Saturday, June 21, 2025

Latest Posts

ಪಾಲಕ್ ಮಸಾಲೆ ದೋಸೆ ರೆಸಿಪಿ

- Advertisement -

Recipe: ಪಾಲಕ್ ಮಸಾಲೆ ದೋಸೆ ಮಾಡಲು, ಒಂದು ಕಪ್ ಪಾಲಕ್, 2 ಕಪ್ ಅಕ್ಕಿ, ಅರ್ಧ ಸ್ಪೂನ್ ಮೆಂತ್ಯೆ, ಅರ್ಧ ಕಪ್ ಚಿರೋಟಿ ರವಾ, ಕೊಂಚ ಸಕ್ಕರೆ, ಅರ್ಧ ಕಪ್ ಉದ್ದಿನಬೇಳೆ, ಉಪ್ಪು ಇವಿಷ್ಟು ದೋಸೆ ಹಿಟ್ಟಿಗಾಗಿ. ಇನ್ನು ಪಲ್ಯಕ್ಕಾಗಿ, ಎರಡರಿಂದ ಮೂರು ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಎರಡು ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಎರಡರಿಂದ ಮೂರು ಹಸಿಮೆಣಸಿನಕಾಯಿ, ಕೊಂಚ ಶುಂಠಿ, ಅರಿಶಿನ, ಗರಂ ಮಸಾಲೆ ಪುಡಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು, ಕೊಂಚ ಎಣ್ಣೆ, ಉಪ್ಪು. ಕೆಂಪು ಚಟ್ನಿ.

ಮೊದಲು ಅಕ್ಕಿ, ಉದ್ದಿನ ಬೇಳೆ, ಮೆಂತ್ಯೆಯನ್ನು ಚೆನ್ನಾಗಿ ತೊಳೆದು, 6 ತಾಸು ನೀರಿನಲ್ಲಿ ನೆನೆಸಿಡಿ. ಬಳಿಕ ಇವಿಷ್ಟನ್ನು ಮಿಕ್ಸಿಜಾರ್‌ಗೆ ಹಾಕಿ ರುಬ್ಬಿ, ದೋಸೆ ಹಿಟ್ಟು ತಯಾರಿಸಿ. ಇದನ್ನು ರಾತ್ರಿಯಿಡೀ ಬಿಡಬೇಕು. ಆಗ ಹಿಟ್ಟು ಉಬ್ಬಿಕೊಳ್ಳುತ್ತದೆ. ಬೆಳಿಗ್ಗೆ ಪಾಲಕ್, ಕೊತ್ತೊಂಬರಿ ಸೊಪ್ಪು, ಹಸಿಮೆಣಸು ಅರೆದು ಪೇಸ್ಟ್ ಮಾಡಿ, ದೋಸೆ ಹಿಟ್ಟಿಗೆ ಸೇರಿಸಿ.

ಈಗ ಪಲ್ಯ ಮಾಡಲು ಪ್ಯಾನ್ ಬಿಸಿ ಮಾಡಿ, ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಕರಿಬೇವು, ಹಸಿಮೆಣಸು ಹಾಕಿ ಒಗ್ಗರಣೆ ಕೊಡಿ. ಬಳಿಕ, ಈರುಳ್ಳಿ ಹಾಕಿ ಹುರಿಯಿರಿ. ನಂತರ ಉಪ್ಪು, ಗರಂ ಮಸಾಲೆ, ಅರಿಶಿನ, ಶುಂಠಿ ಮಿಕ್ಸ್ ಮಾಡಿ. ಮ್ಯಾಶ್ ಮಾಡಿದ ಆಲೂಗಡ್ಡೆ, ಕೊತ್ತೊಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿದ್ರೆ, ಆಲೂಗಡ್ಡೆ ಪಲ್ಯ ರೆಡಿ.

ಈಗ ದೋಸೆ ಹಂಚಿಗೆ ಹಿಟ್ಟು ಹಾಕಿ ದೋಸೆ ಹೊಯ್ಯಿರಿ. ಬಳಿಕ ಮುಚ್ಚಿ ದೋಸೆ ರೆಡಿಯಾದ ಮೇಲೆ ಅದರ ಮೇಲೆ ಕೆಂಪು ಚಟ್ನಿ, ಆಲೂಗಡ್ಡೆ ಪಲ್ಯ ಹಾಕಿ, ಸರ್ವ್ ಮಾಡಿ.

ವೆಜ್ ಸ್ಯಾಂಡ್ವಿಚ್ ರೆಸಿಪಿ

ಹಲಸಿನಕಾಯಿ- ಕಡ್ಲೆ ಪಲ್ಯ ರೆಸಿಪಿ

ವೆಜ್ ಬರ್ಗರ್ ರೆಸಿಪಿ

- Advertisement -

Latest Posts

Don't Miss