ಹಲಸಿನಕಾಯಿ- ಕಡ್ಲೆ ಪಲ್ಯ ರೆಸಿಪಿ

Recipe: ಹಲಸಿನಕಾಯಿ- ಕಡ್ಲೆ ಪಲ್ಯ ಮಾಡಲು, ಹಲಸಿನಕಾಯಿ, ನೆನೆಸಿದ ಕಡಲೆ, ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, 4 ಒಣಮೆಣಸು, ಕೊಂಚ ಹುಣಸೆ, ಒಂದು ಕಪ್ ಕೊಬ್ಬರಿ ತುರಿ, ಕೊಂಚ ಬೆಲ್ಲ, ಉಪ್ಪು ಬೇಕು.

ಮೊದಲು ಹಲಸಿನ ಕಾಯಿಯನ್ನು ಕಟ್ ಮಾಡಿ ನೀರಿನಲ್ಲಿ ಹಾಕಿಟ್ಟು ಕೊಂಚ ಹೊತ್ತಿನ ಬಳಿಕ ಬೇಯಿಸಿಡಿ. ಬಳಿಕ ನೆನೆಸಿಟ್ಟ ಕಪ್ಪು ಕಡಲೆ ಕಾಳನ್ನು ಸಪರೇಟ್ ಆಗಿ ಬೇಯಿಸಿ. ಇವೆರಡೂ ಬೇಯಿಸುವಾಗ, ಕೊಂಚ ಉಪ್ಪು ಹಾಕಿ. ಈಗ ಮಸಾಲೆ ರೆಡಿ ಮಾಡಿಕೊಳ್ಳಿ. ಮಿಕ್ಸಿ ಜಾರ್‌ಗೆ ತೆಂಗಿನತುರಿ, ಒಣಮೆಣಸು, ಜೀರಿಗೆ, ಹುಣಸೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಮಸಾಲೆ ರುಬ್ಬುವಾಗ ನೀರು ಬಳಸುವಂತಿಲ್ಲ.

ಈಗ ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಉದ್ದಿನಬೇಳೆ ಹಾಕಿ ಒಗ್ಗರಣೆ ರೆಡಿ ಮಾಡಿ. ಇದರ್ರೆ ರುಬ್ಬಿಕೊಂಡ ಮಸಾಲೆ ಹಾಕಿ, ಚೆನ್ನಾಗಿ ಹುರಿಯಿರಿ. ಬಳಿಕ ಇದಕ್ಕೆ ಬೆಲ್ಲ, ಉಪ್ಪು, ಬೇಯಿಸಿದ ಕಡಲೆ,ಹಲಸಿನ ಕಾಯಿ ಹೇಕಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ. ಹಲಸಿನಕಾಯಿ- ಕಡಲೆ ಪಲ್ಯ ರೆಡಿ.

ಕಾಜು ಮಸಾಲಾ ರೆಸಿಪಿ

ವೆಜ್ ಮೊಮೋಸ್ ರೆಸಿಪಿ..

About The Author