ಹುಬ್ಬಳ್ಳಿ : ಲೋಕಸಭೆಯಲ್ಲಿ ದೇಶದಲ್ಲಿ ಕಳೆದ ಬಾರಿಗಿಂತ ಈ ಬಾರಿಗೆ ಹೆಚ್ಚಿಗೆ ಸ್ಥಾನ ಬರುತ್ತದೆ. ಸೂರ್ಯ ಚಂದ್ರಿರುವಷ್ಟೇ ಸತ್ಯ ಮೋದಿ ಪ್ರಧಾನಿ ಆಗ್ತಾರೆ ಅಂತ ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರೇಂದ್ರ ಪಾಟೀಲ ಅವರನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಿ ಕಾಂಗ್ರೆಸ್ ವಿಶ್ವಾಸ ದ್ರೋಹ ಮಾಡಿದೆ ಹೀಗಾಗಿ ವೀರಶೈವರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಲ್ಲ...
ಬೆಂಗಳೂರು: ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ಬೆಲೆ ಏರಿಕೆಯ
ಬಿಸಿ ತಟ್ಟಲಿದೆ. ಜೂನ್ 1ನೇ ತಾರೀಖಿನಿಂದಲೇ ಪ್ರತಿ ಯೂನಿಟ್ ವಿದ್ಯುತ್ ಗೆ 45ಪೈಸೆಯಿಂದ-50 ಪೈಸೆ
ಹೆಚ್ಚಳವಾಗೋ ಸಾಧ್ಯತೆಯಿದೆ.
ರಾಜ್ಯದಲ್ಲಿನ ಎಲ್ಲಾ ಎಸ್ಕಾಂ
ಮತ್ತು ಇತರೆ ವಿದ್ಯುತ್ ಕಂಪನಿಗಳು ಕೆಇಆರ್ ಸಿ ಗೆ (ಕರ್ನಾಟಕ ಎಲೆಕ್ಟ್ರಾನಿಕ್ ರೆಗ್ಯುಲೇಟರಿ
ಕಮಿಷನ್) ಬೆಲೆ
ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರತಿ ವರ್ಷ ಏಪ್ರಿಲ್ 1ರಂದು ವಿದ್ಯುತ್...
ಮಂಗಳೂರು: ಇಲ್ಲಿನ ಅನಂತ ಪದ್ಮನಾಭ
ಸುಬ್ರಹ್ಮಣ್ಯ ದೇವಸ್ಥಾದಲ್ಲಿ ನಿನ್ನೆ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಇಲ್ಲಿನ ನೀರುಮಾರ್ಗ
ಎಂಬಲ್ಲಿ ಇರುವ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿತ್ತು. ಈ ವೇಳೆ ದಿಢೀರನೆ ನವಿಲೊಂದು
ದೇವಸ್ಥಾನದ ಆವರಣದೊಳಕ್ಕೆ ಹಾರಿ ಬಂತು. ದೇಗುಲದ ಧ್ವಜಸ್ತಂಭಕ್ಕೆ ನಿನ್ನೆ ತೈಲದಿವಾಸ ಪೂಜೆ
ನಡೆಯುತ್ತಿದ್ದ ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ಪ್ರತ್ಯಕ್ಷವಾದ ನವಿಲು ಜೋರಾಗಿ ಕೂಗತೊಡಗಿತು.
ದೇವರ ವಿಗ್ರಹವಿದ್ದ ಗರ್ಭಗುಡಿಯೆದುರು ನಿಂತುಬಿಟ್ಟಿತು. ಈ...
ಕಲಬುರಗಿ: ಸಿಎಂ ಕುಮಾರಸ್ವಾಮಿ ಎದುರೇ ಗಾಣಗಾಪುರದ ಅರ್ಚಕರು ನಿಖಿಲ್ ಎಲ್ಲಿದ್ದೀಯಪ್ಪಾ ಎಂದ ಪ್ರಸಂಗ ನಡೆದಿದೆ. ಈ ಮಾತು ಕೇಳುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಕೆಲಕಾಲ ತಬ್ಬಿಬ್ಬಾಗಿಬಿಟ್ರು.
