Wednesday, March 12, 2025

Latest Posts

ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ, ಯಾವುದೂ ಶಾಶ್ವತವಲ್ಲ..

- Advertisement -

Health Tips: ಪ್ರತಿದಿನ ನಾವು ಸಾಕಷ್ಟು ಜನರನ್ನು ನೋಡುತ್ತೇವೆ. ಒಬ್ಬರಂತೆ ಇನ್ನೊಬ್ಬರು ಇರುವುದಿಲ್ಲ. ಎಲ್ಲರ ಮುಖಚರ್ಯೆ, ಹಾವಭಾವ, ಗುಣ ಬೇರೆ ಬೇರೆ ರೀತಿ ಇರುತ್ತದೆ. ಕೆಲವು ವಿಷಗಳ ಬಗ್ಗೆ ಅಭಿಪ್ರಾಯವೂ ಬೇರೆ ಬೇರೆ ಇರುತ್ತದೆ. ಈ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್‌ ಮಾತನಾಡಿದ್ದಾರೆ.

ಮನೋವೈದ್ಯರ ಪ್ರಕಾರ ನಾವು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವುದಕ್ಕೆ ಆಗುವುದಿಲ್ಲ. ಏಕೆಂದರೆ, ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಉದಾಹರಣೆಗೆ ಓರ್ವ ವ್ಯಕ್ತಿ ವಿವಾಹವಾಗಿ, ಬಳಿಕ ವಿಚ್ಛೇದನ ಪಡೆಯುತ್ತಾನೆ. ಆಗ ಅವನಿಗೆ ವಿವಾಹದ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ. ಆದರೆ ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇರುತ್ತಾರೆ. ಅವರು ಇನ್ನೊಂದು ವಿವಾಹಕ್ಕೆ ಒಪ್ಪುವಂತೆ ಒತ್ತಡ ಹೇರುತ್ತಾರೆ.

ಆದರೆ ಮೊದಲನೇಯ ಪತ್ನಿಯಿದ್ದ ಹಾಗೆ ಈ ಹೆಣ್ಣು ಇದ್ದರೆ, ಆಗ ತಾನೇನು ಮಾಡಲಿ..? ಹೇಗೆ ನಂಬಿಕೆ ಇಟ್ಟು ವಿವಾಹವಾಗಲಿ ಎಂಬ ಪ್ರಶ್ನೆ ಅವನಲ್ಲಿ ಉದ್ಭವಿಸುತ್ತದೆ. ಇದಕ್ಕೆ ಉತ್ತರವಾಗಿ ಮನೋವೈದ್ಯರು ಹೇಳುವುದೇನೆಂದರೆ, ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಮೊದಲನೇಯ ಪತ್ನಿಯಲ್ಲಿ ಹೊಂದಾಣಿಕೆಯ ಗುಣ ಕಡಿಮೆ ಇತ್ತು. ಹಾಗಾಗಿ ಆಕೆ ನಿಮ್ಮನ್ನು ಬಿಟ್ಟು ಹೋದಳು. ಆದರೆ ಎರಡನೇಯ ಪತ್ನಿ ಹೊಂದಿಕೊಂಡು ಹೋಗಬಹುದು. ಆಕೆಯ ಗುಣ ಇನ್ನೂ ಉತ್ತಮವಾಗಿರಬಹುದು.

ಆದರೆ ಇದಕ್ಕೂ ಯಾವುದೇ ಗ್ಯಾರಂಟಿ ಇಲ್ಲ. ಹಾಗಾಗಿ ಮದುವೆಯಾಗುವವನು ಮತ್ತು ಅವನ ಮನೆಯವರು ಆಯಾ ಕಾಲಕ್ಕೆ ತಕ್ಕಂತೆ, ಇರುವುದನ್ನು ರೂಢಿಸಿಕೊಳ್ಳಬೇಕು. ಹೊಂದಾಣಿಕೆಯೇ ಜೀವನವಾಗಿರುವುದರಿಂದ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಆಸೆ ಆಕಾಂಕ್ಷೆಗಳನ್ನು ಪೂರೈಸಲು ಮುಂದಾಗಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

- Advertisement -

Latest Posts

Don't Miss