Health Tips: ಅಡುಗೆ ಮಾಡುವಾಗ, ಅಥವಾ ಏನಾದರೂ ಕೆಲಸ ಮಾಡುವಾಗ, ಅಥವಾ ಅಗ್ನಿ ಅವಘಡವಾದಾಗ, ದೇಹದ ಕೆಲವು ಭಾಗಗಳು ಸುಟ್ಟು ಹೋಗುತ್ತದೆ. ಆಗ ಅದಕ್ಕೆ ಯಾವನ ರೀತಿ ಚಿಕಿತ್ಸೆ ಕೊಡಲಾಗುತ್ತದೆ. ಆ ಗಾಯ ವಾಸಿಯಾಗಲು ಎಷ್ಟು ಸಮಯ ಬೇಕು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ.
ಚರ್ಮ ತಜ್ಞರಾದ ಕೆ.ಟಿ.ರಮೇಶ್ ಸುಟ್ಟ ಗಾಯಗಳ ಚಿಕಿತ್ಸೆಯ ಬಗ್ಗೆ ಈ ರೀತಿಯಾಗಿ ವಿವರಿಸಿದ್ದು, ಸುಟ್ಟ ಗಾಯವನ್ನು ನೋಡಿ, ಅದು ಎಷ್ಟು ದಿನಗಳಲ್ಲಿ ವಾಸಿಯಾಗುತ್ತದೆ ಎಂದು ವೈದ್ಯರು ಅಂದಾಜು ಮಾಡುತ್ತಾರೆ. ದೇಹದ ಮೇಲಾದ ಸಣ್ಣ ಪುಟ್ಟ ಸುಟ್ಟ ಗಾಯಗಳು ಪೂರ್ತಿಯಾಗಿ ವಾಸಿಯಾಗಲು 4ರಿಂದ5 ದಿನವಾದರೂ ಬೇಕು. ಇನ್ನು ಹೆಚ್ಚು ಸುಟ್ಟ ಗಾಯಗಳಾಗಿದ್ದರೆ, ಎರಡು ವಾರಗಳು ಬೇಕಾಗುತ್ತದೆ.
ಇನ್ನು ಚಿಕಿತ್ಸೆ ಬಗ್ಗೆ ಮಾತನಾಡಿದ ವೈದ್ಯರು, ಔಷಧಿ, ಕ್ರೀಮ್ ಹಚ್ಚಿ ವಾಸಿಯಾಗುವ ಗುಣವಾಗಿದ್ದರೆ, ಕ್ರೀಮ್ ಹಚ್ಚಿಯೇ ಗುಣ ವಾಸಿಯಾಗುವಂತೆ ಮಾಡುತ್ತೇವೆ. ಕೆಲವರಿಗೆ ಹೊಸ ಚರ್ಮ ಹಾಕುವ ಅಗತ್ಯತೆ ಇರುತ್ತದೆ. ಅಂಥವರಿಗೆ ಹೊಸ ಚರ್ಮದ ಕಸಿ ಮಾಡುತ್ತೇವೆ. ಇದಕ್ಕಾಗಿ ರೋಗಿಗಳು ಒಂದರಿಂದ ಒಂದೂವರೆ ತಿಂಗಳು ನಮ್ಮ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಇನ್ನು ಪಟಾಕಿಯಿಂದ ಸುಟ್ಟ ಗಾಯಗಳಾಗಿ, ಚಿಕಿತ್ಸೆಗೆ ಬರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಮೊದಲೆಲ್ಲ ತುಂಬಾ ಜನ ಪಟಾಕಿಯಿಂದ ಸುಟ್ಟ ಗಾಯ ಮಾಡಿಕೊಂಡು, ಚಿಕಿತ್ಸೆಗೆ ಬರುತ್ತಿದ್ದರು. ಆದರೆ ಈಗ ಆ ರೀತಿಯ ರೋಗಿಗಳ ಸಂಖ್ಯೆ ಕಡಿಮೆ ಎಂದು ವೈದ್ಯರು ಹೇಳುತ್ತಾರೆ. ಸುಟ್ಟ ಗಾಯಗಳ ಚಿಕಿತ್ಸೆ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ..




