ಬೆಳಿಗ್ಗೆ ಎದ್ದ ತಕ್ಷಣ ನೀವು ಈ ಕೆಲಸ ಮಾಡಿದರೆ, ನಿಮ್ಮ ದಿನ ಉತ್ತಮವಾಗಿರುತ್ತದೆ..

Spiritual: ಕೆಲವರು ಪ್ರತಿದಿನ ಯಾರೊಂದಿಗಾದರೂ ಜಗಳವಾಡುತ್ತಿರುತ್ತಾರೆ. ಅಥವಾ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ. ಕೆಲಮಕ್ಕಳು ಕೂಡ ಪ್ರತಿದಿನ ಬಿದ್ದು ಗಾಯ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹಲವರ ಜೀವನವೇ ನೆಮ್ಮದಿ ಕಳೆದುಕೊಂಡಿರುತ್ತದೆ. ಹಾಗಾಗಿ ನಾವಿಂದು ನಿಮ್ಮ ದಿನ ಉತ್ತಮವಾಗಿರಬೇಕು. ನೀವು ಖುಷಿಯಾಗಿರಬೇಕು. ಏನಿಲ್ಲವೆಂದರೂ ಕೊಂಚ ನೆಮ್ಮದಿಯಾದರೂ ನಿಮ್ಮ ಪಾಲಾಗಬೇಕೆಂದಲ್ಲಿ ಏನು ಮಾಡಬೇಕು ಅಂತಾ ಹೇಳಲಿದ್ದೇವೆ.

ಮೊದಲನೇಯದಾಗಿ ನೀವು ಬೆಳಿಗ್ಗೆ ಏಳುವಾಗ ಬಲ ಮಗ್ಗುಲಿನಿಂದ ಏಳಿ. ಬಲ ಬದಿಯಿಂದ ಏಳುವುದರಿಂದ ಎಡುವಟ್ಟಾಗುವುದು ತಪ್ಪುತ್ತದೆ. ನೀವು ಆ ದಿನ ನೆಮ್ಮದಿಯಿಂದ ಇರಬಹುದು. ಅದೇ ಯಾರು ಎಡ ಮಗ್ಗಲಿನಿಂದ ಏಳುತ್ತಾರೋ, ಅವರಿಗೆ ಆ ದಿನ ಅನ್‌ಲಕ್ಕಿ ದಿನವಾಗಿರುತ್ತದೆ. ಆ ದಿನ ಮನೆಯಲ್ಲೋ, ಆಫೀಸಿನಲ್ಲೋ ಜಗಳವಾಗುತ್ತದೆ. ಹಾಗಾಗಿ ಬೆಳಿಗ್ಗೆ ಏಳುವಾಗ ಬಲಬದಿಯಿಂದ ಏಳಿ.

ಇನ್ನು ಎರಡನೇಯದಾಗಿ, ಬೆಳಿಗ್ಗೆ ಎದ್ದ ತಕ್ಷಣ ಯಾರದ್ದೇ ಮುಖ ನೋಡುವ ಮುನ್ನ ನಿಮ್ಮೆರಡು ಕೈಗಳನ್ನು ನೋಡಿಕೊಂಡು,

ಕರಾಗ್ರೆ ವಸತೆ ಲಕ್ಷ್ಮೀ, ಕರಮಧ್ಯೆ ಸರಸ್ವತಿ,

ಕರಮೂಲೇತು ಸ್ಥಿತಾ ಗೌರಿ, ಪ್ರಭಾತೇ ಕರ ದರ್ಶನಂ

ಅನ್ನುವ ಶ್ಲೋಕವನ್ನು ಭಕ್ತಿಯಿಂದ ಹೇಳಿ. ಬಳಿಕ ಎದುರಿಗೆ ದೇವರ ಫೋಟೋ ಇದ್ದಲ್ಲಿ ಅದಕ್ಕೆ ನಮಸ್ಕರಿಸಿ. ಈ ಶ್ಲೋಕವನ್ನು ಹೇಳಿ, ಅಂಗೈ ನೋಡಿಕೊಂಡು ನೀವು ದಿನವನ್ನು ಆರಂಭಿಸಿದರೆ, ನಿಮ್ಮ ದಿನ ಉತ್ತಮವಾಗಿರುತ್ತದೆ.

ಈ ಶ್ಲೋಕದ ಅರ್ಥವೇನೆಂದರೆ, ಕರ ಅಂದರೆ ಅಂಗೈ ಅಗ್ರಸ್ಥಾನದಲ್ಲಿ ಲಕ್ಷ್ಮೀ ನೆಲೆಸಿದ್ದಾಳೆ. ಕೈ ಮಧ್ಯಭಾಗದಲ್ಲಿ ಸರಸ್ವತಿ ನೆಲೆನಿಂತಿದ್ದಾಳೆ. ಅಂಗೈ ಕೊನೆಯ ಭಾಗದಲ್ಲಿ ಗೌರಿ ನೆಲೆಸಿದ್ದಾಳೆ. ಹೀಗೆ ಬೆಳಿಗ್ಗೆ ಎದ್ದು ಕರ ನೋಡಿಕೊಳ್ಳುವ ಮೂಲಕ, ದೇವಿಯರ ದರ್ಶನವಾಯಿತು ಎಂಬುದೇ ಇದರ ಅರ್ಥ.

ಯಾವುದೇ ಕಾರಣಕ್ಕೂ ಮುಖ ತೊಳೆಯುವ ಮುನ್ನ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೀವು ನೋಡಿಕೊಳ್ಳಬೇಡಿ. ನೀವು ಮುಖ ತೊಳೆಯುವ ಮುನ್ನ ಈ ತಪ್ಪು ಮಾಡಿದ್ದಲ್ಲಿ, ಅಂದು ನಿಮಗೆ ನೆಮ್ಮದಿ ಇರುವುದಿಲ್ಲ. ಮುಖ ತೊಳೆದು, ದೇವರಿಗೆ ವಂದಿಸಿ, ಬಳಿಕ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿ.

ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..

ಪತಿ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಪತ್ನಿ ಈ ಕೆಲಸವನ್ನು ಮಾಡಬೇಕು..

ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..

About The Author