Spiritual: ಭಾರತದಲ್ಲಿ ಗಲ್ಲಿಗಲ್ಲಿಗಳಲ್ಲೂ ದೇವಸ್ಥಾನಗಳು ಕಾಣಸಿಗುತ್ತದೆ. ಎಣಿಸಿದರೆ, ಕೋಟಿಗೂ ಮೀರಿ ಹಿಂದೂ ದೇವಸ್ಥಾನಗಳಿದೆ. ಕೆಲ ದೇವಸ್ಥಾನಗಳು ಸೌಂದರ್ಯದಿಂದ ಪ್ರಸಿದ್ಧವಾಗಿದ್ದರೆ, ಇನ್ನು ಕೆಲ ದೇವಾಲಯಗಳು ಚಮತ್ಕಾರಗಳಿಂದ ಪ್ರಸಿದ್ಧವಾಗಿದೆ. ಅದೇ ರೀತಿ ಭಾರದಲ್ಲಿ ಶ್ರೀಮಂತ ದೇವಸ್ಥಾನಗಳೂ ಇದೆ. ಹಾಗಾಗಿ ನಾವಿಂದು ಭಾರತದ 10 ಶ್ರೀಮಂತ ದೇವಸ್ಥಾನಗಳು ಯಾವುದು ಅಂತಾ ತಿಳಿಯೋಣ.
ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ. ಭಾರತದಲ್ಲಿರುವ ದೇವಸ್ಥಾನಗಳಲ್ಲಿ ಮೊದಲ ಶ್ರೀಮಂತ ದೇವಸ್ಥಾನವೆಂದರೆ, ಅದು ಕೇರಳದ ತಿರುವನಂತಪುರಂನಲ್ಲಿರುವ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ. ಇಲ್ಲಿನ ಖಜಾನೆಯ 6 ಬಾಗಿಲುಗಳನ್ನು ತೆಗೆದಿದ್ದು ರಾಶಿ ರಾಶಿ ಚಿನ್ನಾಭರಣ, ವಜ್ರ ವೈಢೂರ್ಯಗಳು ಸಿಕ್ಕಿದೆ. ಆದರೆ 7ನೇಯ ಬಾಗಿಲು ತೆಗೆಯಲು ಮಾತ್ರ ಸಾಧ್ಯವಾಗಿಲ್ಲ. ಏಕೆಂದರೆ, ಆ ಏಳನೇಯ ಬಾಗಿಯನ್ನು ಸರ್ಪ ಕಾಯುತ್ತಿದೆ. ಅದನ್ನು ತೆಗೆಯಲು ಪ್ರಯತ್ನಿಸಿದರೆ, ಅಂಥವರಿಗೆ ಸಾವು ಖಚಿತ ಎನ್ನಲಾಗಿದೆ.
ತಿರುಪತಿ ತಿರುಮಲ ದೇವಸ್ಥಾನ. ಭಾರತದ ಶ್ರೀಮಂತ ದೇವಸ್ಥಾನಗಳಲ್ಲಿ ಎರಡನೇಯ ಸ್ಥಾನದಲ್ಲಿರುವುದು ತಿರುಪತಿ ತಿರುಮಲ ದೇವಸ್ಥಾನ. ಆಂಧ್ರಪ್ರದೇಶದಲ್ಲಿರುವ ಈ ದೇವಸ್ಥಾನದಲ್ಲಿ, ಪ್ರತಿದಿನ ಮದುವೆ ಮನೆಗಳಲ್ಲಿ ಜನರಿರುವಂತೆ, ಜನಜಂಗುಳಿ ಇರುತ್ತದೆ. ಶ್ರೀನಿವಾಸ ಮತ್ತು ಲಕ್ಷ್ಮೀ ಮದುವೆ ಸಂದರ್ಭದಲ್ಲಿ, ಶ್ರೀನಿವಾಸ ಕುಬೇರನ ಬಳಿ ಸಾಲ ಪಡೆದಿದ್ದನಂತೆ. ಆ ಸಾಲವನ್ನು ಭಕ್ತರು ಇಂದಿಗೂ ತೀರಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಕೋಟಿ ಕೋಟಿ ಆದಾಯವಿರುವ ಈ ದೇವಸ್ಥಾನಕ್ಕೆ ಹಲವಾರು ಸೆಲೆಬ್ರಿಟಿಗಳು, ರಾಜಕಾರಣಿಗಳು ಕೂಡ ದೇಣಿಗೆ ನೀಡುತ್ತಾರೆ.
