Monday, June 23, 2025

Latest Posts

ಆಲೂ ಮತ್ತು ಈರುಳ್ಳಿ ಸೇರಿಸಿ ಈ ಪಕೋಡಾ ತಯಾರಿಸಿ..

- Advertisement -

ಆಲೂಗಡ್ಡೆ ಬಜ್ಜಿ ಅಥವಾ ಈರುಳ್ಳಿ ಬಜ್ಜಿಯನ್ನ ಸಪರೇಟ್ ಆಗಿ ಮಾಡಿ ತಿಂದಿರ್ತೀರಾ. ಆದ್ರೆ ಇವೆರಡನ್ನೂ ಮಿಕ್ಸ್ ಮಾಡಿ, ರುಚಿಕರ ಬಜ್ಜಿ ಮಾಡಬಹುದು. ಹಾಗಾದ್ರೆ ಆಲೂಗಡ್ಡೆ ಮತ್ತು ಈರುಳ್ಳಿ ಬಳಸಿ ಬಜ್ಜಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅಕ್ಕಿಹಿಟ್ಟು, ಎರಡು ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ಎರಡು ತುರಿದ ಆಲೂ, ಅರ್ಧ ಸ್ಪೂನ್ ಜೀರಿಗೆ, ಕೊಂಚ ಕೊತ್ತೊಂಬರಿ ಸೊಪ್ಪು, ಒಂದು ಸ್ಪೂನ್ ಶುಂಠಿ, ಹಸಿಮೆಣಸಿನ ಪೇಸ್ಟ್, ಅರ್ಧ ಸ್ಪೂನ್ ಚಾಟ್ ಮಸಾಲೆ, ಒಂದು ಸ್ಪೂನ್ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಈರುಳ್ಳಿ,ಆಲೂಗಡ್ಡೆ ತುರಿ, ಜೀರಿಗೆ, ಕೊತ್ತೊಂಬರಿ ಸೊಪ್ಪು, ಶುಂಠಿ ಹಸಿಮೆಣಸಿನ ಪೇಸ್ಟ್, ಖಾರದ ಪುಡಿ, ಚಾಟ್‌ ಮಸಾಲೆ, ಉಪ್ಪು, ಅಕ್ಕಿ ಹಿಟ್ಟು ಇವನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿ, ಕೊಂಚ ನೀರು ಬಳಸಬಹುದು. ಈ ಮಿಶ್ರಣವನ್ನ ಬಜ್ಜಿಯ ರೀತಿ, ಎಣ್ಣೆಯಲ್ಲಿ ಕರಿಯಿರಿ.

ನಿಮ್ಮ ತ್ವಚೆ ಚೆನ್ನಾಗಿರಬೇಕು ಅಂದ್ರೆ ಈ ರೆಮಿಡಿ ಬಳಸಿ..

ಗೋಧಿ ಹಿಟ್ಟಿನ ಗುಲಾಬ್ ಜಾಮೂನ್ ರೆಸಿಪಿ..

ಕಡಲೆ ಹಿಟ್ಟಿನಿಂದಲೂ ಪೂರಿ ತಯಾರಿಸಬಹುದು ನೋಡಿ..

- Advertisement -

Latest Posts

Don't Miss