ಹಿಮ್ಮಡಿ ಒಡೆತ ನಿವಾರಣೆಗೆ ಮನೆಯಲ್ಲಿಯೇ ಇದೆ ರಾಮಬಾಣ

Health Tips: ಹಿಮ್ಮಡಿ ಒಡೆಯುವುದು ಅಂದರೆ, ಹಲವರಿಗೆ ಕಾಮನ್. ಆದರೆ ಇದೇ  ಕ್ರ್ಯಾಕ್ ಹೀಲ್ಸ್, ಮುಂದೊಂದು ದಿನ ನಡೆದಾಡಲೂ ಕಷ್ಟವಾಗುವ ರೀತಿ, ನೋವು ಕೊಡುತ್ತದೆ. ಹಾಗಾಗಿ ಇದಕ್ಕೆ ಮೊದಲೇ ಪರಿಹಾರ ಕಂಡುಕೊಳ್ಳುವುದು ಉತ್ತಮ. ಹಾಗಾಗಿ ವೈದ್ಯರಾದ ಡಾ.ಕಿಶೋರ್ ಅವರು, ಒಡೆದ ಹಿಮ್ಮಡಿಗೆ ಮನೆಮದ್ದು ಹೇಳಿದ್ದಾರೆ.

ಉಗುರು ಬೆಚ್ಚಗಿನ ನೀರಿನಲ್ಲಿ, ನಿಮ್ಮ ಪಾದಗಳನ್ನು 10ರಿಂದ 15 ನಿಮಿಷಗಳ ಕಾಲ ಚೆನ್ನಾಗಿ ನೆನೆಸಿಡಬೇಕು. ಬಳಿಕ ಬೆಣಚು ಕಲ್ಲಿನಿಂದ ಪಾದವನ್ನು ಉಜ್ಜಬೇಕು. ಪ್ರತಿದಿನ ಹೀಗೆ ಕೊಂಚ ಸಮಯ ಮಾಡಿದಾಗ, ನಿಮ್ಮ ಹಿಮ್ಮಡಿಯಲ್ಲಿರುವ ಡೆಡ್ ಸ್ಕಿನ್ ತೆಗಿಯಬಹುದು.

ಕೊಂಚ ಬೆಣ್ಣೆ, ಕೊಂಚ ನ್ಯಚುರಲ್ ಆ್ಯಲೋವೆರಾ ಜೆಲ್ ಮತ್ತು ಸ್ವಲ್ಪ ಪಚ್ಚ ಕರ್ಪೂರವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಪದೇ ಪದೇ ನಿಮ್ಮ ಒಡೆದ ಹಿಮ್ಮಡಿಗೆ ಹಚ್ಚಿ, ಚೆನ್ನಾಗಿ ಉಜ್ಜಬೇಕು. ಹೀಗೆ ಮಾಡುವುದರಿಂದ ಒಡೆದ ಹಿಮ್ಮಡಿ, ಸುಕೋಮಲವಾಗುತ್ತದೆ.

ಇನ್ನು ಕೊನೆಯದಾಗಿ ನೀವು ಕಾಟನ್ ಸಾಕ್ಸ್ ಬಳಸಬೇಕು. ಪ್ರತಿದಿನ ಕಾಟನ್ ಸಾಕ್ಸ್ ಹಾಕಿಕೊಳ್ಳುುದರಿಂದ, ನಿಮ್ಮ ಹಿಮ್ಮಡಿ ಕವರ್ ಆಗಿ, ಅದು ಆರೋಗ್ಯಕರವಾಗಿ ಇರುತ್ತದೆ. ಈ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂದು ತಿಳಿಯಲು ವೀಡಿಯೋ ನೋಡಿ..

About The Author