Movie News: ಭಾಷಣ ಮಾಡುವ ವೇಳೆ ನಟಿ ಶೃತಿ ಫ್ರೀ ಬಸ್ ಸಿಕ್ಕಿದ ಬಳಿಕ ಮಹಿಳೆಯರು ಎಲ್ಲೆಲ್ಲೋ ಹೋದ್ರು ಎಂದು ಹೇಳಿದ್ದು, ಈ ಕಾರಣಕ್ಕೆ ಮಹಿಳಾ ಆಯೋಗದಿಂದ ನೊಟೀಸ್ ಜಾರಿ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಚುನಾವಣಾ ಭಾಷಣ ಮಾಡುವ ವೇಳೆ, ನಟಿ ಶೃತಿ ಕಾಂಗ್ರೆಸ್ ತೀರ್ಥಸ್ಥಳಕ್ಕೆ ಹೆಣ್ಣು ಮಕ್ಕಳು ಹೋಗಲಿ ಎಂದು ಫ್ರೀ ಬಸ್ ಕೊಟ್ಟರೆ ಮಹಿಳೆಯರು ಎಲ್ಲೆಲ್ಲೋ ಹೋಗುತ್ತಿದ್ದಾರೆ ಎಂದು ಹೇಳಿದ್ದರು. ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆ, ಹಲವರು ಶೃತಿಯ ಬಗ್ಗೆ ಆಕ್ರೋಶ ಹೊರಹಾಕಿದ್ದರು.
ಈ ರೀತಿ ಹೇಳಿಕೆ ಕೊಟ್ಟು, ಶೃತಿ ಬಹಿರಂಗವಾಗಿ ಹೆಣ್ಣು ಮಕ್ಕಳನ್ನು ವಿರೋಧಿಸಿದ್ದಾರೆ ಎಂದು ಮಹಿಳಾ ಆಯೋಗ ನಟಿಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೇ, 7 ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.
ಪದೇ ಪದೇ ಐಶ್ವರ್ಯಾ ರೈ, ಅಮಿತಾಬ್ ಬಚ್ಚನ್ ಹೆಸರು ಉಲ್ಲೇಖ: ರಾಹುಲ್ ವಿರುದ್ಧ ಬಿಗ್ಬಿ ಫ್ಯಾನ್ಸ್ ಗರಂ
ಪಾಟ್ನಾ ರೈಲ್ವೆ ನಿಲ್ದಾಣದ ಬಳಿ ಹೊಟೇಲ್ನಲ್ಲಿ ಅಗ್ನಿ ಅವಘಡ: 6 ಮಂದಿಯ ದುರ್ಮರಣ, ಹಲವರಿಗೆ ಗಾಯ