Friday, April 18, 2025

Latest Posts

Bigg Boss News: ಧನರಾಜ್ ಎಲಿಮಿನೇಟ್ ಆದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಕಿರಿಕ್ ಕೀರ್ತಿ

- Advertisement -

Bigg Boss News: ಬಿಗ್‌ಬಾಸ್ ಕನ್ನಡ ಸೀಸನ್‌11ರಲ್ಲಿ ಈ ವಾರ ಇಬ್ಬರು ಎಲಿಮಿನೇಟ್ ಆಗಿದ್ದು, ಗೌತಮಿ ಜಾಧವ್‌ ಮತ್ತು ಧನರಾಜ್ ಮನೆಯಿಂದ ಹೊರನಡೆದಿದ್ದಾರೆ.

ಹಲವರು ಧನರಾಜ್‌ ಮನೆಯಲ್ಲಿ ಇರಬೇಕಿತ್ತು, ಭವ್ಯನನ್ನು ಸುಮ್ಮನೆ ಫಿನಾಲೆ ವೀಕ್‌ಗೆ ಕಳುಹಿಸಿದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಧನರಾಜ್ ಉತ್ತಮ ಪರ್ಫಾಮೆನ್ಸ್ ನೀಡಿದ್ದು, ಭವ್ಯ ಬರೀ ಮೋಸದಾಟವಾಡಿದ್ದಾಳೆಂದು ಆರೋಪಿಸಿದ್ದಾರೆ.

ಈ ಮಧ್ಯೆ ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಿರೂಪಕ ಕಿರಿಕ್ ಕೀರ್ತಿ, ಧನರಾಜ್‌ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.  ಈ ಸೀಸನ್‌ನ ಬಿಗ್‌ಬಾಸ್‌ನಲ್ಲಿ ನಂಗೆ ತುಂಬಾ ಇಷ್ಟವಾದ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬ ಧನರಾಜ್ ಆಚಾರ್… ಸಹೋದರ ತನಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡ… ತನ್ನ ಶಕ್ತಿ‌ಮೀರಿ ಟಾಸ್ಕ್ ಆಡಿದ್ದ… ಪ್ರತೀ ಕ್ಷಣ ಮನರಂಜನೆ ಕೊಟ್ಟಿದ್ದಾನೆ…ನಕ್ಕಿದ್ದಾನೆ…ನಗಿಸಿದ್ದಾನೆ… ಮನಸಾರೆ ಆಟವಾಡಿದ್ದಾನೆ… ತನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ನಡೆದುಕೊಂಡಿದ್ದಾನೆ… ಸ್ನೇಹ ಉಳಿಸಿಕೊಂಡಿದ್ದಾನೆ… ಮನಸ್ಸಿಗೆ ಅನಿಸಿದ್ದನ್ನು ಮುಖದ ಮೇಲೆ ಹೇಳಿದ್ದಾನೆ… ಕಪ್ ಗೆಲ್ಲದಿದ್ದರೂ ಗೆದ್ದು ಬೀಗಿದ್ದಾನೆ… ಕಪ್ ಗೆಲ್ಲೋ ಅಷ್ಟು ಆಡಿದ್ದಾನಾ ಗೊತ್ತಿಲ್ಲ… ಆದ್ರೆ ಫಿನಾಲೆ ವಾರದಲ್ಲಿರೋ ಎಲ್ಲಾ ಯೋಗ್ಯತೆ ಇತ್ತು ಧನ್‌ರಾಜ್‌ಗೆ…ಫಿನಾಲೆಗೆ ವಾರ ಬಾಕಿ‌ ಇದ್ದಾಗ ಮನೆಯಿಂದ ಹೊರಹೋಗೋ ಸಂಕಟ ಸಾಮಾನ್ಯವಾದುದ್ದಲ್ಲ‌… ಬೇಜಾರಗಬೇಡ ತಮ್ಮ… ನಿನ್ನ ತಾಕತ್ತು ಇನ್ನೂ ಇದೆ‌‌… ನೀನು ಸೋತಿಲ್ಲ… ಸೋಲಲ್ಲ…ಮತ್ಯಾವತ್ತೂ ಕಣ್ಣೀರು ಹಾಕಬೇಡ.. ಭವಿಷ್ಯ ಉಜ್ವಲವಾಗಿರಲಿ…ಬದುಕು ಬಂಗಾರವಾಗಲಿ… U gave ur best… ಸಕಲವೂ ಸನ್ಮಂಗಳವಾಗಲಿ.. ಎಂದು ಕಿರಿಕ್ ಕೀರ್ತಿ ಪೋಸ್ಟ್ ಹಾಾಕಿದ್ದಾರೆ.

- Advertisement -

Latest Posts

Don't Miss