ಅವಲಕ್ಕಿ ಮತ್ತು ಮೊಸರು ಸೇರಿಸಿಯೂ ಪಡ್ಡು ಮಾಡಬಹುದು..

ಅವಲಕ್ಕಿ ಮೊಸರನ್ನ ಸೇರಿಸಿದ್ರೆ, ಹೊಟ್ಟೆ ಹಸಿವಾದಾಗ ತಿನ್ನಬಹುದಾದ ಸಿಂಪಲ್ ತಿಂಡಿಯಾಗತ್ತೆ. ನೀವು ಇದಕ್ಕೆ ಉಪ್ಪು ಹಾಕಬಹುದು, ಸಕ್ಕರೆಯೂ ಹಾಕಬಹುದು. ಆದ್ರೆ ಇವೆರಡನ್ನ ಸೇರಿಸಿ, ಟೇಸ್ಟಿಯಾಗಿರುವ ಪಡ್ಡನ್ನ ಕೂಡ ತಯಾರಿಸಬಹುದು. ಹಾಗಾದ್ರೆ ಪಡ್ಡು ತಯಾರಿಸೋಕ್ಕೆ, ಇದರೊಟ್ಟಿಗೆ ಇನ್ನು ಏನೇನು ಬೇಕು ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅವಲಕ್ಕಿ, ಅರ್ಧ ಕಪ್ ರವೆ ಮತ್ತು ಅರ್ಧ ಕಪ್ ಮೊಸರು, ಒಂದು ಕಪ್ ತುರಿದ ಕ್ಯಾರೆಟ್- ಬೇಯಿಸಿದ ಕಾರ್ನ್- ಕ್ಯಾಪ್ಸಿಕಂ- ಈರುಳ್ಳಿ ಮಿಶ್ರಣ, ಕೊಂಚ ಜೀರಿಗೆ, ಒಂದು ಹಸಿಮೆಣಸಿನಕಾಯಿ, ಕೊಂಚ ಕೊತ್ತೊಂಬರಿ ಸೊಪ್ಪು, ತುರಿದ ಶುಂಠಿ, ಪಡ್ಡಪ ತಯಾರಿಸಲು ಬೇಕಾಗುವಷ್ಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಅವಲಕ್ಕಿಯನ್ನು ತೊಳೆದು, 5 ನಿಮಿಷ ನೆನೆಸಿಡಿ. ನಂತರ ನೀರು ತೆಗೆದು, ಮ್ಯಾಶ್ ಮಾಡಿ. ಇದಕ್ಕೆ ಮೊಸರು ಮತ್ತು ರವೆ ಸೇರಿಸಿ. ಈಗ ತುರಿದ ಕ್ಯಾರೆಟ್- ಬೇಯಿಸಿದ ಕಾರ್ನ್- ಕ್ಯಾಪ್ಸಿಕಂ- ಈರುಳ್ಳಿ, ಜೀರಿಗೆ, ಹಸಿಮೆಣಸಿನಕಾಯಿ, ಕೊತ್ತೊಂಬರಿ ಸೊಪ್ಪು, ಉಪ್ಪು ಮತ್ತು ಬೇಕಾದಷ್ಟು ನೀರು ಸೇರಿಸಿ, ಬ್ಯಾಟರ್ ತಯಾರಿಸಿಕೊಳ್ಳಿ. ಈಗ ಅಪ್ಪೆ ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಕೊಂಚ ಎಣ್ಣೆ ಹಾಕಿ, ಈ ಬ್ಯಾಟರ್ ಹಾಕಿ ಬೇಯಿಸಿದ್ರೆ, ಪಡ್ಡು ರೆಡಿ.

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

ತರಕಾರಿಯಿಂದ ಪೋಷಕಾಂಶಗಳನ್ನ ಹೀಗೆ ಪಡೆಯಿರಿ..

ಸಕ್ಕರೆ ಬದಲು ನೀವು ಈ 5 ವಸ್ತುಗಳನ್ನ ಬಳಸಬಹುದು..

About The Author