Friday, December 5, 2025

ರಾಜಕೀಯ

‘ನೋ ಡೌಟ್, ಕುಮಾರಸ್ವಾಮಿಯವ್ರೇ ಸಿಎಂ ಆಗಿರ್ತಾರೆ’ – ಡಿಸಿಎಂ

ಬೆಂಗಳೂರು: ಸರ್ಕಾರ ಬಿದ್ದು ಹೋಗಲಿದೆ ಅನ್ನೋದೆಲ್ಲಾ ಸುಳ್ಳು, ನಮ್ಮ ಸರ್ಕಾರ ಸುಭದ್ರವಾಗಿರುತ್ತೆ ಅಂತ ಡಿಸಿಎಂ ಡಾ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಿಎಂ,ಡಿಸಿಎಂ,ಸಚಿವರು ಜಂಟಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಫಲಿತಾಂಶ ಬಂದ ಮೇಲೆ  ಸರ್ಕಾರ ಬಿದ್ದು ಹೋಗಲಿದೆ ಎಂಬ ಹೇಳಿಕೆ ಕೇಳಿಬರುತ್ತಿದೆ. ಸಿಎಂ ಆಡಳಿತದ ಬಗ್ಗೆ ಯಾವುದೇ ಅನುಮಾನ ಬೇಡ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ...

ಮಂಡ್ಯದಲ್ಲಿ ಮತ್ತೆ ಧೂಳೆಬ್ಬಿಸಲು ಬರುತ್ತಿದ್ದಾರೆ ಯಶ್-ಡಿ-ಬಾಸ್…!

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಮೇ 29ರಂದು ಮಂಡ್ಯದಲ್ಲಿ ವಿಜಯೋತ್ಸವ ಆಚರಿಸಲಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಮಾಹಿತಿ ನೀಡಿದ್ರು. ಮೇ 29 ರಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸೋ ಮೂಲಕ ಮಂಡ್ಯ ಜನತೆಗೆ ಧನ್ಯವಾದ ಹೇಳ್ತೀನಿ. ಅವತ್ತೇ ಅಂಬರೀಶ್ ಹುಟ್ಟು ಹಬ್ಬ ಇರೋದ್ರಿಂದ...

‘ಕಾಂಗ್ರೆಸ್ ನವರು ಜೆಡಿಎಸ್ ಗೆ, ಜೆಡಿಎಸ್ ನವರು ಕಾಂಗ್ರೆಸ್ ಗೆ ಮತಹಾಕಿಲ್ಲ’- ಮಾಜಿ ಸಚಿವ ಆಂಜನೇಯ

ಚಿತ್ರದುರ್ಗ: ಮೈತ್ರಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಹೊಡೆತ ಬಿದ್ದಿದೆ ಅಂತ ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಆಂಜನೇಯ, ಮೈತ್ರಿ ಸರ್ಕಾರ ನಡೆಸಲು ಸೀಮಿತವಾಗಿ ಚುನಾವಣೆ ಪ್ರತ್ಯೇಕವಾಗಿ ಮಾಡಬೇಕಿತ್ತು. ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಹೊಡೆತ ಬಿದ್ದಿಲ್ಲ. ಜೆಡಿಎಸ್ ಪಕ್ಷಕ್ಕೂ ಮೈತ್ರಿ ಹೊಡೆತ ಬಿದ್ದಿದೆ. ಚುನಾವಣೆಯಲ್ಲಿ ಮೈತ್ರಿ ಬೇಕಿರಲಿಲ್ಲ ಅಂತ ಆಂಜನೇಯ ಅಭಿಪ್ರಾಯ...

ದೇವೇಗೌಡರ ಮುಂದೆ ಕಣ್ಣೀರಿಟ್ಟ ಸೊಸೆ ಭವಾನಿ ರೇವಣ್ಣ

ಬೆಂಗಳೂರು: ತುಮಕೂರು ಲೋಕಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿರೋ ಮಾಜಿ ಪ್ರಧಾನಿ ದೇವೇಗೌಡರನ್ನು ಸೊಸೆ ಭವಾನಿ ರೇವಣ್ಣ ಭೇಟಿ ಮಾಡಿ ಕಣ್ಣೀರಿಟ್ಟಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ಎಚ್ಡಿಡಿ ನಿವಾಸದಲ್ಲಿ ಮಾವ ದೇವೇಗೌಡರನ್ನು ಪತಿ ರೇವಣ್ಣ ಜೊತೆ ಭೇಟಿ ಮಾಡಿದ ಭವಾನಿ ರೇವಣ್ಣ ನಾವು ತುಮಕೂರಿನಲ್ಲಿ ನಿಮ್ಮ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಆದ್ರೆ ಹಾಸನದಲ್ಲಿ  ನಾವು ನಿರೀಕ್ಷೆ ಮಾಡಿದಂತೆ  ಫಲಿತಾಂಶ ಬಂದಿದೆ....

