Saturday, October 19, 2024

Latest Posts

ಪದೇ ಪದೇ ಬೇದಿಯಲ್ಲಿ ರಕ್ತ ಕಂಡುಬಂದಲ್ಲಿ ಎಚ್ಚರ..

- Advertisement -

Health Tips: ನಾವು ತಿನ್ನುವ ಆಹಾರ ಹೇಗೆ ಆರೋಗ್ಯಕರವಾಗಿ ಇರಬೇಕೋ, ಅದೇ ರೀತಿ ತಿಂದ ಆಹಾರ, ಜೀರ್ಣವಾಗಿ, ಮಲದ ಮೂಲಕ ಹೋಗುತ್ತದೆ. ಹಾಗಾಗಿ ಆ ಮಲ ಮೂತ್ರ ಕೂಡ ಆರೋಗ್ಯವಾಗಿರಬೇಕು. ವೈದ್ಯರು ನಮ್ಮ ಮಲ ಮೂತ್ರದ ಬಣ್ಣ ಕೇಳಿಯೇ, ನಿಮ್ಮ ಆರೋಗ್ಯ ಈ ರೀತಿ ಇದೆ ಎಂದು ಹೇಳುತ್ತಾರೆ. ಹಾಗಾಗಿ ಮಲ ಮೂತ್ರಗಳ ಬಣ್ಣ ಕೂಡ ಮುಖ್ಯವಾಗುತ್ತದೆ. ಇನ್ನು ಪದೇ ಪದೇ ಬೇಧಿಯಲ್ಲಿ ರಕ್ತ ಕಂಡು ಬಂದರೆ, ಅದು ಅನಾರೋಗ್ಯಕರ ಸೂಚನೆ. ಹಾಗಾಗಿ ಅದರ ಬಗ್ಗೆ ನಿರ್ಲಕ್ಷಿಸದೇ, ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

ವೈದ್ಯರಾದ ಡಾ. ಆಂಜೀನಪ್ಪಾ ಅವರು ಡೈರಿಯಾ ಮತ್ತು ಡಿಸೆಂಟ್ರಿ ಅಂದ್ರೇನು ಎಂದು ವಿವರಿಸಿದ್ದಾರೆ. ಮಲ ವಿಸರ್ಜನೆ ಮಾಡುವಾಗ, ನೀರು ನೀರಾಗಿ ಮಲ ಹೋಗುವುದನ್ನು ಡೈರಿಯಾ ಎನ್ನುತ್ತೇವೆ. ಇನ್ನು ನಾರ್ಮಲ್ ಆಗಿ ದಿನಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಲ ವಿಸರ್ಜನೆ ಮಾಡಿದ್ರೆ, ಅದು ನಾರರ್ಮಲ್.

ಆದರೆ ಪದೇ ಪದೇ ಮಲ ವಿಸರ್ಜನೆ ಆದರೆ, ಅದರಲ್ಲಿ ರಕ್ತ ಕಂಡು ಬಂದರೆ ಅದನ್ನು ಡಿಸೆಂಟ್ರಿ ಎನ್ನುತ್ತಾರೆ. ಇದನ್ನು ಎಂದಿಗೂ ನಿರ್ಲಕ್ಷಿಸಬಾರದ. ಈ ಬಗ್ಗೆ ಚಿಕಿತ್ಸೆ ಪಡೆಯಬೇಕು. ಏಕೆಂದರೆ, ಪದೇ ಪದೇ ಈ ರೀತಿ ಡಿಸೆಂಟ್ರಿಯಾಗಿ, ಅದರಲ್ಲಿ ರಕ್ತ ಹೋದರೆ, ಆ ವ್ಯಕ್ತಿಗೆ ಅನೆಮಿಯಾ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂಥ ಆರೋಗ್ಯ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಏಕೆಂದರೆ, ಇದರಿಂದ ಸಾವು ಕೂಡ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss