ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಅಫಿಡವಿಟ್
ನಲ್ಲಿ ಅಪೂರ್ಣ ಮಾಹಿತಿ ನೀಡಿರೋ ದೂರಿನನ್ವಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಕ್ರಮ
ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.
ನಾಮಪತ್ರ ಸಲ್ಲಿಕೆ ವೇಳೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ತಾವು 7.39ಕೋಟಿ ರೂಪಾಯಿ ಆಸ್ತಿಯ
ಒಡೆಯ, ಅಲ್ಲದೆ 3.72ಕೋಟಿ ರೂಪಾಯಿ ಸಾಲ ಹೊಂದಿದ್ದಾಗಿ ನಮೂದಿಸಿದ್ದರು. ಆದರೆ ಅಫಿಡವಿಟ್
ನಲ್ಲಿದ್ದ...
ಕಲಬುರಗಿ: ರಾಜಕೀಯ ಅನುಭವ ನೋಡಿದ್ರೆ ಮಲ್ಲಿಕಾರ್ಜುನ ಖರ್ಗೆ ಎಂದೋ ಸಿಎಂ ಆಗಬೇಕಿತ್ತು ಅಂತ ಸಿಎಂ ಕುಮಾರಸ್ವಾಮಿ ಮಲ್ಲಿಕಾರ್ಜುನ ಖರ್ಗೆಯವರನ್ನ ಹಾಡಿ ಹೊಗಳಿದ್ದಾರೆ.
ಪದೇ ಪದೇ ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಅನ್ನೋ ಮಾತು ಕೇಳಿಬರುತ್ತಿರೋ ಮಧ್ಯೆ ಇದೀಗ ಖರ್ಗೆ
ಸಿಎಂ ಆಗಬೇಕು ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಕೂಡ ಪುಷ್ಟಿ ನೀಡೋ ರೀತಿಯಲ್ಲಿ ಮಾತನಾಡಿದ್ದಾರೆ.
ಕಲಬುರಗಿ...
ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆ ಮುಗಿದ ಮೇಲೆ ಯಶ್ ಇದೇ ಮೊದಲ ಬಾರಿಗೆ ಇಂದು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ.
ಚುನಾವಣೆ ಮುಗಿಯೋವರೆಗೂ ಮಂಡ್ಯಕ್ಕೆ ಆಗ್ಗಾಗ್ಗೆ ತೆರಳಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ್ದ ಯಶ್, ಅಂದಿನಿಂದ ಅತ್ತ ತಿರುಗಿಯೂ ನೋಡಿರಲಿಲ್ಲ. ಆದ್ರೆ ಇಂದು ಮದ್ದೂರು ತಾಲೂಕಿನ ಕೆರೆ ಮೇಗಳದೊಡ್ಡಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಗ್ರಾಮದಲ್ಲಿ...
ಹುಬ್ಬಳ್ಳಿ: ಈಶ್ವರಪ್ಪಗೆ ಬ್ರೈನ್ ಗೆ ನಾಲಿಗೆ ಲಿಂಕ್ ತಪ್ಪಿದೆ ಅಂತ
ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ
ಮಾತನಾಡಿದ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರ ಪತನವಾಗುತ್ತೆ ಅಂತ ಬಿಜೆಪಿಯವ್ರು ಒಂದು ವರ್ಷದಿಂದ
ಹೇಳುತ್ತಿದ್ದಾರೆ. ಆದ್ರೆ ಜನ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದ್ರು.
ಇನ್ನು ನಿನ್ನೆ
ಮಾಜಿ ಸಿಎಂ ಸಿದ್ದರಾಮಯ್ಯ ಹುಚ್ಚಾ ಕಣ್ರೀ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದು, ಈಶ್ವರಪ್ಪ ಮೆದುಳು ನಾಲಿಗೆ
ಲಿಂಕ್...
ಬೆಂಗಳೂರು: ಕ್ರೇಜಿ ಸ್ಟಾರ್ ಪುತ್ರಿಯ ವಿವಾಹ ದಿನಾಂಕ ನಿಗದಿಯಾಗಿದ್ದು, ಇದಕ್ಕಾಗಿ ಕ್ರೇಜಿ ಕುಟುಂಬ ಭರ್ಜರಿ ತಯಾರಿಯಲ್ಲಿ ತೊಡಗಿದ್ದು, ರವಿಮಾಮ ಖುದ್ದಾಗಿ ಅತಿಥಿಗಳನ್ನ ಆಹ್ವಾನ ಮಾಡ್ತಿದ್ದಾರೆ.
ಇದೇ ತಿಂಗಳ 28 ಮತ್ತು
29ರಂದು ಮಗಳು ಗೀತಾಂಜಲಿ ವಿವಾಹ ನಡೆಯಲಿದೆ. ಉದ್ಯಮಿ ಅಜಯ್ ಎಂಬುವರ ಜೊತೆ ಗೀತಾಂಜಲಿ ಮದುವೆ ಬೆಂಗಳೂರು ಅರಮನೆ ಮೈದಾನದ ವೈಟ್
ಪೆಟಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ತಮ್ಮ...