‘ನಾಳೆ ಸಂಜೆವರೆಗೆ ಮಾತ್ರ ಕುಮಾರಸ್ವಾಮಿ ಸಿಎಂ- ಹೊಸ ಸರ್ಕಾರಕ್ಕೆ ನಾಳೆ ವೇದಿಕೆ ಸಜ್ಜು’- ಡಿವಿಎಸ್

ಬೆಂಗಳೂರು: ಫಲಿತಾಂಶ ಪ್ರಕಟವಾದ ಬಳಿಕ ಯಾವ ಯಾವ ರಾಜ್ಯಗಳಲ್ಲಿ ಸಿಎಂ ಗಳು ಅಧಿಕಾರ ಕಳೆದುಕೊಂಡು ತಿರುಗಾಡುತ್ತಿರುತ್ತಾರೆ ಅಂತ  ಸದಾನಂದಗೌಡ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸದಾನಂದ ಗೌಡ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು- ಮಾಜಿ ಪ್ರಧಾನಿ ದೇವೇಗೌಡ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸದಾನಂದಗೌಡ ಕಿಡಿ ಕಾರಿದ್ರು. ಚಂದ್ರಬಾಬು ನಾಯ್ಡುರವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅವರು ಮತ್ತು ಸಿಎಂ ಕುಮಾರಸ್ವಾಮಿ ಇಬ್ಬರದ್ದೂ...

ಸಮನ್ವಯ ತರಲು ಸಿದ್ದು ವಿಫಲ- ಚಾನ್ಸ್ ಕೊಟ್ರೆ ನಾನೇ ನಿಭಾಯಿಸ್ತೀನಿ- ವಿಶ್ವನಾಥ್

ಕೋಲಾರ: ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದಕ್ಕೆ ರೋಷನ್ ಬೇಗ್ ಆರೋಪವೇ ಸಾಕ್ಷಿ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಆರೋಪಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ವಿಶ್ವನಾಥ್, ಸಮನ್ವಯ ಸಮಿತಿ ಯಾರಿಗೂ ವೈಯಕ್ತಿಕ ಅಲ್ಲ. ಪಾಲುದಾರ ಪಕ್ಷಗಳಲ್ಲಿ ಸಮನ್ವಯ ಮಾಡಲು ಇರುವ ಸಮಿತಿ. ಆದ್ರೆ ಈ ಕಾರ್ಯ ನಿಭಾಯಿಸಲು ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ...

‘ಸಿದ್ದುಗೆ ದುರಅಹಂಕಾರ- ಕಾಂಗ್ರೆಸ್ ದುಸ್ಥಿತಿಗೆ ಇವರೇ ಕಾರಣ’- ರೋಷನ್ ಬೇಗ್

ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಯಂತೆ ಕಾಂಗ್ರೆಸ್ ಅಲ್ಪ ಸ್ಥಾನ ಗೆದ್ದರೆ ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇರ ಕಾರಣ ಅಂತ ಕಾಂಗ್ರೆಸ್ ಹಿರಿಯ ಮುಖಂಡ ರೋಷನ್ ಬೇಗ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೋಷನ್ ಬೇಗ್, ರಾಜ್ಯದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ದಿನೇಶ್...

ಎಕ್ಸಿಟ್ ಪೋಲ್ ನಲ್ಲಿ ನಂಬಿಕೆ ಇಲ್ಲ- ಬಿಜೆಪಿಗೆ 18 ಸ್ಥಾನ ಸಾಧ್ಯವೇ ಇಲ್ಲ- ಡಿಸಿಎಂ.

