Spiritual News: ಶಿವನಿಗೆ ನೀಲಕಂಠ, ಮಹೇಶ್ವರ, ಮಹಾಲಿಂಗೇಶ್ವರ, ಮುಕ್ಕಣ್ಣ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಮುಕ್ಕಣ್ಣ ಎಂಬ ಹೆಸರು ಬರಲು ಕಾರಣ, ಶಿವನಿಗಿರುವ ಮೂರು ಕಣ್ಣು. ಈ ಮೂರು ಕಣ್ಣು ಹೊಂದಿದ ಕಾರಣಕ್ಕಾಗಿ, ಶಿವನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಶಿವನಿಗೆ ಮೂರು ಕಣ್ಣು ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಶಿವ ಮೂರನೇ ಕಣ್ಣನ್ನು ತೆರೆದರೆ, ಲೋಕದ ನಾಶವಾಗುತ್ತದೆ ಅನ್ನೋ ನಂಬಿಕೆ ಹಿಂದೂ ಧರ್ಮದಲ್ಲಿದೆ. ಶಿವ ತನ್ನ ಮೂರನೇ ಕಣ್ಣನ್ನು ತೆರೆದು ಕಾಮದೇವನನ್ನು ಬೂದಿ ಮಾಡಿದ್ದನೆಂದು ಪೌರಾಣಿಕ ಕಥೆಗಳಲ್ಲಿ ಹೇಳಲಾಗಿದೆ. ಆದ್ದರಿಂದ ಶಿವನ ಮೂರನೇ ಕಣ್ಣನ್ನು ಬೆಂಕಿಗೆ ಹೋಲಿಸಲಾಗಿದೆ.
ಶಿವ ತನ್ನ ಮೂರನೇ ಕಣ್ಣನ್ನು ತೆರೆಯಲು ಪಾರ್ವತಿಯೇ ಮುಖ್ಯ ಕಾರಣವೆಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಈ ಬಗ್ಗೆ ಒಂದು ಕಥೆ ಇದೆ. ಶಿವ ಹಿಮಾಲಯ ಪರ್ವತದ ಮೇಲೆ ದೇವತೆಗಳೊಂದಿಗೆ ಸಭೆ ನಡೆಸುತ್ತಿದ್ದ. ಆಗ ಪಾರ್ವತಿ ಬಂದು, ತಮಾಷೆ ಮಾಡಲೆಂದು ಶಿವನ ಎರಡೂ ಕಣ್ಣನ್ನು, ತನ್ನ ಕೈಗಳಿಂದ ಮುಚ್ಚುತ್ತಾಳೆ.
ಶಿವ ಇಡೀ ಲೋಕಕ್ಕೆ ಬೆಳಕು ಕೊಡುವ ಒಡೆಯ. ಹಾಗಾಗಿ ಪಾರ್ವತಿ ಶಿವನ ಕಣ್ಣುಗಳನ್ನು ಮುಚ್ಚಿದಾಗ, ಇಡೀ ಲೋಕಕ್ಕೆ ಕತ್ತಲೆ ಆವರಿಸಿತು. ಸೂರ್ಯ- ಚಂದ್ರರ ಶಕ್ತಿ ಕಡಿಮೆಯಾಗಿ, ಭೂಮಿಯಲ್ಲಿರುವ ಜೀವಿಗಳು, ತಳಮಳ ಅನುಭವಿಸುತ್ತ, ಕೂಗಲು ಶುರು ಮಾಡಿದವು. ಜೀವಜಂತುಗಳ ಕರ್ಣಕಠೋರ ಕೂಗನ್ನು ಕೇಳಲಾಗದೇ, ಶಿವ ತನ್ನ ಮೂರನೇ ಕಣ್ಣನ್ನು ಬಿಟ್ಟ.
ಇದರಿಂದ ಲೋಕದಲ್ಲಿ ಬೆಳಕು ಆವರಿಸಿತು. ಪಾರ್ವತಿಗೆ ತನ್ನ ತಪ್ಪಿನ ಅರಿವಾಯಿತು. ಆದರೆ ಶಿವ ಮೊದಲ ಬಾರಿ ಕಣ್ಣುಗಳನ್ನು ತೆರೆಯಲ್ಪಟ್ಟಾಗ ಪ್ರಪಂಚದಲ್ಲಿರುವ ಜೀವಗಳನ್ನು ರಕ್ಷಿಸಿದನು. ಆದರೆ ಶಿವ ಮೂರನೇ ಕಣ್ಣು ತೆರೆದರೆ, ಲೋಕ ನಾಶವಾಗುತ್ತದೆ ಅನ್ನೋ ನಂಬಿಕೆ ಹಿಂದೂಗಳಲ್ಲಿದೆ. ಈ ಕಾರಣಕ್ಕೆ ಶಿವನಿಗೆ ಮೂರು ಕಣ್ಣು ಬಂದು, ಆತ ಮುಕ್ಕಣ್ಣನೆನ್ನಿಸಿಕೊಂಡ.