪನ್ನ ಜೀರ್ಣಕ್ರಿಯೆ ಸರಿಯಾಗಿ ಆಗದೇ ಇದ್ದರೆ, ಮಲಬದ್ಧತೆ ಇದ್ದರೆ ತಿನ್ನೋಕ್ಕೆ ಹೇಳ್ತಾರೆ. ಹಾಗಾಗಿ  ಮಲ ವಿಸರ್ಜನೆ ಪದೇ ಪದೇ ಆಗುವವರು ಪಾಲಕ್ ತಿನ್ನಬಾರದು ಮತ್ತು ಮೂತ್ರ ವಿಸರ್ಜನೆ ಸರಿಯಾಗಿ ಆಗದವರು ಮೆಂತ್ಯೆಸೊಪ್ಪನ್ನ ತಿನ್ನಬಾರದು.

ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

ಉಪಯುಕ್ತವಾದ ಕಿಚನ್ ಟಿಪ್ಸ್..

ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?

ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು..?

- Advertisement -

Latest Posts

Don't Miss