ಕಲಬುರಗಿಯ ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ
ದೇವಸ್ಥಾನಕ್ಕೆ ಸಿಎಂ ತೆರಳಿದ್ರು. ಈ ವೇಳೆ ಪೂಜೆ ಸಿದ್ಧತೆ ಮಾಡಿಕೊಳ್ತಿದ್ದ ಅರ್ಚಕ ದತ್ತಾತ್ರೇಯ
ಇದ್ದಕ್ಕಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದುಬಿಟ್ಟರು.
ಇದನ್ನ ಕೇಳಿದ ಕೂಡಲೇ ಸಿಎಂ ಒಂದು ಕ್ಷಣ...
ತುಮಕೂರು: ಹಾಲು ಉತ್ಪಾದಕರ ಸಂಘದ ರಾಜಕಾರಣಕ್ಕೆ ಸುಮಾರು 200 ಲೀಟರ್ ಹಾಲು ಮಣ್ಣುಪಾಲಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದ ಹಾಲು ಡೈರಿಯಲ್ಲಿ ಸಿಬ್ಬಂದಿ ತಡವಾಗಿ ಬಂದದ್ದೇ ಈ ಘಟನೆಗೆ ಕಾರಣವಾಗಿದೆ. ಅಂದಹಾಗೆ ಈ ಹಾಲು ಉತ್ಪಾದಕರ ಸಂಘದಲ್ಲಿ ಮೂವರು ಸಿಬ್ಬಂದಿ ಕೆಲಸ ಮಾಡುತ್ತಿದ್ರು. ಆದ್ರೆ ಇಂದು ಓರ್ವ ಸಿಬ್ಬಂದಿ...
ಮುಂಬೈ: ಸ್ಪೈಸ್ ಜೆಟ್ ನ 2 ಬೋಯಿಂಗ್ ಪ್ಯಾಸೆಂಜರ್ ವಿಮಾನಗಳಲ್ಲಿ ಇಂದು ಹಾರಾಟದ ವೇಳೆಯೇ ತಾಂತ್ರಿಕ ದೋಷ ಕಂಡು ಬಂದಿದೆ.
ಬೆಂಗಳೂರಿನಿಂದ
ದೆಹಲಿಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸ್ಪೈಸ್ ಜೆಟ್ ನ ಎಸ್ ಜಿ 8720 ವಿಮಾನ ಹಾರಾಟದ ವೇಳೆ ಎಲ್ಲವೂ ಸರಿಯಿತ್ತು. ಆದರೆ ವಿಮಾನ
ಟೇಕಾಫ್ ವೇಳೆ ತಾಂತ್ರಿಕ ದೋಷ ಕಂಡುಬಂದದ್ದನ್ನು ಗಮಿನಿಸಿದ ಪೈಲಟ್ ಎಟಿಸಿ(ಏರ್...
ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರಕ್ಕೆ ಬಂದಿದ್ದ ಚಾಲೆಂಚಿಂಗ್ ಸ್ಟಾರ್ ದರ್ಶನ್ ಮತ್ತು ಯಶ್ ವಿರುದ್ಧ ಸದಾ ಕಿಡಿ ಕಾರುತ್ತಿದ್ದ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಇದೀಗ ಮತ್ತೆ ಟೀಕೆ ಮಾಡಿದ್ದಾರೆ.
ಮಂಡ್ಯದಲ್ಲಿ
ಮಾತನಾಡಿದ ಶಾಸಕ, ಇಲ್ಲಿದೆ ಬಂದ ಸಿನಿಮಾ ಸ್ಟಾರ್ ಗಳು ಬಿಟ್ಟಿದ್ದು ಬರೀ ಗಾಳಿಪಟ ಹವಾ. ಈಗ ಅವರು
ಎಲ್ಲಿಗೆ ಹೋಗಿದ್ದಾರೆ?...
