Health Tips: ಬಳೆ, ಕುಂಕುಮ, ತಾಳಿ, ಕಾಲುಂಗುರ, ಮತ್ತು ಮೂಗುತಿ ಇವಿಷ್ಟು ಮುತ್ತೈದೆಯ ಲಕ್ಷಣ. ಹಾಗಾಗಿ ಹಿಂದೂ ಧರ್ಮದಲ್ಲಿ ಯಾವಾಗ ಮೂಗುತಿ ಹಾಕದಿದ್ದರೂ, ಮದುವೆಯಾಗುವಾಗ ಮೂಗುತಿ ಹಾಕಲೇಬೇಕು ಎಂಬ ನಿಯಮವಿದೆ. ಹಾಗಾದರೆ ಮೂಗುತಿ ಯಾಕೆ ಹಾಕುತ್ತಾರೆ..? ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಎಂಬ ಬಗ್ಗೆ ತಿಳಿಯೋಣ ಬನ್ನಿ..
ಹಿಂದೂ ಧರ್ಮದಲ್ಲಿ ವಿವಾಹಿತೆ ಧರಿಸುವ ಆಭರಣ, ಆಕೆಯನ್ನು ಆರೋಗ್ಯವಾಗಿ ಇಡುತ್ತದೆ. ಕಾಲುಂಗುರ,ಮೂಗುತಿ, ತಾಳಿ ಇವೆಲ್ಲವೂ ಮುಟ್ಟಿನ ನೋವು, ಪ್ರಸವದ ನೋವನ್ನು ತಡೆದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಅಲ್ಲದೇ, ಸಂತಾನ ಸಮಸ್ಯೆಯಿಂದ ಮುಕ್ತಿ ಹೊಂದಲು ಕೂಡ ಇದು ಅನುಕೂಲವಾಗುತ್ತದೆ. ಗರ್ಭ ಧರಿಸಲು ಆರೋಗ್ಯ ಚೆನ್ನಾಗಿರಲಿ ಎಂಬ ಕಾರಣಕ್ಕೆ ಕಾಲುಂಗುರವನ್ನು ಧರಿಸಲಾಗುತ್ತದೆ.
ಮೂಗುತಿ ಧರಿಸುವುದರಿಂದ ಮುಟ್ಟಿನ ಸಂದರ್ಭದಲ್ಲಿ ಆಗುವ ಹೊಟ್ಟೆನೋವು, ಸೊಂಟ, ಕಾಲು ನೋವೆಲ್ಲ ಕಂಟ್ರೋಲಿಗೆ ಬರುತ್ತದೆ. ನಿಮಗೆ ವಿವಾಹದ ಮುನ್ನ ಆಗುತ್ತಿದ್ದಷ್ಟು ಮುಟ್ಟಿನ ಹೊಟ್ಟೆನೋವು, ವಿವಾಹದ ಬಳಿಕ ಆಗುವುದಿಲ್ಲ. ಅಲ್ಲದೇ, ಮೂಗುತಿ ಧರಿಸಿದ ಹೆಣ್ಣಿನ ಮತ್ತು ಮೂಗುತಿ ಧರಿಸದ ಹೆಣ್ಣಿನ ಉಸಿರಾಟದ ಪ್ರಕ್ರಿಯೆ ವಿಭಿನ್ನವಾಗಿರುತ್ತದೆ. ಮೂಗುತಿ ಧರಿಸಿದ ಹೆಣ್ಣಿನ ಉಸಿರಾಟ ಆರೋಗ್ಯಕರವಾಗಿರುತ್ತದೆ. ಮೂಗುತಿ ಧರಿಸದವರಿಗೆ ಹೆಚ್ಚಾಗಿ ಉಸಿರಾಟದ ಸಮಸ್ಯೆ ಉಂಟಾಗುತ್ತದೆ.
ಇನ್ನು ಬರೀ ಹಿಂದೂ ಧರ್ಮದಲ್ಲಷ್ಟೇ ಅಲ್ಲದೇ, ಇಸ್ಲಾಂ ಧರ್ಮದವರು ಮತ್ತು ಕ್ರಿಶ್ಚಿಯನ್ ಹೆಣ್ಣು ಮಕ್ಕಳು ಕೂಡ ಮೂಗುತಿಯನ್ನು ಧರಿಸುತ್ತಾರೆ. ಹಾಗಾಗಿ ಇದು ಬರೀ ಧಾರ್ಮಿಕವಾಗಿ ಹಾಕುವ ಒಡವೆಯಾಗದೇ, ಆರೋಗ್ಯಕರವಾದ ಒಡವೆಯಾಗಿದೆ. ಹಾಗಾಗಿ ಮಕ್ಕಳು 10 ವರ್ಷದವರಾಗುತ್ತಿದ್ದಂತೆ, ಮೂಗು ಚುಚ್ಚಿಸಿ ಬಿಡುತ್ತಾರೆ. ಏಕೆಂದರೆ, ಆಗಿನಿಂದಲೇ, ಆಕೆ ಆರೋಗ್ಯವಂತೆಯಾಗಿರಲಿ ಎಂಬ ಕಾರಣಕ್ಕೆ. ಹಾಗಾಗಿ ಮೂಗುತಿ ಬರೀ ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲ. ಬದಲಾಗಿ ಆರೋಗ್ಯವನ್ನೂ ತಂದು ಕೊಡುತ್ತದೆ.
ನುಗ್ಗೆಸೊಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಅತ್ಯುತ್ತಮ ಲಾಭಗಳೇನು..?