ರಿಸ್ಕ್ ಪ್ರೆಗ್ನೆನ್ಸಿ ಅಂದ್ರೇನು..? ಗರ್ಭ ಧರಿಸಲು ಸರಿಯಾದ ವಯಸ್ಸೆಷ್ಟು..?

Health Tips: ಪ್ರತೀ ಹೆಣ್ಣಿಗೂ ತಾಯಿಯಾಗುವ ಕನಸ್ಸಿರುತ್ತದೆ. ಆದರೆ ಸರಿಯಾದ ಆರೈಕೆ ಇಲ್ಲದೇ, ಅಥವಾ ವಯಸ್ಸಿಗೂ ಮೊದಲೇ, ಅಥವಾ ವಯಸ್ಸು ಮೀರಿ ತಾಯಿಯಾದರೆ, ಅದು ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಹಾನಿಕಾರಕ.ಇದನ್ನೇ ರಿಸ್ಕ್ ಪ್ರೆಗ್ನೆನ್ಸಿ ಎನ್ನುತ್ತಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ..

ಗರ್ಭ ಧರಿಸುವ ಬಗ್ಗೆ ವೈದ್ಯೆಯಾದ ಡಾ. ಸವಿತಾ ಸಿ ಎಂಬುವವರು ಮಾಹಿತಿ ನೀಡಿದ್ದಾರೆ. 21ರಿಂದ 35 ವಯಸ್ಸಿನೊಳಗೇ ಗರ್ಭ ಧರಿಸಿದರೆ, ಮಗುವಿನ ಆರೋಗ್ಯ ಮತ್ತು ತಾಯಿಯ ಆರೋಗ್ಯ ಉತ್ತಮವಾಗಿರುತ್ತದೆ. ಆದರೂ 30 ವರ್ಷ ದಾಟುವುದರೊಳಗೆ, ತಾಯಿಯಾಗಬೇಕು. 30 ದಾಟಿದ ಬಳಿಕ ತಾಯಿಯಾದರೆ, ಆ ಮಗುವಿನ ಆರೋಗ್ಯ ಅಷ್ಟು ಉತ್ತಮವಾಗಿರುವುದಿಲ್ಲ. ಆದರೆ 21 ವಯಸ್ಸಿಗೂ ಮುನ್ನ ಮತ್ತು ವಯಸ್ಸು 35 ದಾಟಿದ ಬಳಿಕ, ಗರ್ಭ ಧರಿಸಿದರೆ, ಇದನ್ನು ರಿಸ್ಕ್ ಪ್ರೆಗ್ನೆನ್ಸಿ ಎನ್ನುತ್ತಾರೆ.

ಯಾಕೆ ವಯಸ್ಸು 21ಕ್ಕಿಂತ ಮುನ್ನ ಮತ್ತು ವಯಸ್ಸು 35ರ ಬಳಿಕ ಮಕ್ಕಳು ಮಾಡಿಕೊಳ್ಳುವುದು ರಿಸ್ಕ್ ಎಂದರೆ, ಚಿಕ್ಕ ವಯಸ್ಸಿನಲ್ಲಿ ರಕ್ತಹೀನತೆ ಇರುತ್ತದೆ. ಅಂಡಾಣುಗಳ ಉತ್ಪತ್ತಿಯೂ ಕಡಿಮೆ ಇರುತ್ತದೆ. ವಯಸ್ಸು 35 ದಾಟಿದ ಬಳಿಕ, ಅಂಡಾಣುವಿನ ಉತ್ಪತ್ತಿ ಕಡಿಮೆಯಾಗುತ್ತ ಬರುತ್ತದೆ. ಹಾಗಾಗಿ ಇಂಥ ವಯಸ್ಸಿನಲ್ಲಿ ಮಕ್ಕಳು ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.

ಅಲ್ಲದೇ ವಯಸ್ಸು 35 ದಾಟಿದ ಬಳಿಕ ಹಲವು ರೋಗ ರುಜಿನಗಳು ದೇಹಕ್ಕೆ ಲಗ್ಗೆ ಇಡುತ್ತದೆ. ಆಗ ಮಗು ಹುಟ್ಟಿದರೆ, ಆ ಮಗು ಆರೋಗ್ಯವಾಗಿರಲು ಸಾಧ್ಯವಿಲ್ಲ. ಅಲ್ಲದೇ, ಅದರ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆ ಇರುತ್ತದೆ. ಅಂಥ ಮಕ್ಕಳ ಬೆಳವಣಿಗೆ ಉತ್ತಮವಾಗಿರುವುದಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?

ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..

ಮಕ್ಕಳ ಹೊಟ್ಟೆ ತುಂಬಲು ಹಾಲು ಬಿಸ್ಕೇಟ್ ಕೊಡುತ್ತೀರಾ..? ಅದೆಷ್ಟು ಅಪಾಯಕಾರಿ ಗೊತ್ತಾ..?

About The Author