ಬೆಂಗಳೂರು: ಚುನಾವಣೋತ್ತರ ನಡೆದ ಎಕ್ಸಿಟ್ ಪೋಲ್ ವರದಿಯಲ್ಲಿ ನನಗೆ ವಿಶ್ವಾಸವಿಲ್ಲ ಅಂತ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶ ಕುರಿತಾಗಿ ರಾಜ್ಯದಲ್ಲಿ ಗ್ರೌಂಡ್ ರಿಯಾಲಿಟಿ ಬೇರೆ ರೀತಿಯಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ 20ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ನಮ್ಮ ಲೆಕ್ಕಾಚಾರ,ವಾತಾವರಣ ಕೂಡ ಇದಕ್ಕೆ ಪೂರಕವಾಗಿದೆ. ಚುನಾವಣಾ ಪ್ರಚಾರದ ಆಧಾರದ ಮೇಲೆ ಇದನ್ನು ಹೇಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಬಿಜೆಪಿಗೆ 18 ಸೀಟು...

ದೇವರ ಮೊರೆ ಹೋದ ಸುಮಲತಾ ಅಭಿಮಾನಿಗಳು

ಮಂಡ್ಯ:  ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿರೋ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿಗಾಗಿ ಅಭಿಮಾನಿಗಳು ದೇವರ ಮೊರೆಹೋಗಿದ್ದಾರೆ. ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿ ಬಳಿಯ ಈಶ್ವರ ಪಾರ್ವತಿ ದೇವಿ ದೇವಸ್ಥಾನದಲ್ಲಿ ಅಂಬರೀಶ್ ಆಪ್ತ ಎಸ್.ಎಲ್.ಲಿಂಗರಾಜು ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯ್ತು. ಈ ವೇಳೆ ಸುಮಲತಾ ಬೆಂಬಲಿಗರು, ಅಭಿಮಾನಿಗಳು ಭಾಗಿಯಾಗಿದ್ದರು. ಮೇ 23ರಂದು ಹೊರಬೀಳಲಿರೋ ಚುನಾವಣಾ ಫಲಿತಾಂಶದಲ್ಲಿ ಸುಮಲತಾ ಅಂಬರೀಶ್ ಜಯಗಳಿಸಲಿ...

ಮೈತ್ರಿಭಂಗವಾಗೋ ಯಾವುದೇ ಹೇಳಿಕೆ ನೀಡಬೇಡಿ- ರಾಹುಲ್ ಖಡಕ್ ಎಚ್ಚರಿಕೆ

ದೆಹಲಿ: ಯಾವುದೇ ಕಾರಣಕ್ಕೂ ಮೈತ್ರಿಗೆ ಧಕ್ಕೆಯಾಗೋ ರೀತಿ ಹೇಳಿಕೆ ನೀಡಬೇಡಿ ಅಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಕೈ ನಾಯಕರಿಗೆ ಸಲಹೆ ನೀಡಿದ್ದಾರೆ. ದೆಹಲಿಯಲ್ಲಿ ನಿನ್ನೆರಾಹುಲ್ ಗಾಂಧಿ ಜೊತೆ ನಿನ್ನೆ ನಡೆದ ರಾಜ್ಯ ಕಾಂಗ್ರೆಸ್ ನಾಯಕರ ಸಮಾಲೋಚನಾ ಸಭೆಯಲ್ಲಿ ಸಲಹೆ ನೀಡಿರುವ ಯುವರಾಜ ರಾಹುಲ್ ಗಾಂಧಿ ಮೈತ್ರಿಭಂಗಕ್ಕೆ ಕಾರಣವಾಗೋ ಹೇಳಿಕೆಗಳನ್ನು ಯಾರೂ ನೀಡಬಾರದು. ಇಷ್ಟಬಂದಂತೆ ಹೇಳಿಕೆ ನೀಡೋದನ್ನ...
- Advertisement -spot_img

Latest News

ಅಂದು ಭಗವದ್ಗೀತೆ ನಿಷೇಧಿಸಿದ್ದ ರಷ್ಯಾ – ಇಂದು ಅದನ್ನೇ ಗೌರವಿಸಿದ ಪುಟಿನ್!

ಕಾಲ ಬದಲಾಗುತ್ತಾ ಹೋಗುತ್ತಲೆ, ಸಂಬಂಧಗಳ ಸಮೀಕರಣವೂ ಹೇಗೆ ತಲೆಕೆಳಗಾಗುತ್ತದೆ ಎಂಬುದಕ್ಕೆ ಭಾರತ–ರಷ್ಯಾ ಸಂಬಂಧಗಳು ಹೊಸ ಉದಾಹರಣೆ. ಯಾವಾಗಲೊ ರಷ್ಯಾ ಭಗವದ್ಗೀತೆಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಲೇಬಲ್...
- Advertisement -spot_img