ಬಿಳಿಯಾದ ಮುಖವಿದ್ದು, ಸುಂದರವಾದ ಕಣ್ಣು, ಮೂಗು ಇದ್ದರೂ ಕೂಡ, ಕಣ್ಣಿನ ಸುತ್ತ ಕಪ್ಪು ಕಲೆ ಇದ್ದರೆ, ಸೌಂದರ್ಯ ಹಾಳಾದಂತೆ. ಹಾಗಾಗಿ ಅದಕ್ಕೆ ಬೇಕಾದ ಪರಿಹಾರವನ್ನ ಮಾಡಿಕೊಳ್ಳಬೇಕು. ಹಾಗಾಗಿ ಇಂದು ನಾವು ಡಾರ್ಕ್ ಸರ್ಕಲ್ ತೆಗಿಯಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ..
ಮೊದಲನೇಯದಾಗಿ ನೀವು ಮದ್ಯಪಾನ ಅಥವಾ ಧೂಮಪಾನ ಮಾಡುವವರಾಗಿದ್ರೆ, ಅದನ್ನ ಮೊದಲು ತ್ಯಜಿಸಿ. ಅದರಿಂದಲೇ ಕಣ್ಣಿನ ಕಪ್ಪು ಕೆಲ ಹೆಚ್ಚಾಗೋದು. ಇನ್ನು ಹೆಚ್ಚು ಮೊಬೈಲ್ ಮತ್ತು ಲ್ಯಾಪ್ಟಾಪ್, ಕಂಪ್ಯೂಟರ್ ಬಳಕೆಯಿಂದಲೂ ಕಣ್ಣಿನ ಸುತ್ತಲು ಕಪ್ಪಗಾಗುತ್ತದೆ. ಅಲ್ಲದೇ ದೇಹದಲ್ಲಿ ಜಿಂಕ್, ವಿಟಾಮಿನ್, ಕ್ಯಾಲ್ಶಿಯಂ ಕೊರತೆ ಇದ್ದಲ್ಲಿ, ನಿಮಗೆ ವೀಕನೆಸ್ ಆಗಿ, ಈ ರೀತಿ ಕಣ್ಣಿನ ಸುತ್ತಲೂ ಕಪ್ಪಗಾಗುತ್ತದೆ. ಹಾಗಾಗಿ ಜಂಕ್ ಫುಡ್ ಸೇವನೆ ಕಡಿಮೆ ಮಾಡಿ, ಉತ್ತಮ ಆಹಾರ ಸೇವಿಸಿ.
ಇನ್ನು ಕೆಲಸದ ಒತ್ತಡ, ಮನೆಯಲ್ಲಿ ಜಗಳ, ನೆಮ್ಮದಿ ಹಾಳಾಗುವುದರಿಂದಲೂ ಕಣ್ಣಿನ ಸುತ್ತಲೂ ಕಪ್ಪಾಗುತ್ತದೆ. ಹಾಗಾಗಿ ಕೆಲಸದ ಬಗ್ಗೆ, ಮನೆಯಲ್ಲಿ ನಡೆಯುವ ಜಗಳದ ಬಗ್ಗೆ ಹೆಚ್ಚು ಟೆನ್ಶನ್ ತೆಗೆದುಕೊಳ್ಳಬೇಡಿ. ಇದಕ್ಕಾಗಿ ನೀವು ಧ್ಯಾನ ಮಾಡುವುದು ಉತ್ತಮ. ಶಾಂತವಾದ ಜಾಗದಲ್ಲಿ ಧ್ಯಾನ ಮಾಡುವುದರಿಂದ ಏಕಾಗೃತೆ ಹೆಚ್ಚುತ್ತದೆ. ಕಣ್ಣಿನ ಆರೋಗ್ಯವೂ ಉತ್ತಮವಾಗಿರುತ್ತದೆ.
ನೆಮ್ಮದಿಯಾಗಿ ನಿದ್ದೆ ಮಾಡಿ. ಒಮ್ಮೊಮ್ಮೆ ನಿದ್ದೆ ಸರಿಯಾಗಿ ಆಗದಿದ್ದಾಗಲೂ, ಕಣ್ಣಿನ ಸುತ್ತಲೂ ಕಪ್ಪುಗಟ್ಟುತ್ತದೆ. ಹಾಗಾಗಿ ಸರಿಯಾಗಿ ನಿದ್ದೆ ಮಾಡಿ. 8 ಗಂಟೆಗಲ ಕಾಲ ನಿದ್ರಿಸುವುದು ತುಂಬಾ ಮುಖ್ಯ. ಇನ್ನು ರಾತ್ರಿ ಮಲಗುವಾಗ ಸಾಸಿವೆ ಎಣ್ಣೆಯನ್ನ ಕಣ್ಣಿನ ಕೆಳಗೆ ಮಸಾಜ್ ಮಾಡಿ ಮಲಗಿ. ಕೆಲವೇ ದಿನಗಳಲ್ಲಿ ಡಾರ್ಕ್ ಸರ್ಕಲ್ ಮಾಯವಾಗುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ಸಾಸಿವೆ ಎಣ್ಣೆ ಕಣ್ಣಿಗೆ ತಾಕದಂತೆ ನೋಡಿಕೊಳ್ಳಿ.