Health: ಹಲವರಿಗೆ ಈಗಲೂ ಕೂಡ ತಂಪಾದ ಆಹಾರ, ಮತ್ತು ಉಷ್ಣದ ಆಹಾರದ ಮಧ್ಯೆ ಇರುವ ವ್ಯತ್ಯಾಸ ಗೊತ್ತಿಲ್ಲ. ಹಲವರು ತಂಪು ಆಹಾರವೆಂದರೆ, ಫ್ರಿಜ್ನಲ್ಲಿರಿಸಿದ ಆಹಾರ, ಐಸ್ ವಾಟರ್, ಐಸ್ ಕ್ರೀಮ್ ಎಂದೇ ತಿಳಿದಿದ್ದಾರೆ. ಹಾಗಾದರೆ ಐಸ್ ವಾಟರ್ , ಐಸ್ಕ್ರೀಮ್ ಸೇವನೆಯಿಂದ ದೇಹ ತಂಪಾಗಿರುತ್ತದಾ..? ಇಲ್ಲವಾ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಐಸ್ ವಾಟರ್, ಐಸ್ ಕ್ರೀಮ್ ಅಥವಾ ಫ್ರಿಜ್ನಲ್ಲಿರಿಸಿದ ಆಹಾರ ದೇಹಕ್ಕೆ ಉಷ್ಣತೆ ನೀಡುತ್ತದೆ. ಮತ್ತು ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮುಟ್ಟಲು ಮಾತ್ರ ತಂಪಾಗಿರುತ್ತದೆ. ಆದರೆ ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಐಸ್ ವಾಟರ್, ಐಸ್ ಕ್ರೀಮ್ ಸೇವನೆಯಿಂದ ನಮ್ಮ ದೇಹ ತಂಪಾಗಿರುವುದಿಲ್ಲ.
ಐಸ್ ವಾಟರ್ ಕುಡಿಯುವುದರಿಂದ, ನಿಮ್ಮ ಜೀರ್ಣಕ್ರಿಯೆಗೆ ಪೆಟ್ಟು ಬೀಳುತ್ತದೆ. ಪೋಷಕಾಂಶಗಳ ಕೊರತೆಯುಂಟಾಗುತ್ತದೆ. ನೀವು ಮೊಸರು, ಹಣ್ಣನ್ನು ಫ್ರಿಜ್ನಲ್ಲಿರಿಸಿ ಸೇವಿಸಿದರೆ, ಅದರಲ್ಲಿರುವ ತಂಪು ಗುಣ ಹೊರಟು ಹೋಗುತ್ತದೆ. ಹಾಗಾಗಿ ಹಣ್ಣುಗಳನ್ನು ತಂದ ಕೆಲ ದಿನಗಳಲ್ಲೇ ತಿಂದು ಮುಗಿಸಬೇಕು. ಮತ್ತು ಮೊಸರು ಫ್ರಿಜ್ನಲ್ಲಿರಿಸದೇ, ಸೇವಿಸಬೇಕು. ಆಗ ಅದನ್ನು ಸೇವಿಸುವುದರ ಲಾಭ ಸಿಗುತ್ತದೆ.
ಫ್ರಿಜ್ನಲ್ಲಿ ಹಣ್ಣು, ತರಕಾರಿ, ಹಾಲು, ಮೊಸರು ಇಡುವುದು ಯಾಕೆ ಅಂದ್ರೆ, ಅದು ಹೆಚ್ಚು ದಿನ, ಹೆಚ್ಚು ಹೊತ್ತು ಉಳಿಯಲಿ ಎಂದು. ಅದಕ್ಕಾಗಿ ಫ್ರಿಜ್ನಲ್ಲಿ ಇರಿಸಿದ ಆಹಾರವನ್ನು ಪುನಃ ಬಿಸಿ ಮಾಡಿ ಸೇವಿಸಬೇಕು ಅಂತಾ ಹೇಳಲಾಗುತ್ತದೆ. ಆದರೆ ಹಣ್ಣು ಮತ್ತು ಮೊಸರು ನೀವು ಬಿಸಿ ಮಾಡಲಾಗುವುದಿಲ್ಲ. ಹಾಗಾಗಿ ಮೊಸರು ಮತ್ತು ಹಣ್ಣನ್ನು ಫ್ರಿಜ್ನಲ್ಲಿ ಇರಿಸಬಾರದು.
ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?
ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?