Health Tips: ಡೆಂಗ್ಯೂ ಎಂಥ ರೋಗವೆಂದರೆ, ಜನ ಇದನ್ನು ಸಾಮಾನ್ಯ ರೋಗವೆಂದು ತಿಳಿದು, ನಿರ್ಲಕ್ಷಿಸುತ್ತಾರೆ. ಆದರೆ ಅದು ನಿಮ್ಮ ಜೀವವನ್ನೇ ತೆಗೆಯಬಹುದು. ಹಾಗಾಗಿ ಡೆಂಗ್ಯೂವಿನ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಈ ಬಗ್ಗೆ ವೈದ್ಯರು ಒಂದಿಷ್ಟು ಮಾಹಿತಿ ನೀಡಿದ್ದಾರೆ ನೋಡಿ..
ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಬರುತ್ತದೆ. ಹಾಗಂತ ಎಲ್ಲ ರೀತಿಯ ಸೊಳ್ಳೆ ಕಚ್ಚುವುದರಿಂದ ಈ ರೋಗ ಬರುವುದಿಲ್ಲ. ದೇಹದ ಮೇಲೆ ಕಪ್ಪು ಬಿಳಿ ಪಟ್ಟಿಯಂತೆ ಇರುವ ಸೊಳ್ಳೆ ಕಚ್ಚಿದಾಗ ಮಾತ್ರ ಡೆಂಗ್ಯೂ ರೋಗ ಬರುತ್ತದೆ. ಇದನ್ನು ಟೈಗರ್ ಸೊಳ್ಳೆ ಎನ್ನುತ್ತಾರೆ. ಫ್ರೆಶ್ ವಾಟರ್‌ನಲ್ಲಿ ಈ ಸೊಳ್ಳೆಗಳು ಹುಟ್ಟುತ್ತವೆಯಂತೆ. ಮಳೆ ಬಂದು ನೀರು ಒಂದೆಡೆ ಶೇಖರಣೆಗೊಂಡಾಗ, ಅಲ್ಲಿ ಚಿಕ್ಕ ಚಿಕ್ಕ ಹುಳುಗಳಾಗುತ್ತದೆ. ಆ ಹುಳುಗಳೇ ಮುಂದೆ ಡೆಂಗ್ಯೂ ಸೊಳ್ಳೆಗಲಾಗಿ ಮಾರ್ಪಾಡಾಗೋದು.
ಹಾಗಾಗಿ ಮಳೆಗಾಲದಲ್ಲಿ ಹೆಚ್ಚು ಡೆಂಗ್ಯೂ ಕಾಯಿಲೆ ಬರುತ್ತದೆ. ಇದರಿಂದ ನೀವು ರಕ್ಷಣೆ ಪಡೆಯಬೇಕು ಅಂದ್ರೆ, ನೀವು ನಿಮ್ಮ ಮನೆಯ ಸುತ್ತ ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಎಲ್ಲೂ ಕೂಡ ಮಳೆ ನೀರು ನಿಲ್ಲದ ರೀತಿ ನೀವು ನೋಡಿಕೊಳ್ಳಬೇಕು. ಇನ್ನು ಈ ಸೊಳ್ಳೆ ಕಚ್ಚಿದಾಗ ನೋವಾಗುವುದಿಲ್ಲ. ಹಾಗಾಗಿ ಈ ಸೊಳ್ಳೆ ಕಚ್ಚಿದ್ದು ನಿಮಗೆ ಗೊತ್ತೇ ಆಗುವುದಿಲ್ಲ. ಹಾಗಾಗಿ ಈ ಸೊಳ್ಳೆ ತುಂಬಾ ಡೇಂಜರಸ್ ಆಗಿದ್ದು, ಈ ಸೊಳ್ಳೆಯ ಕಾಟದಿಂದ ನೀವು ಮುಕ್ತಿ ಪಡೆಯಬೇಕು ಎಂದಲ್ಲಿ, ನಿಮಗಿರುವುದು ಒಂದೇ ದಾರಿ. ಅದು ನಿಮ್ಮ ಮನೆಯ ಸುತ್ತಮುತ್ತ ಸ್ವಚ್ಛವಾಗಿ ಇರಿಸುವುದು.
ಇನ್ನು ಡೆಂಗ್ಯೂ ಬರುವುದರ ಲಕ್ಷಣವೇನು ಎಂದರೆ, ಜ್ವರ ಬರುತ್ತದೆ. ಸಿಕ್ಕಾಪಟ್ಟೆ ತಲೆ ನೋವಾಗುತ್ತದೆ. ಕಣ್ಣು ನೋವು, ದೇಹದಲ್ಲಿ ಸಿಕ್ಕಾಪಟ್ಟೆ ನೋವು, ಹೊಟ್ಟೆ ನೋವು, ವಾಂತಿಯಾಗುವುದು, ಇವಿಷ್ಟು ಲಕ್ಷಣಗಳು ಯಾರಲ್ಲಿ ಇರುತ್ತದೆಯೋ, ಅವರಿಗೆ ಡೆಂಘ್ಯೂ ಬಂದಿದೆ ಎಂದರ್‌ಥ. ಅಂಥವರು ನಿರ್ಲಕ್ಷಿಸದೇ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ಈ ವೀಡಿಯೋ ನೋಡಿ..
Dandruffನಿಂದ ತಲೆಬಿಸಿ ಆಗಿದ್ಯಾ? Tension ಬಿಡಿ, ಈ Tips Follow ಮಾಡಿ