ನವದೆಹಲಿ: ಪಾಕಿಸ್ತಾನ ಕಡೆಯಿಂದ ಭಾರತೀಯಗಡಿ ಮೀರಿ ದಾರಿತಪ್ಪಿ ಬಂದ ಸರಕು ಸಾಗಾಣಿಕಾ ವಿಮಾನವನ್ನು ಭಾರತೀಯ ಸೇನಾಪಡೆ ತುರ್ತು ಲ್ಯಾಂಡಿಂಗ್ ಮಾಡಿಸಿದೆ.
ನಿನ್ನೆ ಮಧ್ಯಹ್ನ ಜಾರ್ಜಿಯಾದ ಆಂಟೊನೋವ್ ಎನ್-12 ಸರಕು ವಿಮಾನವು ಏಕಾಏಕಿ ಪಾಕಿಸ್ತಾನದ ಕರಾಚಿಯಿಂದ ಗುಜರಾತ್ ಮೂಲಕ ಭಾರತೀಯ ಗಡಿ ಪ್ರವೇಶಿಸಿದೆ. ಇದನ್ನು ಗಮನಿಸಿದ ಭಾರತೀಯ ವಾಯುಪಡೆ ಕೂಡಲೇ 2 ಸುಖೋಯ್-30 ಯುದ್ಧ ವಿಮಾನಗಳಲ್ಲಿ ಬೆನ್ನಟ್ಟಿದವು....
ಕಲಬುರಗಿ: ಮೈತ್ರಿಯಿಂದ ಪ್ಲಸ್ ಗಿಂತ ಮೈನಸ್ ಹೆಚ್ಚಾಗ್ತಿದೆ ಅನ್ನೋ ಕೆ.ಆರ್
ಪೇಟೆ ಶಾಸಕ ನಾರಾಯಣಗೌಡ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ನಾವೇನು ನಾರಾಯಣಗೌಡನನ್ನ ಕೇಳಿಕೊಂಡು ಮೈತ್ರಿ ಮಾಡಿಕೊಂಡಿಲ್ಲ. ಅವನ ಮಾತಿಗೆಲ್ಲಾ ನಾವು ಬೆಲೆ ಕೊಡೋಕ್ಕಾಗಲ್ಲಾ ರೀ. ಹೈಕಮಾಂಡ್ ತೀರ್ಮಾನದಂತೆ ಸರ್ಕಾರ ರಚಿಸಿದ್ದೀವಿ ಅಂತ ಪ್ರತಿಕ್ರಿಯಿಸಿದ್ರು.
ಇನ್ನು ಪದೇ ಪದೇ
ಮೈತ್ರಿ...
ಹುಬ್ಬಳ್ಳಿ: ದೇವೇಗೌಡರ ಕುಟುಂಬದ ಕಣ್ಣೀರು
ಡಿಕೆಶಿಗೆ ಶಿಫ್ಟ್ ಆಗಿದೆ. ಕುಂದಗೋಳಕ್ಕೆ ಬಂದು ಕಣ್ಣೀರು ಹಾಕ್ತಿದ್ದಾರೆ, ಸಹವಾಸ ದೋಷದಿಂದ
ಡಿಕೆಶಿಗೆ ಕಣ್ಣೀರು ಬರ್ತಿದೆ ಅಂತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.
ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ವರೂರ ಗ್ರಾಮದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ
ಮಾತನಾಡಿದ ಶೆಟ್ಟರ್, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಗಂಟು-ಮೂಟೆ ಕಟ್ಟುವಂತೆ ಕಟ್ಟಿ
ಮನೆಗೆ ಕಳುಹಿಸಬೇಕಿದೆ. ಈ...