Saturday, June 21, 2025

Latest Posts

ಸಿಗರೇಟ್, ಶರಾಬು, ಗುಟ್ಕಾ ಎಲ್ಲದರ ಚಟ ಬಿಡಿಸುವುದು ಹೇಗೆ..?- ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು, ಸಿಗರೇಟ್, ಗುಟ್ಕಾ, ಮತ್ತು ಶರಾಬಿನ ಚಟ ಬಿಡಿಸಲು ಏನೇನು ಮಾಡಬಹುದು ಅಂತಾ ಹೇಳಿದ್ದೇವೆ. ಅದರ ಮುಂದುವರಿದ ಭಾಗವಾಗಿ ಈಗ ನಾವು ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಹೇಳಲಿದ್ದೇವೆ.

ದೇಹದಲ್ಲಿ ಸಲ್ಫರ್ ಅಂಶ ಕಡಿಮೆಯಾದಾಗ, ಮನುಷ್ಯನಿಗೆ ತನ್ನ ಮನಸ್ಸಿನ ಮೇಲೆ ಹಿಡಿತವಿರುವುದಿಲ್ಲ. ಹಾಗಾಗಿ ಅವನು ಚಟದ ದಾಸನಾಗುತ್ತಾನೆ. ಅವನು ಈ ಎಲ್ಲ ವಸ್ತು ಸೇವಿಸಿದಷ್ಟು ಅವನ ದೇಹದಲ್ಲಿ ಮತ್ತಷ್ಟು ಸಲ್ಫರ್ ಅಂಶ ಕಡಿಮೆಯಾಗುತ್ತ ಹೋಗುತ್ತದೆ. ಹಾಗಾಗಿ ಆ ಚಟವನ್ನು ಬಿಡುವ ಮನಸ್ಸಾದರೂ, ಅದನ್ನು ಬಿಡಲಾಗುವುದಿಲ್ಲ. ಹಾಗಾಗಿಯೇ ಶುಂಠಿ ಬಳಸಲು ಹೇಳೋದು. ಶುಂಠಿ ಸೇವನೆಯಿಂದ ದೇಹದಲ್ಲಿ ಸಲ್ಪರ್ ಅಂಶ ಹೆಚ್ಚುತ್ತದೆ. ಚಟ ಬಿಟ್ಟು ಹೋಗುತ್ತದೆ.

ನಿಮಗೆ ಶುಂಠಿ, ನಿಂಬೆರಸ, ಕಪ್ಪು ಉಪ್ಪು ಸೇರಿಸಿ, ಸೇವಿಸಲು ಆಗದಿದ್ದಲ್ಲಿ, ಹೋಮಿಯೋಪತಿಕ್ ಅಂಗಡಿಯಲ್ಲಿ ಸಲ್ಪರ್ ಬಾಟಲಿ ಸಿಗುತ್ತದೆ. ಚಿಕ್ಕ ಬಾಟಲಿ ತೆಗೆದುಕೊಂಡರೆ ಸಾಕು. ಇದು ನೀರಿನಂತೆ ಇರುತ್ತದೆ. ಹಾಗಾಗಿ ಇದನ್ನು ಚಿಕ್ಕ ಮಕ್ಕಳ ಕೈಗೆ ಸಿಗುವ ಹಾಗೆ ಇಡಬಾರದು. ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಟ ಇದ್ದವರು, ಇದು ಒಂದೇ ಒಂದು ಡ್ರಾಪ್ಸ್ ನಾಲಿಗೆಯ ಮೇಲೆ ಹಾಕಬೇಕು. ಯಾವುದೇ ಕಾರಣಕ್ಕೂ ಇದಕ್ಕಿಂತ ಹೆಚ್ಚು ಸೇವಿಸಬಾರದು. ಕೇವಲ ಮೂರು ದಿನ ಈ ಪ್ರಯೋಗ ಮಾಡಿ ನೋಡಿ. ನಿಮ್ಮ ಚಟ ಬಿಟ್ಟು ಹೋಗುತ್ತದೆ.

ಆದರೆ ನಿಮಗೆ ಪ್ರತಿದಿನ ಕುಡಿಯಲೇಬೇಕು ಎಂದಲ್ಲಿ, ವಾರಕ್ಕೊಮ್ಮೆ ಈ ಸಲ್ಫರ್ನ್ನು ಒಂದು ದಿನ ಖಾಲಿ ಹೊಟ್ಟೆಯಲ್ಲಿ ಒಂದು ಡ್ರಾಪ್ ತೆಗೆದುಕೊಳ್ಳಿ. ಆದ್ರೆ ಪ್ರತಿದಿನ ತೆಗೆದುಕೊಳ್ಳಬೇಡಿ. ಒಂದೇ ಬಾರಿ ಮೂರು ದಿನ. ಅಥವಾ ವಾರಕ್ಕೆ ಒಂದು ಬಾರಿ ತೆಗೆದುಕೊಳ್ಳಬೇಕು. ಇನ್ನು ನೀವು ಇದನ್ನು ಖರೀದಿಸಬೇಕಾದರೆ, 200 ಪೊಟೆನ್ಸಿ ಇರುವ ಸಲ್ಫರ್ ತೆಗೆದುಕೊಳ್ಳಿ.

ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ, ನೀವು ಯಾರಿಗೆ ಶರಾಬಿನ ಚಟ ಬಿಡಿಸಲು ಪ್ರಯತ್ನಿಸುತ್ತಿದ್ದೀರೋ, ಅವರು ಅಡನ್ನು ಬಿಡಲು ಇಷ್ಟಪಡದಿದ್ದಲ್ಲಿ, ವಾರಕ್ಕೆ ಒಂದು ಬಾರಿ ಅವರು ಕುಡಿಯುವ ನೀರಿನಲ್ಲಿ ಒಂದು ಡ್ರಾಪ್ ಸಲ್ಫರ್ ಹಾಕಿ, ಮಿಕ್ಸ್ ಮಾಡಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಸಿರಿ. ಇದನ್ನ ಪ್ರತಿದಿನ ಮಾಡುವಂತಿಲ್ಲ. ಬರೀ ವಾರಕ್ಕೊಮ್ಮೆ ಅಷ್ಟೇ ಮಾಡಬೇಕು. ದೇಹದಲ್ಲಿ ಸಲ್ಫರ್ ಅಂಶ ಇರಬೇಕಾದ್ದು ಎಷ್ಟು ಮುಖ್ಯವೋ, ಅದು ಹೆಚ್ಚಾದ್ರೆ ಪ್ರಾಣಕ್ಕೆ ಅಪಾಯವಾಗುತ್ತದೆ. ಹಾಗಾಗಿ ವಾರಕ್ಕೆ ಒಂದೇ ಒಂದು ಡ್ರಾಪ್ಸ್ ಸಲ್ಫರ್ ಬಳಸಿ.

ನೀವು ಯೋಗ ಮಾಡುವವರಾಗಿದ್ದಲ್ಲಿ ಈ ಆಹಾರವನ್ನು ಸೇವಿಸಬೇಡಿ..

ನಿಮ್ಮ ಕಿಚನ್ನಲ್ಲಿ ಇರುವ ಈ 3 ವಸ್ತುಗಳನ್ನು ಈಗಲೇ ಹೊರಹಾಕಿ..

ಈ ತಪ್ಪು ಮಾಡದಿದ್ರೆ ನಿಮ್ಮ ಸೌಂದರ್ಯ ಇನ್ನೂ ಚೆಂದವಾಗತ್ತೆ..

- Advertisement -

Latest Posts

Don't Miss