ಅಡುಗೆ ಮಾಡುವಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

Health Tips: ಮನೆಜನರ ಆರೋಗ್ಯ, ನಾವು ಮಾಡುವ ಅಡುಗೆ ಮೇಲೆ ಡಿಪೆಂಡ್ ಆಗಿರತ್ತೆ. ಹಾಗಾಗಿ ಎಣ್ಣೆ, ತುಪ್ಪ, ಉಪ್ಪು, ಸಕ್ಕರೆ ಎಲ್ಲವೂ ಲಿಮಿಟ್‌ನಲ್ಲಿ ಬಳಸಬೇಕು. ಹಾಗಾಗಿ ನಾವಿಂದು ಅಡುಗೆ ಮಾಡುವಾಗ ಮಾಡಬಾರದ 3 ತಪ್ಪುಗಳು ಯಾವುದು ಅಂತಾ ತಿಳಿಯೋಣ..

ಮೊದಲನೇಯ ತಪ್ಪು, ಹೆಚ್ಚು ಖಾರ ಬಳಸುವುದು. ನಾವು ಅಡುಗೆಗೆ ಖಾರ ಬಳಸಿದಷ್ಟು, ಆ ಆಹಾರ ರಾಜಸಿಕವಾಗುತ್ತದೆ. ಇದರಿಂದ ಹೊಟ್ಟೆ ಸಮಸ್ಯೆ ಶುರುವಾಗುತ್ತದೆ. ಅಷ್ಟೇ ಅಲ್ಲದೇ, ಅಲ್ಸರ್‌, ಆ್ಯಸಿಡಿಟಿಯಂಥ ಆರೋಗ್ಯ ಸಮಸ್ಯೆಗೆ ಇದು ಕಾರಣವಾಗುತ್ತದೆ. ಹಾಗಾಗಿ ಅಡುಗೆಗೆ ಹೆಚ್ಚು, ಹಸಿಮೆಣಸು, ಒಣಮೆಣಸು, ಖಾರದ ಪುಡಿ, ಗರಂ ಮಸಾಲೆ ಬಳಸುವ ಬದಲು, ಕೊಂಚವೇ ಚಕ್ಕೆ, ಕಾಳುಮೆಣಸು, ಕೊತ್ತೊಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಇತ್ಯಾದಿ ಬಳಸಿ. ಇದರಿಂದಲೂ, ಅಡುಗೆ ಆರೋಗ್ಯಕರ ಮತ್ತು ರುಚಿಕರವಾಗುತ್ತದೆ.

ಎರಡನೇಯ ತಪ್ಪು, ರಿಫೈನ್ಡ್ ಎಣ್ಣೆ ಬಳಸುವುದು. ಸಿಟಿಯಲ್ಲಿ ಹೆಚ್ಚಿನವರು ರಿಫೈನ್ಡ್ ಎಣ್ಣೆ ಬಳಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಸಿಕ್ಕಾಪಟ್ಟೆ ಹಾನಿಕಾರಕ. ಹಾಗಾಗಿ ತೆಂಗಿನ ಎಣ್ಣೆ, ಶೇಂಗಾ ಎಣ್ಣೆ, ಸಾಸಿವೆ ಎಣ್ಣೆಯನ್ನ ಬಳಸಿ. ಅದು ಪ್ಯೂರ್ ಆಗಿರಬೇಕು.

ಮೂರನೇಯ ತಪ್ಪು, ಹೆಚ್ಚು ಧಾನ್ಯ ಬಳಸುವುದು. ಉದಾಹರಣೆಗೆ ಖಿಚಡಿ ಮಾಡುವ ಸಂದರ್ಭದಲ್ಲಿ, ಅಥವಾ ಬಿಸಿಬೇಳೆ ಭಾತ ಮಾಡುವ ಸಂದರ್ಭದಲ್ಲಿ ಬೇಳೆ, ಅಕ್ಕಿ, ತರಕಾರಿ ಎಲ್ಲವನ್ನೂ ಬಳಸಲಾಗುತ್ತದೆ. ಇದು ಜೀರ್ಣವಾಗಲು ಹೆಚ್ಚು ಹೊತ್ತು ತೆಗೆದುಕೊಳ್ಳುತ್ತದೆ. ಹಾಗಾಗಿ ನೀವು ಧಾನ್ಯಕ್ಕಿಂತ ಹೆಚ್ಚು ತರಕಾರಿ ಬಳಸುವುದು ಉತ್ತಮ.

ನಿಮ್ಮ ಬಾಯಲ್ಲಿರುವ ಲಾಲಾರಸ ಹಲವು ರೋಗಗಳಿಗೆ ಮದ್ದು..

ಸಕ್ಕರೆಗಿಂತ, ಕಲ್ಲುಸಕ್ಕರೆಯ ಬಳಕೆ ಅತ್ಯುತ್ತಮ.. ಹೇಗೆ..?

ಪೆಪ್ಪರ್ ಪನೀರ್ ರೆಸಿಪಿ..

About The Author