ಶಿರಡಿ ಸಾಯಿಬಾಬಾ ದೇವಸ್ಥಾನ. ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ದೇವಸ್ಥಾನ, ವರ್ಷಕ್ಕೆ ಇನ್ನೂರಕ್ಕೂ ಹೆಚ್ಚು ಕೋಟಿ ಆದಾಯವಿರುವ ಶ್ರೀಮಂತ ದೇವಸ್ಥಾನವಾಗಿದೆ. ಭಾರತದ ಹಲವು ಭಾಗಗಳಿಂದ ಅಲ್ಲದೇ, ವಿದೇಶಗಳಿಂದೂ ಸಾಯಿಬಾಬಾ ಭಕ್ತರು, ದರ್ಶನಕ್ಕೆ ಬರುತ್ತಾರೆ.
ಕಾಶಿ ವಿಶ್ವನಾಥ ದೇವಸ್ಥಾನ. ಜೀವನದಲ್ಲಿ ಒಮ್ಮೆಯಾದರೂ ಕಾಶಿ ವಿಶ್ವನಾಥನ ದರ್ಶನ ಮಾಡಬೇಕು ಅನ್ನೋದು, ಹಲವು ಹಿಂದೂಗಳ ಆಸೆಯಾಗಿದೆ. ಏಕೆಂದರೆ, ಕಾಶಿ ವಿಶ್ವನಾಥನ ದರ್ಶನ ಮಾಡಿದರೆ, ಸ್ವರ್ಗಪ್ರಾಪ್ತಿಯಾಗುತ್ತದೆ. ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಹಿಂದಿನ ಕಾಲದಲ್ಲಿ ಹಿರಿಯರು ಕಾಶಿಗೆ ಹೋದರೆ, ಪುನಃ ಮರಳಿ ಬರುತ್ತಾರೆಂಬ ನಂಬಿಕೆ ಇರಲಿಲ್ಲ. ಏಕೆಂದರೆ, ಅವರು ಕಾಲ್ನಡಿಗೆಯಲ್ಲಿ ಹೋಗಬೇಕಿತ್ತು. ಹಾಗಾಗಿ ಹಲವರಲ್ಲಿ, ಕೆಲವರಷ್ಟೇ ಮರಳಿ ಬರುತ್ತಿದ್ದರು. ಈ ದೇವಸ್ಥಾನ ಭಾರತದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದ್ದು, ಈಗಂತೂ ಕಾಶಿಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಶಬರಿ ಮಲೈ ಅಯ್ಯಪ್ಪ ದೇವಸ್ಥಾನ. ಸಂಕ್ರಾಂತಿಯ ಸಮಯದಲ್ಲಿ ಹೆಚ್ಚಿನವರು ಶಬರಿಮಲೈ ದರ್ಶನ ಮಾಡುತ್ತಾರೆ. ಈ ದೇವಸ್ಥಾನಕ್ಕೆ ಪುರುಷರಿಗಷ್ಟೇ ದರ್ಶನಕ್ಕೆ ಅವಕಾಶವಿದ್ದರೂ ಕೂಡ, ವರ್ಷಕ್ಕೆ ಕೋಟಿ ಆದಾಯ ಬರುವ ದೇವಸ್ಥಾನ ಇದಾಗಿದೆ.
ಉಳಿದ ದೇವಸ್ಥಾನಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.