ಮಂಡ್ಯ: ಗಂಡಸ್ಥನ ಇದ್ರೆ ಸುಮಲತಾ ಪರ ಪ್ರಚಾರ ಮಾಡಿದ್ದನ್ನ ನೇರವಾಗಿ ಹೇಳಬೇಕು ಅಂತ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್
ಗೆ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಸವಾಲು ಹಾಕಿದ್ದಾರೆ.
ಕಳೆದ ವಾರ ಮಾಜಿ ಶಾಸಕ ಚಂದ್ರಶೇಖರ್, ನಾನ್ನನ್ನು ಅಭ್ಯರ್ಥಿ ನಿಖಿಲ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನೇರವಾಗಿ
ಕರೆದಿದ್ರೆ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದೆ. ಅವರು ಕರೆಯದ ಕಾರಣ ನಾನು
ತಟಸ್ಥವಾಗಿದ್ದೆ...
ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಡೈಲಾಗ್ ಹೊಡೆಯೋ ಮೂಲಕ ಸಿಎಂ ಕುಟುಂಬವನ್ನು ಟೀಕಿಸಿದ್ದಾರೆ. ಕಲಬುರಗಿಯ ಕಾಳಗಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಯತ್ನಾಳ್ ಮಿಮಿಕ್ರಿ ಮಾಡಿದ್ರು. ‘ನಿಖಿಲ್ ಎಲ್ಲಿದ್ದೀಯಪ್ಪಾ? ನಿನ್ನನ್ನು, ನನ್ನ ತಾತನನ್ನ ಬೆಳಸಿದ ಜನಗಳ ತಲೆ ಬೋಳಿಸೋದಕ್ಕೆ ಬಂದಿದ್ದೀನಪ್ಪಾ’ ಅಂತ ಮಿಮಿಕ್ರಿ ಮಾಡೋ ಮೂಲಕ ಸಿಎಂ...
ಮಂಗಳೂರು: ಇಲ್ಲಿನ ಅನಂತ ಪದ್ಮನಾಭ
ಸುಬ್ರಹ್ಮಣ್ಯ ದೇವಸ್ಥಾದಲ್ಲಿ ನಿನ್ನೆ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಇಲ್ಲಿನ ನೀರುಮಾರ್ಗ
ಎಂಬಲ್ಲಿ ಇರುವ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿತ್ತು. ಈ ವೇಳೆ ದಿಢೀರನೆ ನವಿಲೊಂದು
ದೇವಸ್ಥಾನದ ಆವರಣದೊಳಕ್ಕೆ ಹಾರಿ ಬಂತು. ದೇಗುಲದ ಧ್ವಜಸ್ತಂಭಕ್ಕೆ ನಿನ್ನೆ ತೈಲದಿವಾಸ ಪೂಜೆ
ನಡೆಯುತ್ತಿದ್ದ ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ಪ್ರತ್ಯಕ್ಷವಾದ ನವಿಲು ಜೋರಾಗಿ ಕೂಗತೊಡಗಿತು.
ದೇವರ ವಿಗ್ರಹವಿದ್ದ ಗರ್ಭಗುಡಿಯೆದುರು ನಿಂತುಬಿಟ್ಟಿತು. ಈ...
ಕಲಬುರಗಿ: ಸಿಎಂ ಕುಮಾರಸ್ವಾಮಿ ಎದುರೇ ಗಾಣಗಾಪುರದ ಅರ್ಚಕರು ನಿಖಿಲ್ ಎಲ್ಲಿದ್ದೀಯಪ್ಪಾ ಎಂದ ಪ್ರಸಂಗ ನಡೆದಿದೆ. ಈ ಮಾತು ಕೇಳುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಕೆಲಕಾಲ ತಬ್ಬಿಬ್ಬಾಗಿಬಿಟ್ರು.
ಕಲಬುರಗಿಯ ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ
ದೇವಸ್ಥಾನಕ್ಕೆ ಸಿಎಂ ತೆರಳಿದ್ರು. ಈ ವೇಳೆ ಪೂಜೆ ಸಿದ್ಧತೆ ಮಾಡಿಕೊಳ್ತಿದ್ದ ಅರ್ಚಕ ದತ್ತಾತ್ರೇಯ
ಇದ್ದಕ್ಕಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದುಬಿಟ್ಟರು.
ಇದನ್ನ ಕೇಳಿದ ಕೂಡಲೇ ಸಿಎಂ ಒಂದು ಕ್ಷಣ...
ತುಮಕೂರು: ಹಾಲು ಉತ್ಪಾದಕರ ಸಂಘದ ರಾಜಕಾರಣಕ್ಕೆ ಸುಮಾರು 200 ಲೀಟರ್ ಹಾಲು ಮಣ್ಣುಪಾಲಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದ ಹಾಲು ಡೈರಿಯಲ್ಲಿ ಸಿಬ್ಬಂದಿ ತಡವಾಗಿ ಬಂದದ್ದೇ ಈ ಘಟನೆಗೆ ಕಾರಣವಾಗಿದೆ. ಅಂದಹಾಗೆ ಈ ಹಾಲು ಉತ್ಪಾದಕರ ಸಂಘದಲ್ಲಿ ಮೂವರು ಸಿಬ್ಬಂದಿ ಕೆಲಸ ಮಾಡುತ್ತಿದ್ರು. ಆದ್ರೆ ಇಂದು ಓರ್ವ ಸಿಬ್ಬಂದಿ...