ಬದನೆ ಗೊಜ್ಜು ಹೀಗೆ ಮಾಡಿದ್ರೆ ಸಖತ್ ಟೇಸ್ಟಿಯಾಗಿರತ್ತೆ..

ಬದನೆ ಕಾಯಿಯಿಂದ ಪಲ್ಯ, ಸಾರು, ಸಾಂಬಾರ್ ಮಾಡ್ತಾರೆ. ಆದ್ರೆ ಇವೆಲ್ಲಕ್ಕಿಂತ ಹೆಚ್ಚು ಟೇಸ್ಟ್ ಕೊಡುವ ಖಾದ್ಯ ಅಂದ್ರೆ ಬದನೆಕಾಯಿ ಗೊಜ್ಜು. ಹಾಗಾಗಿ ನಾವಿಂದು ಬದನೇಕಾಯಿ ಗೊಜ್ಜು ಮಾಡೋದನ್ನ ಕಲಿಯೋಣ ಬನ್ನಿ..

ಏಷ್ಯಾಕಪ್ ಗೆ ಅಫ್ಘಾನಿಸ್ಥಾನ ತಂಡ ಪ್ರಕಟ

ಬೇಕಾಗುವ ಸಾಮಗ್ರಿ: ಗೊಜ್ಜು ಮಾಡೋಕ್ಕಂತಾನೇ ಬಳಸೋ ದೊಡ್ಡ ಬದನೆಕಾಯಿ ಒಂದು, ಎರಡರಿಂದ ಮೂರು ಹಸಿ ಮೆಣಸಿನಕಾಯಿ(ನಿಮಗೆಷ್ಟು ಖಾರ ಬೇಕೋ ಅಷ್ಟು), 1 ಟೊಮೆಟೋ, 5ರಿಂದ 6 ಬೆಳ್ಳುಳ್ಳಿ ಎಸಳು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ,, ಎರಡು ಸ್ಪೂನ್ ಎಣ್ಣೆ, ಎರಡು ಸ್ಪೂನ್ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಸಣ್ಣ ತುಂಡು ಬೆಲ್ಲ ಮತ್ತು ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಐದಾರು ಎಸಳು ಕರಿಬೇವು, ಚಿಟಿಕೆ ಇಂಗು.

ಮಾಡುವ ವಿಧಾನ: ಮೊದಲು ಬದನೆಕಾಯಿಗೆ ಎಣ್ಣೆ ಸವರಿ, ಗ್ಯಾಸ್ ಸ್ಟವ್ ಮೇಲೆ ಅದನ್ನು ಮಧ್ಯಮ ಉರಿಯಲ್ಲಿಟ್ಟು ಸುಡಬೇಕು. ಇದರೊಂದಿಗೆ ಟೊಮೆಟೋ, ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನ ಕೂಡ ಸುಡಬೇಕು. ನಿಮಗೆ ಸುಟ್ಟ ವಾಸನೆ ಇಷ್ಟವಾಗದಿದ್ದರೆ, ನೀವು ಕೊಂಚ ನೀರು ಹಾಕಿ ಬೇಯಿಸಬಹುದು. ಹೀಗೆ ಬದನೆ, ಟೊಮೆಟೋ ಬೆಂದ ಮೇಲೆ, ಅದರ ಸಿಪ್ಪೆ ತೆಗೆದು ಮ್ಯಾಶ್ ಮಾಡಿ. ಬೆಳ್ಳುಳ್ಳಿ, ಹಸಿಮೆಣಸನ್ನು ಕೂಡ ಮ್ಯಾಶ್ ಮಾಡಿ.

ಸ್ವಾತಂತ್ರ್ಯ ಹೋರಾಟಗಾರ ತಮ್ಮಣ್ಣಪ್ಪ ಬುದ್ನಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ

ಈಗ ಇದಕ್ಕೆ ಉಪ್ಪು, ಬೆಲ್ಲ, ಹುಣಸೆಹಣ್ಣು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ಒಗ್ಗರಣೆ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ ಸಿಡಿಸಿ. ಇದಾದ ಬಳಿಕ ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು, ಇಂಗು ಹಾಕಿ ಒಗ್ಗರಣೆ ಕೊಡಿ, ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದ್ರೆ, ಬದನೆ ಗೊಜ್ಜು ರೆಡಿ.

About The Author