Monday, April 14, 2025

Latest Posts

ಬ್ರಾಹ್ಮಿ ಎಲೆಯನ್ನು ಪ್ರತಿದಿನ ಸೇವಿಸಿದ್ದಲ್ಲಿ ಆಗುವ ಆರೋಗ್ಯಕರ ಲಾಭವೇನು ಗೊತ್ತಾ..?

- Advertisement -

ಬ್ರಾಹ್ಮಿ ಎಲೆಯನ್ನು ಸರಸ್ವತಿ ಎಲೆ, ಒಂದೆಲಗ, ತಿಮರೆ ಎಂದು ಕರೆಯುತ್ತಾರೆ. ಇದು ಬ್ರಹ್ಮನಿಂದ ರಚಿಸಲ್ಪಟ್ಟ, ಅದ್ಭುತವಾದ, ಶ್ರೇಷ್ಠ ಮತ್ತು ಆರೋಗ್ಯಕರ ಎಲೆಯಾಗಿದೆ. ಹಾಗಾಗಿ ಇದನ್ನು ಬ್ರಾಹ್ಮಿ ಎಲೆ ಎಂದು ಕರೆಯುತ್ತಾರೆ. ಇದನ್ನ ಮನೆಯಲ್ಲೇ ಬೆಳೆಯಬಹುದು. ಎಷ್ಟೋ ಔಷಧಿಗಳಲ್ಲಿ, ತಲೆಗೆ ಹಚ್ಚುವ ಎಣ್ಣೆಗಳಲ್ಲಿ ಬ್ರಾಹ್ಮಿ ಎಲೆಗಳನ್ನು ಬಳಸುತ್ತಾರೆ. ಇಂಥ ಆರೋಗ್ಯಕರ ಎಲೆಯನ್ನು ಪ್ರತಿದಿನ ತಿಂದರೆ ಎಂಥ ಆರೋಗ್ಯಕರ ಲಾಭವಿದೆ ಅಂತಾ ತಿಳಿಯೋಣ ಬನ್ನಿ..

ಕಿಡ್ನಿ ಸ್ಟೋನ್ ಆಗಬಾರದೆಂದರೆ ಏನು ಮಾಡಬೇಕು..?

ನೀವು ಪ್ರತಿದಿನ ಒಂದು ಬ್ರಾಹ್ಮಿ ಎಲೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಸಾಕು. ನಿಮ್ಮ ನೆನಪಿನ ಶಕ್ತಿ ವೃದ್ಧಿಸುತ್ತಾ ಹೋಗುತ್ತದೆ. ಇದನ್ನ ಪುಟ್ಟ ಮಕ್ಕಳಿರುವಾಗ ಕೊಟ್ಟರೆ ತುಂಬಾ ಒಳ್ಳೆಯದು. ಗರ್ಭಿಣಿಯರು ಪ್ರತಿದಿನ ಒಂದು ತಿಮರೆ ಎಲೆಯನ್ನು ತಿಂದರೆ, ನಿಮ್ಮ ಮಗುವಿನ ನೆನಪಿನ ಶಕ್ತಿ, ಮೆದುಳಿನ ಬೆಳವಣಿಗೆ ಅದ್ಭುತವಾಗಿರುತ್ತದೆ. ಆ ಮಗು ಎಂಥ ಕಠಿಣ ಪ್ರಶ್ನೆಗೂ ಉತ್ತರಿಸುವ ಸಾಮರ್ಥ್ಯವನ್ನು ಹೊಂದುತ್ತದೆ. ಒಮ್ಮೆ ಓದಿದ್ದನ್ನ ಥಟ್ ಅಂತಾ ನೆನಪಿನಲ್ಲಿಟ್ಟುಕೊಳ್ಳುವ ಶಕ್ತಿ ಬರುತ್ತದೆ.

ಕೆಲವರು ವಾರಕ್ಕೆ ಮೂರು ಬಾರಿಯಾದ್ರೂ ತಿಮರೆ ತಂಬುಳಿ ಅಥವಾ ಚಟ್ನಿ ಮಾಡಿ ಸೇವಿಸುತ್ತಾರೆ. ಆಯುರ್ವೇದದಲ್ಲಿ ಬ್ರಾಹ್ಮಿ ಎಲೆಗೆ ಹೆಚ್ಚು ಮಹತ್ವ ನೀಡಲಾಗಿದೆ. ಯಾಕಂದ್ರೆ ಇದು ಏಕಾಗೃತೆಯನ್ನು ಹೆಚ್ಚಿಸುತ್ತದೆ. ಇದರ ಸೇವನೆಯಿಂದ ಬುದ್ಧಿ ಮಾಂದ್ಯತೆ ಬರುವುದಿಲ್ಲ. ಕೆಲವರಿಗೆ ಬಾದಾಮಿ ತಿನ್ನಲು ಆಗುವುದಿಲ್ಲ. ಅಂಥವರು ಪ್ರತಿದಿನ ಒಂದು ಬ್ರಾಹ್ಮಿ ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ. ಇದು ಬಾದಾಮಿಗಿಂತಲೂ ಹೆಚ್ಚು ವೇಗವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ. ನೆನಪಿನ ಶಕ್ತಿ ಉತ್ತಮವಾಗಿರಿಸುತ್ತದೆ.

ಊಟ ಮಾಡುವಾಗ ನೀರು ಕುಡಿಯಬಹುದಾ..? ಇಲ್ಲವಾ..?

ಇಷ್ಟೇ ಅಲ್ಲದೇ, ಬ್ರಾಹ್ಮಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬಿಪಿ ಇದ್ದರೆ ಅದು ಕೂಡ ಕಂಟ್ರೋಲಿನಲ್ಲಿರಿಸುತ್ತದೆ. ಲಿವರನ್ನ ಆರೋಗ್ಯವಾಗಿಡಲು ಕೂಡ ಬ್ರಾಹ್ಮಿ ಸಹಾಯ ಮಾಡುತ್ತದೆ. ಅಲ್ಲದೇ ತೂಕ ಇಳಿಸಲು ಬಯಸುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬ್ರಾಹ್ಮಿ ಎಲೆಯನ್ನು ತಿನ್ನಿ. ಇಲ್ಲವಾದಲ್ಲಿ ವಾರದಲ್ಲಿ ಮೂರು ಬಾರಿಯಾದ್ರೂ ಬ್ರಾಹ್ಮಿ ಎಲೆಯ ತಂಬುಳಿ ಅಥವಾ ಚಟ್ನಿ ಮಾಡಿ ಸೇವಿಸಿ.

ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದೇ ಒಂದು ಬ್ರಾಹ್ಮಿ ಎಲೆಯನ್ನ ಸೇವಿಸಿದ್ರೆ, ನಿಮಗೆ ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಬಿಪಿ, ಶುಗರ್, ಕ್ಯಾನ್ಸರ್‌, ಮರೆವು, ಹೃದಯದ ಸಮಮಸ್ಯೆ ಇತ್ಯಾದಿ ಸಮಸ್ಯೆಗಳಿಗೆ ಈ ಎಲೆ ಪರಿಹಾರ ಕೊಡುತ್ತದೆ.

- Advertisement -

Latest Posts

Don't Miss